ETV Bharat / state

ಪಾರ್ಸೆಲ್ ಸೇವೆ ಇದ್ರೂ ವ್ಯಾಪಾರವಿಲ್ಲ: ಕಂಗಾಲಾದ ಹೋಟೆಲ್ ಮಾಲೀಕರು - ಕಂಗಾಲಾದ ಹೋಟೆಲ್ ಮಾಲೀಕರು

ಹೋಟೆಲ್​ಗಳನ್ನು ತೆರೆದು ಪಾರ್ಸೆಲ್​ಗೆ ಅವಕಾಶ ನೀಡಿದರೂ ಗ್ರಾಹಕರ ಕೊರತೆಯಿಂದ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.

Tumkur
ಗ್ರಾಹಕರ ಕೊರತೆ: ಕಂಗಾಲಾದ ಹೋಟೆಲ್ ಮಾಲೀಕರು
author img

By

Published : Apr 29, 2021, 8:31 AM IST

ತುಮಕೂರು: ಲಾಕ್​ಡೌನ್​ ಜಾರಿಯಾದ ನಂತರ ಜಿಲ್ಲೆಯಲ್ಲಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಒಂದು ಹಂತದಲ್ಲಿ ಬಂದ್ ಆಗಿವೆ. ಹೋಟೆಲ್​ ಮತ್ತು ಬಾರ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.

ಆದ್ರೆ ಲಾಕ್​ಡೌನ್ ಇರುವ ಕಾರಣ ಹೋಟೆಲ್​​ಗಳಲ್ಲಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದರೂ ಕೂಡ ಖರೀದಿಸಲು ಜನರೇ ಬರುತ್ತಿಲ್ಲ. ಹೀಗಾಗಿ, ಹೋಟೆಲ್ ಮಾಲೀಕರು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ.

ಗ್ರಾಹಕರ ಕೊರತೆ: ಕಂಗಾಲಾದ ಹೋಟೆಲ್ ಮಾಲೀಕರು

ಟೋಲ್​ಗೇಟ್​ಗಳ ಬಳಿ ಇರುವ ಸಣ್ಣಪುಟ್ಟ ಕ್ಯಾಂಟೀನ್​ಗಳಲ್ಲಿ ಆಹಾರ ತಯಾರಿಸಿಟ್ಟರೂ ದಿನವಿಡೀ ಬೆರಳೆಣಿಕೆಯಷ್ಟು ಲಾರಿ ಚಾಲಕರು ಮಾತ್ರ ಬಂದು ಖರೀದಿಸುತ್ತಿದ್ದಾರೆ. ಕುಡಿಯುವ ನೀರಿನ ಬಾಟಲ್​ಗಳ ಮಾರಾಟ ಹೊರತುಪಡಿಸಿ ಆಹಾರದ ಪೊಟ್ಟಣಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಣ್ಣಪುಟ್ಟ ಹೋಟೆಲ್​ಗಳನ್ನು ಕೂಡ ಇನ್ನೆರಡು ದಿನದಲ್ಲಿ ಮುಚ್ಚುವ ನಿರ್ಧಾರಕ್ಕೆ ಬರುತ್ತಿದ್ದಾರೆ.

ಇನ್ನೊಂದೆಡೆ, ಇಂತಹ ವ್ಯಾಪಾರ ವಹಿವಾಟು ಅರಿತಿರುವ ಕೆಲ ದೊಡ್ಡ ಹೋಟೆಲ್​ಗಳ ಮಾಲೀಕರು ಯಾವುದೇ ರೀತಿಯ ಆಹಾರ ತಯಾರಿಸದೆ ಸಂಪೂರ್ಣ ಬಂದ್ ಮಾಡಿದ್ದಾರೆ. ಬಾರ್​ ಹಾಗೂ ಹೋಟೆಲ್​ಗಳನ್ನು ತೆರೆದು ವಹಿವಾಟು ನಡೆಸಲು ಸರ್ಕಾರ ಅವಕಾಶ ಮಾಡಿಕೊಟ್ಟರೂ, ಬಾರ್​ಗಳನ್ನು ಹೊರತುಪಡಿಸಿ ಹೋಟೆಲ್​ಗಳು ಮಾತ್ರ ಬಿಕೋ ಎನ್ನುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.