ETV Bharat / state

ವರುಣಾರ್ಭಟ: ತುಮಕೂರು ಜಿಲ್ಲೆಯ ಹಳ್ಳಕೊಳ್ಳಗಳಲ್ಲಿ ನೀರಿನ ರಭಸ - tumkuru rain latest news

ತುಮಕೂರಿನಲ್ಲಿ ವರುಣನ ರೌದ್ರಾವತಾರದಿಂದ ಒಂದೆಡೆ ಮನೆ ಹಾಗೂ ರಸ್ತೆ ಕುಸಿತವುಂಟಾಗಿದ್ದು, ಇನ್ನೊಂದೆಡೆ ಕೆರೆ ಕಟ್ಟೆಗಳಲ್ಲಿ, ಹಳ್ಳ ಕೊಳ್ಳಗಳಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ.

ತುಮಕೂರಿನಲ್ಲಿ ವರುಣಾರ್ಭಟ
author img

By

Published : Oct 22, 2019, 3:06 PM IST

ತುಮಕೂರು: ವರುಣನ ರೌದ್ರಾವತಾರದಿಂದ ಒಂದೆಡೆ ಮನೆ ಹಾಗೂ ರಸ್ತೆ ಕುಸಿತವುಂಟಾಗಿದ್ದು, ಇನ್ನೊಂದೆಡೆ ಹಳ್ಳ ಕೊಳ್ಳಗಳಲ್ಲಿ ನೀರಿನ ರಭಸ ಹೆಚ್ಚಾಗಿದೆ.

ನಿನ್ನೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಗುಬ್ಬಿ ತಾಲೂಕಿನ ಕಬ್ಬಿಣ ಸೇತುವೆ ಪಾಳ್ಯ ಗ್ರಾಮದಲ್ಲಿ ಸುಶೀಲಮ್ಮ ಎಂಬವರ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಿಕ್ಕನಾಯಕನಹಳ್ಳಿ ತಾಲೂಕಿನ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಒಡೆದಿವೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಗ್ರಾಮದ ಬೃಹತ್ ಕೆರೆಯ ಕೋಡಿ ಹಲವು ವರ್ಷಗಳ ಬಳಿಕ ತುಂಬಿದೆ. ಚಿಕ್ಕನಾಯಕನಹಳ್ಳಿಯ ಕೆರೆಕಟ್ಟೆಗಳ ನೀರು ನೆರೆಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯ ಸೇರುತ್ತಿದೆ.

ತುಮಕೂರಿನಲ್ಲಿ ವರುಣಾರ್ಭಟ

ಹಳ್ಳಕೊಳ್ಳಗಳಲ್ಲಿ ಹರಿಯುತ್ತಿದೆ ಕೆಂಪು ಬಣ್ಣ ಮಿಶ್ರಿತ ನೀರು :

ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಿಂದ ಹರಿದು ಬರುತ್ತಿರುವ ನೀರು ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಬ್ಬಿಗೆ ಗಣಿಗಾರಿಕೆ ಪ್ರದೇಶದಿಂದ ಕಣಿವೆ ಮೂಲಕ ಕೆಂಪು ಬಣ್ಣದ ನೀರು ಹರಿದುಬರುತ್ತಿದೆ. ಬುಲ್ಲೆನಹಳ್ಳಿಯ ತೋಟಗಳು, ಹೊಲಗದ್ದೆಗಳು, ಹಳ್ಳ-ಕೊಳ್ಳಗಳ ಮೂಲಕ ಹೊಸಹಳ್ಳಿ ಬಳಿಯ ದುರ್ಗದ ಕೆರೆಗೆ ಕೆಂಪು ಬಣ್ಣದ ನೀರು ಸೇರುತ್ತಿದೆ.

Intro:Body:ಮಳೆ ಹಿನ್ನೆಲೆ : ಮನೆಗೋಡೆ ಕುಸಿತ...... ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಭರ್ತಿಯಾಗಿ ಕೋಡಿ ಬಿದ್ದ ಕೆರೆಗಳು....

ತುಮಕೂರು
ಜಿಲ್ಲೆಯಲ್ಲಿಯೂ ವರುಣನ ರೌದ್ರಾವತಾರದಿಂದ ಮನೆ ಹಾಗೂ ರಸ್ತೆ ಕುಸಿತವುಂಟಾದ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಕೆರೆ ಕಟ್ಟೆಗಳಲ್ಲಿ ಹಳ್ಳ ಕೊಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿಯುತ್ತಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಬ್ಬಿಣಸೇತುವೆಪಾಳ್ಯ ಗ್ರಾಮದಲ್ಲಿ ಸುಶೀಲಮ್ಮ ಎಂಬವರ ಮನೆ ಗೋಡೆ ಕುಸಿತ ಉಂಟಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.
ನಿನ್ನೆ ರಾತ್ರಿ ಸುರಿದ ಭಾರಿ ಪ್ರಮಾಣದ ಮಳೆಗೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಗ್ರಾಮದ ಬೃಹತ್ ಕೆರೆ ಹಲವು ವರ್ಷಗಳ ನಂತರ ಕೋಡಿ ಬಿದ್ದಿದೆ.
ಇನ್ನು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳಿಂದ ಹೊರಬರುತ್ತಿರುವ ನೀರು ನೆರೆಯ ಚಿತ್ರದುರ್ಗ ಜಿಲ್ಲೆಯ
ಹಿರಿಯೂರು ತಾಲೂಕಿನಲ್ಲಿರುವ ವಾಣಿವಿಲಾಸ ಜಲಾಶಯಕ್ಕೆ ಹರಿದು ಹೋಗುತ್ತಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.