ತುಮಕೂರು: ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದಾ ಸ್ವಾಮಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಅಂತರವನ್ನ ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್ ಅನ್ನು ಬಳಸಬೇಕು ಒಂದುವೇಳೆ ನಿಮ್ಮ ಹತ್ತಿರ ಇಲ್ಲದಿದ್ದರೆ ನಮ್ಮ ಬಳಿ ಕೇಳಿ ಪಡೆಯಿರಿ ಎಂದರು.
ಅದರಂತೆ ಎಲ್ಲಾ ಛಾಯಾಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಕಿಟ್ ಪಡೆದರು.