ETV Bharat / state

ಜನರಿಗೆ ಸ್ಪಂದಿಸಬೇಕೆಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ: ಸಚಿವ ಪರಮೇಶ್ವರ್​ - etv bharat kannada

ಜನತಾ ದರ್ಶನದಲ್ಲಿ ಜನರ ಅರ್ಜಿಗಳ ಮೂಲಕ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಜಿಲ್ಲಾಡಳಿತ ಉತ್ತರವನ್ನು ಕೊಡುತ್ತದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್​ ಹೇಳಿದರು.

home-minister-dr-g-parameshwar-reaction-on-janata-darshana-program
ಜನರಿಗೆ ಸ್ಪಂದಿಸಬೇಕೆಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ: ಸಚಿವ ಪರಮೇಶ್ವರ್​
author img

By ETV Bharat Karnataka Team

Published : Sep 25, 2023, 6:39 PM IST

ಗೃಹ ಸಚಿವ ಡಾ ಜಿ ಪರಮೇಶ್ವರ್

ತುಮಕೂರು: ಜನತಾ ದರ್ಶನ ಕಾರ್ಯಕ್ರಮವು ಸರ್ಕಾರದ ಕಾರ್ಯಕ್ರಮವಾಗಿದೆ. ಜನರ ಆಶೋತ್ತರಗಳಿಗೆ ಸರಿಯಾಗಿ ಆಡಳಿತ ಮಾಡಬೇಕು ಎಂದು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು. ತುಮಕೂರಿನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ನಾವು ಜನ ಪರವಾದ ಆಡಳಿತ ಕೊಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೇವೆ ಎಂದರು.

ಸರ್ಕಾರಕ್ಕೆ ಈಗಾಗಲೇ ಮೂರು ತಿಂಗಳು ತುಂಬಿದೆ, ಅದೇ ರೀತಿ ನಮ್ಮ ಆಡಳಿತ ಚುರುಕಾಗಬೇಕು. ಹೆಚ್ಚಿನ ರೀತಿಯಲ್ಲಿ ಜನರಿಗೆ ಸ್ಪಂದನೆ ಮಾಡಬೇಕು ಎಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಕೂಡಾ ನಮ್ಮ ಸರ್ಕಾರ ಇದನ್ನು ಮಾಡಿದೆ. ಈಗ ಮತ್ತೆ ಪ್ರಾರಂಭ ಮಾಡಿದ್ದೇವೆ. ಜನರ ಅರ್ಜಿಗಳ ಮೂಲಕ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಜಿಲ್ಲಾಡಳಿತ ಉತ್ತರವನ್ನು ಕೊಡುತ್ತದೆ. ಮೊದಲನೇಯದಾಗಿ ಇವತ್ತು ನಾವು ಪ್ರಾರಂಭ ಮಾಡ್ತಿದ್ದೇವೆ. ಇಡೀ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಪ್ರಾರಂಭ ಮಾಡ್ತಾರೆ. ಬೆಂಗಳೂರಿನಲ್ಲಿ 30ನೇ ತಾರೀಖು ಮಾನ್ಯ ಮುಖ್ಯಮಂತ್ರಿಗಳು ಜನತಾ ದರ್ಶನವನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಜಿಲ್ಲಾ ಉಸ್ತುವಾರಿಗಳ ನೇಮಕ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಿಂದ ಪ್ರತಿಯೊಬ್ಬ ಸಚಿವರು ಲೋಕಸಭಾ ಚುನಾವಣೆಗೆ ಉಸ್ತುವಾರಿ ವಹಿಸಿದ್ದಾರೆ. ನನಗೆ ಬೆಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ತುಮಕೂರು ಇರುತ್ತೆ ಅದರ ಜೊತೆಗೆ ಮತ್ತೊಂದು ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ ಎಂದರು.

ಜೆಡಿಎಸ್​ನ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ನನ್ನನ್ನು ಗೌರಿಶಂಕರ್ ಭೇಟಿ ಮಾಡಿದ್ದರು. ನನ್ನ ಆರೋಗ್ಯ ವಿಚಾರಿಸಿ ಚೆನ್ನಾಗಿದ್ದೀರಾ ಅಣ್ಣ ಅಂತ ಮಾತನಾಡಿಸಿ ಹೋದರು. ನನ್ನ ಬಳಿ ರಾಜಕೀಯ ಚರ್ಚೆ ಮಾಡಿಲ್ಲ. ಹಾರ, ಹಣ್ಣು ಕೊಟ್ಟು ಒಳ್ಳೆಯದಾಗಲಿ ಅಂತ ಹೇಳಿದರು. ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ನಾಳೆ ಬೆಂಗಳೂರು ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿ, ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಪೊಲೀಸ್ ಇಲಾಖೆ ವತಿಯಿಂದ ಕಾನೂನು ರಕ್ಷಣೆ ಮಾಡೋದಕ್ಕೆ ಏನು ಮಾಡಬೇಕೋ ಅದನ್ನೆಲ್ಲಾ ನಮ್ಮ ಇಲಾಖೆ ಮಾಡಿಕೊಂಡಿದ್ದಾರೆ. ಒಂದು ಬಂದ್ ಮಾಡಬೇಡಿ ಅಂತ ಹೇಳ್ತಿವಿ. ಆದರೆ ಅವರು ಮಾಡೇ ಮಾಡ್ತಾರೆ, ಆದರು ಯಾವುದೇ ತರಹದ ಅಹಿತಕರ ಘಟನೆಗಳು ನಡೆಯಬಾರದು. ಸಾರ್ವಜನಿಕರ ಆಸ್ತಿಗೆ ಹಾನಿಯಾಗಬಾರದು. ಸರ್ಕಾರಿ ಆಸ್ತಿಗಳ ನಷ್ಟ ಆಗಬಾರದು ಕಾನೂನು ಬಾಹಿರವಾದಂತಹ ಯಾವುದೇ ಚಟುವಟಿಕೆಗಳನ್ನು ನಡೆಯಬಾರದು ಎಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ. ಒಂದು ವೇಳೆ ಆ ರೀತಿ ಆಗೋದಾದ್ರೆ ಕಾನೂನು ಕ್ರಮ ತಗೊಂಡೆ ತಗೊಳ್ತಿವಿ. ಈಗಾಗಲೇ ಪೊಲೀಸ್ ಇಲಾಖೆ ಅವರು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ಇದು ಸಾರಾಯಿ ಗ್ಯಾರೆಂಟಿ ಸರ್ಕಾರ: ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.