ETV Bharat / state

ತುಮಕೂರು: ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಪಿಡಿಒಗಳ ದರ್ಪ ದೌಲತ್ತಿನ ವಿಚಾರ..

ಕೆಡಿಪಿ ಸಭೆಯಲ್ಲಿ ಪಿಡಿಒಗಳ ದರ್ಪ ದೌಲತ್ತಿನ ಬಗ್ಗೆ ಆರಗ ಜ್ಞಾನೇಂದ್ರ ಅವರೊಂದಿಗೆ ಶಾಸಕ ಜಯರಂ ಚರ್ಚೆ ನಡೆಸಿದರು.

author img

By

Published : Oct 1, 2022, 6:45 PM IST

Kn_tmk_01_
ಕೆಡಿಪಿ ಸಭೆ

ತುಮಕೂರು: ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಿಡಿಒಗಳ ದರ್ಪ ದೌಲತ್ತಿನ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಪಿಡಿಒಗಳ ವರ್ತನೆ ಕುರಿತು ಮಾತನಾಡಿ, ಪಿಡಿಒಗಳು ಇಒಗಳನ್ನ ಕಂಟ್ರೋಲ್ ಮಾಡ್ತಿದ್ದಾರೆ.

ಆದರೆ, ಇಒಗಳು ಯಾರು ಈ ಬಗ್ಗೆ ಮಾತನಾಡುವುದಿಲ್ಲ, ಪಿಡಿಒಗಳು ಹೇಳಿದಂತೆ ಇಒಗಳು ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಧ್ವನಿಗೂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕೆಲ ಪಿಡಿಒಗಳು ಆ ರೀತಿ ಮಾಡುತ್ತಾರೆ. ಪಂಚಾಯ್ತಿ ಅಧ್ಯಕ್ಷರು ರಿಸರ್ವೇಷನ್​ನಲ್ಲಿ ಬಂದ್ರೆ ಅವರನ್ನ ಕೇಳೋರೆ ಗತಿ ಇರಲ್ಲ.

ಅಧ್ಯಕ್ಷರು ಬೆಲ್ ಮಾಡಿದಾಗ ಪಿಡಿಒ ಅಧ್ಯಕ್ಷರ ಚೇಂಬರ್​ಗೆ ಹೋಗ್ಬೇಕೋ ಬೇಡ್ವೋ ಅನ್ನೋದರ ಬಗ್ಗೆ ಚರ್ಚೆಯಲ್ಲಿ, ಬೆಲ್​ ಮಾಡಿದಾಗ ನಾನ್ಯಾಕೆ ಹೋಗ್ಬೇಕು ಅಂತ ಪಿಡಿಒ ಹೇಳ್ತಾರಂತೆ, ಈ ಬಗ್ಗೆ ಒಬ್ಬ ಎಸ್​​​ಸಿ ಮಹಿಳಾ ಗ್ರಾ.ಪಂ ಅಧ್ಯಕ್ಷೆ ನನ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಪಿಡಿಒ ಕರೆದರೆ ಬರಲ್ಲ ಅಂತೇಳಿ, ಮೊದಲಿಗೆ ನಾನೇ ಪಿಡಿಒ ಚೇಂಬರ್​ಗೆ ಹೋಗ್ತಿದ್ದೆ, ಎಲ್ಲರೂ ಹೇಳಿದ್ರು ನೀವೇಕೆ ಅವರ ಚೇಂಬರ್ ಗೆ ಹೋಗ್ತಿಯಾ ನೀನೇ ಅವರನ್ನ ಕರೆಸಿಕೋ ಅಂತ ಹೇಳಿದ್ರು.

ಆದರೆ, ಈಗ ಬೆಲ್ ಮಾಡಿದ್ರೂ ಪಿಡಿಒ ಬರಲ್ಲ. ಸಿಎಂ ಬೊಮ್ಮಾಯಿ ಬೆಲ್ ಮಾಡಿದರೆ ಚೀಪ್ ಸೆಕ್ರೇಟರಿ ಚೇಂಬರ್​ಗೆ ಹೋಗ್ತಾರೆ. ಒಬ್ಬ ಚೇರ್ಮನ್​ಗೆ ಗೌರವ ಕೊಡಲು ಬಾರದ ಪಿಡಿಒಗಳ ತಲೆಯಲ್ಲಿ ಏನೋ ತುಂಬಿಕೊಂಡಿದೆ. ಇವರು ಪೂರ್ತಿ ತಿಳಿದು ಕೊಂಡಿಲ್ಲ, ಇವರು ಅರ್ಧಂಬರ್ಧ ತಿಳಿದುಕೊಂಡಿದ್ದಾರೆ. ಕಾನೂನು ನೆಪ ಹೇಳಿ ಕೆಲಸ ಮಾಡದೇ ಸುಮ್ಮನೆ ಕೂರ್ತಾರೆ ಎಂದು ಗೃಹ ಸಚಿವರು ಹೇಳಿದರು.

ಇನ್ನು ಮುಂದುವರಿದು ಶಾಸಕ ಮಸಾಲ ಜಯರಾಮ್ ಮಾತನಾಡಿ, ಸಂಜೆ ಆರು ಗಂಟೆ ಆದಮೇಲೆ ಸೆಕ್ರೆಟರಿ, ಬಿಲ್ ಕಲೆಕ್ಟರ್​ನ ಅಧ್ಯಕ್ಷರನ್ನ ಕೂರಿಸಿಕೊಂಡು ರೆಸಾರ್ಟ್​ನಲ್ಲಿ ಮಜಾ ಮಾಡ್ತಾರೆ, ಇನೋವಾ ಕಾರಿನಲ್ಲಿ ಓಡಾಡ್ತಾರೆ ಎಂದು ಗಂಭೀರ ಆರೋಪ ಮಾಡಿದರು. ಈ ವೇಳೆ ತುರುವೇಕೆರೆ ಇಒ ಸತೀಶ್ ಕುಮಾರ್​ಗೆ ಸಚಿವ ಆರಗ ಜ್ಞಾನೇಂದ್ರ ತರಾಟೆ ತೆಗೆದುಕೊಂಡರು. ಪಿಡಿಒಗಳ ಮೇಲೆ ಕ್ರಮ ತೆಗೆದು ಕೊಳ್ಳುವಂತೆ ಇಒಗೆ ಫುಲ್ ಕ್ಲಾಸ್ ತೆಗೆದುಕೊಂಡ್ರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸಂಪೂರ್ಣ ಸಾಯಬಾರದು ಎಂಬ ಅಪೇಕ್ಷೆ ನಮ್ಮದು.. ಜೋಶಿ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.