ETV Bharat / state

ಪದವಿ ತರಗತಿಗಳು ಆರಂಭ: ಕಾಲೇಜುಗಳತ್ತ ಹೆಜ್ಜೆ ಹಾಕದ ವಿದ್ಯಾರ್ಥಿಗಳು

author img

By

Published : Nov 17, 2020, 2:02 PM IST

ಕಾಲೇಜಿಗೆ ಬರಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ, ಕೊರೊನಾ ಪರೀಕ್ಷಾ ವರದಿ ಕಡ್ಡಾಯವಾಗಿ ತರಬೇಕು.‌ ಪತ್ರಿಕೆಗಳ ಮೂಲಕ ತರಗತಿ ಪ್ರಾರಂಭದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದೇವೆ ಎಂದು ತುಮಕೂರು ವಿವಿ ಉಪಕುಲಪತಿ ಸಿದ್ದೇಗೌಡ ಹೇಳಿದರು.

Tumkur university
ತುಮಕೂರು ವಿಶ್ವವಿದ್ಯಾಲಯ

ತುಮಕೂರು: ಜಿಲ್ಲೆಯಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೂ ವಿದ್ಯಾರ್ಥಿಗಳ ಬರುವಿಕೆಗಾಗಿ ಉಪನ್ಯಾಸಕರು ಕಾಯುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸಲು ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬುದು ತರಗತಿಗಳತ್ತ ಕಣ್ಣಾಡಿಸಿದರೆ ಗೊತ್ತಾಗುತ್ತದೆ.

ತುಮಕೂರು ವಿವಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ತರಗತಿಗಳು ಪ್ರಾರಂಭಕ್ಕೆ ವೇಳಾಪಟ್ಟಿ ಹಾಕಲಾಗಿತ್ತು.‌ ಈ ಬಗ್ಗೆ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲಾಗಿತ್ತು. ಬೆಳಗ್ಗೆ 11 ಆದರೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜು ಆವರಣದಲ್ಲಿ ಕಾಣಿಸಿಕೊಂಡರು.

ಕಾಲೇಜು ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್​​​​​​​​ಗೆ ಕಾಲೇಜಿನ ಸಿಬ್ಬಂದಿ ತಯಾರಿ ನಡೆಸಿದ್ದರು. ಸೋಮವಾರ ತರಗತಿಗಳನ್ನು ಸ್ವಚ್ಛಗೊಳಿಸಲಾಗಿತ್ತು. ವಿದ್ಯಾರ್ಥಿಗಳು ಆಗಮಿಸದ ಕಾರಣ ಆನ್​ಲೈನ್​​ನಲ್ಲೇ ಉಪನ್ಯಾಸಕರು ಪಾಠ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಾಲೇಜಿಗೆ ಬಂದ ಮತ್ತು ಬರದ ವಿದ್ಯಾರ್ಥಿಗಳಿಗೆ ಆನ್​ಲೈನ್​​ನಲ್ಲಿ ಬೋಧನೆ ನಡೆಯಿತು.

ಕಾಲೇಜಿಗೆ ಬರಲು ಮೊದಲು ಭಯವಿತ್ತು. ಆನ್​ಲೈನ್ ತರಗತಿಗಳೇ ಉತ್ತಮ ಅನಿಸಿತ್ತು. ಪ್ರಾಯೋಗಿಕ ತರಗತಿಗಳ (ಪ್ರಾಕ್ಟಿಕಲ್​​​ ಕ್ಲಾಸ್​​) ಕಾರಣ ತರಗತಿಗಳಿಗೆ ಬರುವುದು ಉತ್ತಮ ಎನಿಸುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಆನ್​ಲೈನ್​ ತರಗತಿಗಳಲ್ಲಿ ನೆಟ್​ವರ್ಕ್​​ ಸಮಸ್ಯೆ ಎಂದು ಕೆಲವರು ಹೇಳಿದರು. ಪೋಷಕರು ಮೊದಲು ಬೇಡ ಎಂದಿದ್ದರು. ಈಗವರೇ ಕಾಲೇಜಿಗೆ ಹೋಗಿ ಎನ್ನುತ್ತಿದ್ದಾರೆ ಎಂಬುದು ಇನ್ನೂ ಕೆಲವರ ಮಾತು. ಕೊರೊನಾ ಪರೀಕ್ಷೆ ಮಾಡಿಸಿದ್ದೇವೆ. ವರದಿಗಾಗಿ ಕಾಯುತ್ತಿದ್ದೇವೆ. ಖುಷಿಯಿಂದಲೇ ತರಗತಿಗಳಿಗೆ ಹಾಜರಾಗಿದ್ದೇವೆ ಎನ್ನುತ್ತಾರೆ.

ತರಗತಿಗಳತ್ತ ಬಾರದ ವಿದ್ಯಾರ್ಥಿಗಳು

ಇಂದಿನ ಬೆಳವಣಿಗೆಗಳ ಕುರಿತು ತುಮಕೂರು ವಿವಿ ಉಪಕುಲಪತಿ ಸಿದ್ದೇಗೌಡ ಮಾತನಾಡಿ, ಯುಜಿಸಿ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎಸ್​ಒಪಿ ಪ್ರಕಾರ ವಿಶ್ವವಿದ್ಯಾಲಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ತರಗತಿಗಳಿಗೆ ಬರದವರಿಗೆ ಆನ್​ಲೈನ್ ಕ್ಲಾಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ, ಕೊರೊನಾ ಪರೀಕ್ಷಾ ವರದಿ ಕಡ್ಡಾಯವಾಗಿ ತರಬೇಕು.‌ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬರದವರಿಗೆ ಇಲ್ಲೇ ಟೆಸ್ಟ್ ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾಸ್ಟೆಲ್​ನಲ್ಲೂ ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆತಂಕ ಬೇಡ ಎಂದು ಅಭಯ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.