ತುಮಕೂರು : ಖಾಸಗಿ ಬಸ್‌ಗೆ ಏಕಾಏಕಿ ಬೆಂಕಿ ತಗುಲಿದ ಪರಿಣಾಮ ಅದು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಕ್ಯಾತ್ಸಂದ್ರ ವೃತ್ತದಲ್ಲಿ ನಡೆದಿದೆ.
ತುಮಕೂರು ಸಮೀಪದ ಮುಂಬೈ-ಮದ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 5ಗಂಟೆಗೆ ಈ ಘಟನೆ ನಡೆದಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ಪ್ರಯಾಣಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಿಂದ ಬೆಂಗಳೂರಿಗೆ ಬಸ್ ತೆರಳುತ್ತಿತ್ತು. ಖಾಸಗಿ ಬಸ್ ನಿನ್ನೆ ಸಂಜೆ 6:15 ಗಂಟೆಗೆ ಹೊರಟಿತ್ತು. ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪಬೇಕಿತ್ತು. ತುಮಕೂರು ಸಮೀಪ ಬಸ್‌ನೊಳಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವೇಳೆ ಬೆಂಕಿ ನೋಡಿದ ಮುದ್ದೆಬಿಹಾಳ ಮೂಲದ ಪ್ರಯಾಣಿಕ, ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಎಬ್ಬಿಸಿ ಭಾರಿ ಅಪಾಯದಿಂದ ಪಾರು ಮಾಡಿದ್ದಾನೆ.
40ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.