ತುಮಕೂರು: ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಪಾವಗಡ, ಮಧುಗಿರಿ ತಾಲೂಕು ಹಾಗೂ ಶಿರಾ ಸೇರಿದಂತೆ ಮೂರು ತಾಲೂಕುಗಳಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು ಶಿರಾ ಪಟ್ಟಣದಲ್ಲಿ ಎರಡು ಪ್ರಕರಣಗಳು ಪಾಸಿಟಿವ್ ಕಂಡು ಬಂದಿರೋದ್ರಿಂದ ಶಿರಾ ತಾಲೂಕನ್ನು ಬಹಳ ನಿಗಾವಹಿಸಿದ್ದೇವೆ ಎಂದರು.
ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ರಿಲ್ಯಾಕ್ಸ್ ಮಾಡೋದಕ್ಕೆ ಆಗೋಲ್ಲಾ. ಯಾವ ಭಾಗದಲ್ಲಿ ಏನನ್ನ ಸಡಿಲಗೊಳಿಸಬೇಕು ಅಂತ ತೀರ್ಮಾನ ಆಗಿದೆ. ಇಡೀ ರಾಜ್ಯದ ಎಲ್ಲ ಭಾಗಗಳಲ್ಲಿ ಒಂದೇ ರೀತಿಯ ತೀರ್ಮಾನ ಮಾಡಲು ಸಾಧ್ಯವಾಗಲ್ಲ ಎಂದರು.
ಆ ಕಡೆ ಗೌರಿಬಿದನೂರು ಮತ್ತು ಇಂದೂಪುರದಲ್ಲಿ ಇನ್ಫೆಕ್ಷನ್ ಜಾಸ್ತಿ ಇದೆ. ಆ ಭಾಗದ ಪಿಜಿಯೋ ತೆರಪಿಸ್ಟ್ ಸಮಸ್ಯೆ ಉದ್ಬವ ಆಗಿರೋದರಿಂದ, ಮೂರು ತಾಲೂಕಿನಲ್ಲಿ ಇನ್ನಷ್ಟು ದಿನ ವಾತಾವರಣ ಬಿಗಿಯಾಗಿರಲಿದೆ. ಶಿರಾ ಮಾತ್ರ ಸಂಪೂರ್ಣ ಬಿಗಿಯಾಗಿ ಇಡಲೇಬೇಕಿದೆ ಎಂದು ತಿಳಿಸಿದರು.