ETV Bharat / state

ಸಾರ್ವಜನಿಕ ಉದ್ಯಾನವನದಲ್ಲಿ ಕುಡುಕರ ಹಾವಳಿ... ಪಾರ್ಕ್​ ಆಯ್ತು ಬಾರ್​​​!

ಮಹಾನಗರ ಪಾಲಿಕೆಯ 15ನೇ ವಾರ್ಡ್​ಗೆ ಸೇರುವ ಈ ಉದ್ಯಾನವನದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಸಹ ವಾಕಿಂಗ್ ಮಾಡಲು ಬರುತ್ತಾರೆ. ಆರಂಭದಲ್ಲಿ ಚನ್ನಾಗಿದ್ದ ಉದ್ಯಾನವನ ಈಗ ಕುಡುಕರ ಸಾಮ್ರಾಜ್ಯವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

author img

By

Published : Jun 21, 2019, 8:00 AM IST

ಸಾರ್ವಜನಿಕ ಉದ್ಯಾನವನದಲ್ಲಿ ಕುಡುಕರ ಹಾವಳಿ

ತುಮಕೂರು : ನಗರದಲ್ಲಿ ಬೆರಳೆಣಿಕೆಯ ಉದ್ಯಾನವನಗಳಿದ್ದರು ಅವುಗಳು ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗದೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಅವುಗಳಲ್ಲಿ ವೀರ ಸಾವರ್ಕರ್ ಉದ್ಯಾನವನವೂ ಒಂದು.

ಮಹಾನಗರ ಪಾಲಿಕೆಯ 15ನೇ ವಾರ್ಡ್​ಗೆ ಸೇರುವ ಈ ಉದ್ಯಾನವನದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಸಹ ವಾಕಿಂಗ್ ಮಾಡಲು ಬರುತ್ತಾರೆ. ಆರಂಭದಲ್ಲಿ ಚನ್ನಾಗಿದ್ದ ಉದ್ಯಾನವನ ಈಗ ಕುಡುಕರ ಸಾಮ್ರಾಜ್ಯವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಸಾರ್ವಜನಿಕ ಉದ್ಯಾನವನದಲ್ಲಿ ಕುಡುಕರ ಹಾವಳಿ

ಇನ್ನು ಪಾರ್ಕ್​ನಲ್ಲಿ ವಿದ್ಯುತ್ ವ್ಯವಸ್ಥೆ ಹದಗೆಟ್ಟಿದ್ದು, ಹೆಸರಿಗಷ್ಟೇ ಲೈಟ್ ಅಳವಡಿಸಲಾಗಿದೆ. ಅವುಗಳನ್ನೂ ಕೆಲ ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಸಂಜೆ ವೇಳೆ ಇಲ್ಲಿಗೆ ವಾಕಿಂಗ್ ಮಾಡಲು ಬರುವ ಸಾರ್ವಜನಿಕರು ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಜೊತೆಗೆ ಕುಡುಕರ ಹಾವಳಿ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಯವರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Intro:ತುಮಕೂರು: ನಗರದಲ್ಲಿ ಬೆರಳೆಣಿಕೆಯ ಉದ್ಯಾನವನಗಳು ಇವೆ, ಆದರೆ ಅವುಗಳು ಸಹ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗದೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವುದನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ಸ್ವತಂತ್ರ ಯೋಧ ವೀರ ಸೇನಾನಿ ವೀರಸಾವರ್ಕರ್ ಉದ್ಯಾನವನವು ಒಂದಾಗಿದೆ.

Body:ಮಹಾನಗರಪಾಲಿಕೆಯ 15ನೇ ವಾರ್ಡ್ ಗೆ ಸೇರುವ ಈ ಉದ್ಯಾನವನದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಸಹ ವಾಕಿಂಗ್ ಮಾಡಲು ಬರುತ್ತಾರೆ.
ಆರಂಭದಲ್ಲಿ ಏನೋ ಈ ಉದ್ಯಾನವನ ಚೆನ್ನಾಗಿತ್ತು, ಆದರೆ ಈಗ ರಾತ್ರಿಯ ವೇಳೆ ಮಧ್ಯಪಾನ ಮಾಡುವವರ ಹಾವಳಿ ಹೆಚ್ಚಾಗಿದೆ, ಮಧ್ಯದ ಖಾಲಿ ಬಾಟಲ್ ಗಳು ಪಾರ್ಕ್ನಲ್ಲಿ ಎಲ್ಲೆಂದರಲ್ಲಿ ಬಿದ್ದಿವೆ. ಇದರಿಂದ ಹಿರಿಯರಿಗೆ ಹಾಗೂ ಮಕ್ಕಳಿಗೆ ಭಯದ ಪರಿಸ್ಥಿತಿಯುಂಟಾಗಿದೆ.
ಇನ್ನು ಪಾರ್ಕ್ ನಲ್ಲಿರುವ ವಿದ್ಯುತ್ ವ್ಯವಸ್ಥೆಯು ಹದಗೆಟ್ಟಿದ್ದು, ನೇಮಕಾವಸ್ಥೆಗೆ ಮಾತ್ರ ಲೈಟ್ ಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಸಹ ಕೆಲ ಪೋಲಿ ಪುಂಡರು ಕಿತ್ತು ಹಾಕಿದ್ದಾರೆ.
ಬೆಳಗ್ಗೆ ಹಾಗೂ ಸಂಜೆ ವೇಳೆ ಇಲ್ಲಿಗೆ ವಾಕಿಂಗ್ ಮಾಡಲು ಹಿರಿಯರು, ಮಕ್ಕಳು ಬರುತ್ತಾರೆ. ಸಂಜೆಯ ವೇಳೆ ಲೈಟ್ ಇಲ್ಲದೆ ಇರುವುದರಿಂದ ಓಡಾಡಲು ತೊಂದರೆಯಾಗುತ್ತಿದೆ ಇದರ ಜೊತೆಗೆ ಕುಡುಕರ ಹಾವಳಿ ಹೆಚ್ಚಾಗಿದ್ದು, ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಯವರು ಗಮನಹರಿಸಿ ಸಮಸ್ಯೆಯೆಂದು ಬಗೆಹರಿಸಬೇಕೆಂದು ಎಂದು ಸ್ಥಳೀಯರಾದ ವನಿತಾ ಒತ್ತಾಯಿಸಿದರು.

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.