ETV Bharat / state

ರಾಜ್ಯದಲ್ಲಿ ಸೈಬರ್ ಪ್ರಕರಣ ಹೆಚ್ಚಳ, ಸೈಬರ್ ಕ್ರೈಂ ತಡೆಗೆ ಹೊಸ ನಿಯಮ ತರಲು ಕ್ರಮ: ಡಾ. ಪರಮೇಶ್ವರ್

Cyber crime:ಸೈಬರ್ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿ ಹೋಂ ಡಿಪಾರ್ಟ್ಮೆಂಟ್ ಹಾಗೂ ಐಟಿ ಡಿಪಾರ್ಟ್ಮೆಂಟ್ ಸೇರಿ ಒಂದು ಸಮಿತಿ ಸಹ ರಚಿಸಲಾಗಿದೆ. ಶೀಘ್ರದಲ್ಲಿ ಹೊಸ ಸೈಬರ್ ನೀತಿ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.

Home Minister Dr G Parameshwar spoke to the media.
ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Nov 1, 2023, 5:11 PM IST

Updated : Nov 1, 2023, 11:06 PM IST

ಗೃಹ ಸಚಿವ ಡಾ ಜಿ ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ತುಮಕೂರು: ರಾಜ್ಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗ್ತಿದ್ದು, ಇಂಥ ಪ್ರಕರಣಗಳ ತಡೆಗೆ ಎಚ್ಚರಿಕೆ ವಹಿಸ್ತಿದ್ದೇವೆ. ಇದಕ್ಕಾಗಿ ಹೋಂ ಡಿಪಾರ್ಟ್ಮೆಂಟ್ ಹಾಗೂ ಐಟಿ ಡಿಪಾರ್ಟ್ಮೆಂಟ್ ಸೇರಿ ಒಂದು ಹೊಸ ಸಮಿತಿ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆ್ಯಂಟಿ ಸೈಬರ್ ಕಾನೂನು ಜಾರಿಗೆ ತರಲು ಒಂದು ಅಜೆಂಡಾ ರೂಪಿಸಲು ಜವಾಬ್ದಾರಿ ಕೊಟ್ಟಿದ್ದಾರೆ.ನಾವು ಸದ್ಯದಲ್ಲೇ ಅದನ್ನ ಪ್ರಕಟಣೆ ಮಾಡ್ತೀವಿ. ಸೈಬರ್ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗ್ತಿವೆ. ಇನ್ಮೇಲೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಹೆಚ್ಚು ಸೈಬರ್ ಪ್ರಕರಣಗಳೇ ಆಗ್ತಿವೆ ಎಂದು ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಅವುಗಳನ್ನು ನಿಯಂತ್ರಣ ಮಾಡಲು ಕಾನೂನುಗಳು ಅಷ್ಟೊಂದು ಬಲಿಷ್ಠವಾಗಿಲ್ಲ. ಅದಕ್ಕಾಗಿ ನಾವೊಂದು ಹೊಸ ಸೈಬರ್ ನೀತಿಯನ್ನು ತರ್ತಿದ್ದೇವೆ ಎಂದು ತಿಳಿಸಿದರು.

200 ತಾಲೂಕು ಬರಪೀಡಿತ ಪ್ರದೇಶ: ರಾಜ್ಯದಲ್ಲಿ ಬರ ನಿರ್ವಹಣೆ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರುವ ಒಟ್ಟು 226 ತಾಲೂಕುಗಳಲ್ಲಿ 200 ತಾಲೂಕು ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 10 ತಾಲೂಕುಗಳಲ್ಲಿ 1 ತಾಲೂಕನ್ನು ಮಾತ್ರ ಪರಿಗಣಿಸಿರಲಿಲ್ಲ. ಈಗ 10 ತಾಲೂಕುಗಳನ್ನ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದರು.

ಬರ ಎದುರಿಸಲು 550 ಕೋಟಿ ಹಣ ಡಿಸಿಗಳ ಖಾತೆಗೆ ಜಮೆ: ನಮಗೆ ಹಣಕಾಸಿನ ಕೊರತೆಯಂತೂ ಸದ್ಯಕ್ಕೆ ಇಲ್ಲ. ಈಗಾಗಲೇ 19 ಕೋಟಿ ಹಣವನ್ನು ಜಿಲ್ಲಾಧಿಕಾರಿ ಅಕೌಂಟ್​ಗೆ ಹಾಕಲಾಗಿದೆ. ಆ ಹಣವನ್ನು ಯಾವುದಕ್ಕೆ ಬಳಸಬೇಕು ಎಂಬ ಸೂಚನೆ ಸಹ ನೀಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ಹೋಗುವಂತಹವರಿಗೆ ಕೆಲಸ ಒದಗಿಸುವ ಕಾರ್ಯಕ್ಕೆ ಹಣ ಮೀಸಲಿಡಲಾಗಿದೆ. ಸುಮಾರು 550 ಕೋಟಿ ಹಣ ಎಲ್ಲ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿದೆ. ಕೇಂದ್ರ ಸರ್ಕಾರದಿಂದ ಇನ್ನು ಯಾವುದೇ ನೆರವು ಬಂದಿಲ್ಲ ಎಂದು ತಿಳಿಸಿದರು.

36 ಸಾವಿರ ಕೋಟಿ ನಷ್ಟ: ಕೇಂದ್ರದ ಅಧಿಕಾರಿಗಳ ತಂಡವು ರಾಜ್ಯದಲ್ಲಿ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದೆ. ಹಸಿರು ಚೆನ್ನಾಗಿದೆ ಅಂತ ಅವರು ವರದಿ ಬರೆದುಕೊಂಡು ಹೋಗಿದ್ದಾರೆ. ಅವರ ಕಣ್ಣಿಗೆ ಬರ ಕಾಣಿಸಿಲ್ಲ, ನಮ್ಮ ಕಣ್ಣಿಗೆ ಬರ ಕಾಣಿಸ್ತಿದೆ ಎಂದು ವ್ಯಂಗ್ಯವಾಡಿದರು. ಸುಮಾರು 36 ಸಾವಿರ ಕೋಟಿ ನಷ್ಟ ಆಗಿದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಬರದ ಛಾಯೆ ಕಾಣಿಸುತ್ತಿದೆ. ಶೇ 65ರಷ್ಟು ಪ್ರದೇಶದಲ್ಲಿ ಮಳೆ ಆಗಿಲ್ಲ ಎಂದರು.

17 ಸಾವಿರ ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ: ಕಳೆದ ಎರಡು ವರ್ಷದಿಂದ ಮಳೆ ಚೆನ್ನಾಗಿ ಆಗಿರೋದ್ರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ನೀರಿನ ಕೊರತೆಯಿಂದ ರೈತರು ಬೆಳೆದ ಬೆಳೆಗಳು ಒಣಗಿ ಹೋಗಿವೆ. 17 ಸಾವಿರ ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬರ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ, ಅವರು ಎಷ್ಟು ಕೊಡ್ತಾರೆ ಗೊತ್ತಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಬಸ್ ಗೆ ಬೆಂಕಿ:ಮರಾಠ ಮೀಸಲಾತಿ ಬಗ್ಗೆ ಮಹಾರಾಷ್ಟ್ರದಲ್ಲಿ ಹೋರಾಟ ನಡೆಯುತ್ತಿದೆ. ಆ ಸಂದರ್ಭದಲ್ಲಿ ಯಾವುದೇ ರಾಜ್ಯದ ವಾಹನಗಳು ಕಂಡಲ್ಲಿ ಅವುಗಳ ಮೇಲೆ ಕಲ್ಲು ತೂರಿದ್ದಾರೆ. ಕೆಲವು ಬಸ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ಅದೇ ರೀತಿ ನಮ್ಮ ಕೆಎಸ್​ಆರ್ಟಿಸಿ ಬಸ್​​​ಗೂ ಬೆಂಕಿ ಹಚ್ಚಿದ್ದಾರೆ. ನಾವು ಇದನ್ನ ಗಮನಿಸಿದ್ದೇವೆ ಎಂದು ತಿಳಿಸಿದರು.

ಗಡಿ ಪ್ರದೇಶದಲ್ಲಿ ಎಲ್ಲ ಕಡೆ ಬಿಗಿಭದ್ರತೆ:ಗಡಿ ಪ್ರದೇಶದಲ್ಲಿ ಎಲ್ಲಾ ರೀತಿ ಬಿಗಿಭದ್ರತೆ ಒದಗಿಸಿದ್ದೇವೆ. ಮೊನ್ನೆ ಕೇರಳದಲ್ಲಿ ಬಾಂಬ್ ಬ್ಲಾಸ್ಟ್ ಆಯ್ತು ಆಗ ನಾನು ಮಂಗಳೂರಿನಲ್ಲಿದ್ದೆ, ತಕ್ಷಣ ಕೇರಳ ಬಾರ್ಡರ್​ನಲ್ಲಿ ಭದ್ರತೆ ಅಲರ್ಟ್ ಮಾಡಿದ್ದೇವೆ. ಇವತ್ತು ಇಡೀ ಬೆಳಗಾವಿ ಬೀದರ್ ಗುಲಬರ್ಗಾದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿದ್ದೇನೆ. ನಾವು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ವೇಳೆ ಮಹಾರಾಷ್ಟ್ರದವರು ಕರಾಳ ದಿನವನ್ನ ಆಚರಣೆ ಮಾಡ್ತಾರೆ. ಆ ಸಂದರ್ಭದಲ್ಲಿ ಮರಾಠಿ ಮುಖಂಡರು ನಮ್ಮ ಕರ್ನಾಟಕದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅದು ಒಂದು ವೇಳೆ ಗಡಿ ದಾಟಿ ಬಂದು ರಾಜ್ಯದಲ್ಲಿ ಆ ರೀತಿಯ ಭಾಷಣ ಮಾಡಿದ್ರೆ ತಕ್ಷಣ ಅವರನ್ನು ಅರೆಸ್ಟ್ ಮಾಡ್ತಿವಿ. ಅವರು ಯಾರೇ ಆಗಿರಲಿ, ಎಷ್ಟು ದೊಡ್ಡವರೇ ಆಗಿರಲಿ ಮಂತ್ರಿ ಆಗಿದ್ರು ಅರೆಸ್ಟ್ ಮಾಡ್ತಿವಿ. ಈ ಬಗ್ಗೆ ನಾನು ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದರು. ಪರಮೇಶ್ವರ್ ಗೆ ತಾಕತ್ತಿನ ಸವಾಲ್ ಹಾಕಿರುವ ರಮೇಶ್ ಜಾರಕಿಹೋಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಸಾಕ್ಷಿ ಕೊಡಲಿ ಮೊದಲು, ಸಾಕ್ಷಿ ಕೊಟ್ಟ ಮೇಲೆ ಅದರ ಬಗ್ಗೆ ಯೋಚನೆ ಮಾಡೋಣ. ಇನ್ನು ಕೊಟ್ಟಿಲ್ಲ, ಕೊಟ್ಟ ಮೇಲೆ ನಾವು ನ್ಯಾಯನೇ ಕೊಡಿಸೋದು, ಅನ್ಯಾಯ ಮಾಡೋದಿಲ್ಲ ಎಂದು ಹೇಳಿದರು.

ಸಿಎಂ ನಮ್ಮ ಮನೆಗೆ ಬಂದಿದ್ದು, ಸೌಜನ್ಯದ ಭೇಟಿ: ಸಿಎಂ ನಮ್ಮ ಮನೆಗೆ ಬಂದಿದ್ದು ಸೌಜನ್ಯದ ಭೇಟಿ. ಅವರು ನಮ್ಮ ಮನೆಗೆ ಬಂದಾಗ ಊಟದ ಸಮಯ ಆಗಿತ್ತು. ಊಟ ಮಾಡ್ತಿರಾ ಅಂತ ಕೇಳ್ದೆ, ಅವಾಗ್ಗೆ ಅವರು ಮಾಡ್ತಿನಪ್ಪ, ಮುದ್ದೆ ಮಾಡಿದ್ರೆ ಹೇಳು ಊಟ ಮಾಡ್ತಿನಿ ಅಂದ್ರು, ಮುದ್ದೆ ಜೊತೆ ಕೋಳಿ ಸಾರು ಮಾಡಿದ್ದೀರಾ ಅಂತ ಕೇಳಿದ್ರು, ನಮ್ಮ ಮನೆಲಿ ನಾಟಿ ಕೋಳಿ ಸಾರನ್ನ ಮಾಡಿಸಿದ್ದೆ. ಅವರು ನಾಟಿ ಕೋಳಿ ಇಷ್ಟಪಡ್ತಾರೆ, ಹಾಗಾಗಿ ನಾಟಿ ಕೋಳಿ ಸಾರು, ಅನ್ನ ಮುದ್ದೆ ಊಟ ಮಾಡಿಕೊಂಡು ಹೋದ್ರು ಎಂದರು.

ಪರಮೇಶ್ವರ್ ಮುಂದಿನ ಸಿಎಂ ಆಗ್ಬೇಕು ಎಂಬ ಸುದ್ದಿ ವಿಚಾರಕ್ಕೆ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಒಂದು ಸ್ಥಾನ ಸಿಗಬೇಕು. ನಮ್ಮ ಕೆಲಸ ಕಾರ್ಯಗಳು ಆಗ್ಬೇಕು, ಜಿಲ್ಲೆಯ ಜ್ವಲಂತ ಸಮಸ್ಯೆಗಳು ಬಗೆಹರಿಯಬೇಕು. ಅದು ನಮ್ಮ ಕೈಯಲ್ಲಿ ನಿಮ್ಮ ಕೈಯಲ್ಲಿ ಇಲ್ವಲ್ಲ. ಐದು ವರ್ಷಕ್ಕೆ ಜನ ನಮ್ಮನ್ನು ಆರಿಸಿದ್ದಾರೆ. ಜನರ ಆಶಯದಂತೆ ಆಡಳಿತ ಕೊಡಬೇಕು ಅಂತ ಸಿದ್ದರಾಮಯ್ಯ ಅವರನ್ನು ಸಿಎಂ, ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಮಾಡ್ತಿದ್ದಾರೆ. ಅಲ್ಲಿಗೆ ನಾನು ಪುಲ್ ಸ್ಟಾಪ್ ಆಗ್ತಿನಿ ಎಂದು ಹೇಳಿದರು.

ಇದನ್ನೂಓದಿ:ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು ಉಚಿತ: ಸಿಎಂ ಸಿದ್ದರಾಮಯ್ಯ ಘೋಷಣೆ

Last Updated : Nov 1, 2023, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.