ತುಮಕೂರು: ಉರಿಗೌಡ ಮತ್ತು ನಂಜೇಗೌಡ ಕಾಲ್ಪನಿಕ ಪಾತ್ರಗಳಲ್ಲ, ಸತ್ಯದ ಪಾತ್ರಗಳು ಎಂದು ಸಾಹಿತಿ ಜವರೇಗೌಡರು ಸುವರ್ಣ ಮಂಡ್ಯ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ ಟಿ ರವಿ ಹೇಳಿದರು. ತುರುವೇಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಳ್ಳು ಅಂತ ಹೇಳಿದೋರು, ಕಾಲ್ಪನಿಕ ಅನ್ನೋರು ಕ್ಷಮೆ ಯಾಚಿಸಬೇಕು. ಟಿಪ್ಪು ಕೊಂದಿದ್ದಕ್ಕೆ ದಾಖಲೆ ಏನಿದೆ ಅಂತ ಹೊಸ ವರಸೆ ತೆಗೆದಿದ್ದಾರೆ. ಇದು ಸಂಶೋಧನೆ ಆಗಬೇಕಾಗಿರುವ ವಿಷಯ ಎಂದರು.
ಗುರುಗಳ ಮಾತಿಗೆ ನಾವು ಗೌರವ ಕೊಡುತ್ತೀವಿ: ಟಿಪ್ಪು ಕೊಂದವರು ಯಾರು?. ಟಿಪ್ಪು ಕೊಂದವರು ಅಪರಿಚಿತರು ಅಂತಾರೆ. ನಾವು ಅಪರಿಚಿತರಲ್ಲ ಅಂತ ಹೇಳಿದಿವಿ. ಉರಿಗೌಡ, ನಂಜೇಗೌಡರನ್ನ ಇವತ್ತಿನವರೆಗೂ ಇವರೇ ಸೃಷ್ಟಿ ಮಾಡಿದ್ದಾರೆ ಅಂತ ಹೇಳಿಕೊಂಡು ಬಂದಿದ್ದಾರೆ. ಸ್ವಾಮೀಜಿ ನನ್ನ ಜೊತೆ ಮಾತನಾಡಿದ್ದಾರೆ. ಗುರುಗಳ ಮಾತಿಗೆ ನಾವು ಗೌರವ ಕೊಡುತ್ತೇವೆ. ಟಿಪ್ಪು ಮತಾಂಧ ಅನ್ನೋದು ವಿವಾದ. ಅವನನ್ನ ವೈಭವೀಕರಿಸಲಾಗಿದೆ ಇತಿಹಾಸದಲ್ಲಿ ತಿಳಿಸಬೇಕಾದ್ದನ್ನು ತಿಳಿಸಿಲ್ಲ. ಬ್ರಿಟಿಷರು, ಪರ್ಶಿಯನ್ನರು, ಎಲ್ಲರೂ ಸಹ ನಮ್ಮ ಆಕ್ರಮಣಕಾರರೇ. ಬ್ರಿಟಿಷರು ಬಂದ ತಕ್ಷಣ ಪರ್ಶಿಯನ್ನರು ನಮ್ಮ ನೆಂಟ್ರು ಆಗಲ್ಲ ಎಂದು ಹೇಳಿದರು.
ಟಿಪ್ಪುವನ್ನ ಮತಾಂಧ ಅಂತ ಹೇಳಬೇಕಿತ್ತು- ಸಿಟಿ ರವಿ: ಪಾರ್ಸಿಗಳು ಆಕ್ರಮಣ ಮಾಡಿದ್ದರು, ಲೂಟಿ ಮಾಡಿದ್ದರು. ನಾವು ಮಕ್ಕಳಿಗೆ ಅಕ್ಬರ್ ನನ್ನು ದಿ ಗ್ರೇಟ್ ಅಂತ ಪಾಠ ಹೇಳಿ ಕೊಟ್ವಿ. ರಾಣಪ್ರತಾಪ್ ನನ್ನ ದಿ ಗ್ರೇಟ್ ಅಂತ ಹೇಳಿಕೊಡಲಿಲ್ಲ. ಟಿಪ್ಪುವನ್ನ ಮತಾಂಧ ಅಂತ ಹೇಳಬೇಕಿತ್ತು. ಆದರೆ ಮಹಾನ್ ವ್ಯಕ್ತಿ ಅಂತ ಚಿತ್ರಿಕರಿಸಿದರು. ಮಹಾನ್ ವ್ಯಕ್ತಿ ಅನ್ನುವ ಟಿಪ್ಪು ಖಡ್ಗದಲ್ಲಿರುವ ವ್ಯಾಖ್ಯಾನ ಏನು?. ಕಾಫಿರರ ರಕ್ತಕ್ಕಾಗಿ ನನ್ನ ಖಡ್ಗ ತವಕಿಸುತ್ತದೆ ಅಂತ ಬರೆಯಲಾಗಿತ್ತು. ಮುಸ್ಲಿಂ ಧರ್ಮವನ್ನ ಯಾರು ಒಪ್ಪಲ್ಲವೋ ಅವರನ್ನ ಕಾಫಿರರು ಅಂತ ಕರೆಯಲಾಗುತ್ತೆ ಎಂದು ಸಿ ಟಿ ರವಿ ತಿಳಿಸಿದರು.
ಈ ದೇಶದಲ್ಲಿರುವ ಜೈನರು, ಬೌದ್ಧರು, ಪಾರ್ಸಿ ಎಲ್ಲರು ಸಹ ಕಾಫಿರರೇ ಅಂತ ಭಾವಿಸುತ್ತಾರೆ. ಮತಾಂಧ ಅಂತ ಹೇಳುವ ಜಾಗದಲ್ಲಿ ಮತಿಯ ಸಹಿಷ್ಣು ಅಂತ ಹೇಳಲಾಯ್ತು. ಈ ಚರ್ಚೆಯನ್ನ ನಾವು ಮುಂದುವರಿಸುತ್ತಿವಿ. ನನ್ನನ್ನು ಯಾರಿಗೆ ಬೇಕಾದರು ಹೋಲಿಕೆ ಮಾಡಿ, ಐಲೆಟ್ ಮಾಡಿ, ನನಗೆ ಹೆಮ್ಮೆ ಇದೆ. ಅವರು ಮೈಸೂರು ಸಂಸ್ಥಾನಕ್ಕೆ ನಿಷ್ಠಾವಂತರಾಗುವುದು ಅನ್ನೋದಕ್ಕೆ ಹೆಮ್ಮೆ ಇದೆ ಎಂದರು.
ಕುಮಾರಸ್ವಾಮಿ ಕ್ಷಮೆಯಾಚಿಸಬೇಕು - ಸಿಟಿ ರವಿ: ಸ್ವಾಮೀಜಿ ಅವರನ್ನ ಅಪಮಾನ ಮಾಡಿರೋದು, ಅಗೌರವವಾಗಿ ನಡೆದುಕೊಂಡಿರೋದು ಕುಮಾರಸ್ವಾಮಿ. ಅವರು ಕ್ಷಮೆಯಾಚಿಸಬೇಕು ಎಂದು ಸಿ ಟಿ ರವಿ ಆಗ್ರಹಿಸಿದರು. ವಾಸ್ತವವಾಗಿ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಮೈಸೂರು ಸಂಸ್ಥಾನಕ್ಕೆ ಮೋಸ ಮಾಡಿದವನು ಅಂತ ಬಿಂಬಿಸಬೇಕಿತ್ತು. ಕೂಲಿ ಆಗಿ ಬಂದವನು ಮೋಸದಿಂದ, ಮೈಸೂರು ಸಂಸ್ಥಾನವನ್ನೇ ಕಬಳಿಸಿದ ಅಂತ ನಾವು ಎಲ್ಲಿ ಹೇಳಿದ್ದೀವಿ. ಹೈದರಾಲಿ, ಮೈಸೂರಿಗೆ ಕೂಲಿ ಆಳಾಗಿ ಸೇರಿಕೊಂಡ, ಮಹಾರಾಜರಿಗೆ ನಿಷ್ಠವಾದರನ್ನ ಮೋಸದಿಂದ ಕೊಂದ. ಮಹಾರಾಣಿ ಲಕ್ಷ್ಮಮ್ಮಣ್ಣಿ ಸೆರೆಮನೆಯಲ್ಲಿಟ್ಟ, ಮೋಸದಿಂದ ಅಧಿಕಾರ ಕಬಳಿಸಿದ. ಶ್ರೀರಂಗಪಟ್ಟಣದಲ್ಲಿ, ದಸರಾ ಉತ್ಸವವನ್ನ ನಿಲ್ಲಿಸಿದವರು ಯಾರು. ಡೆಮಾಕ್ರಸಿ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ಸತ್ಯ ಹೊರಬರಬೇಕು ಎಂದರು.
ಸ್ವಾಮೀಜಿ ಅವರಿಗೆ ವಾಸ್ತವಿಕ ಸತ್ಯವನ್ನ ಮನವರಿಕೆ ಮಾಡಿಕೊಡ್ತೀವಿ. ಸ್ವಾಮೀಜಿ ಬಳಿ ಖಂಡಿತ ದಾಖಲೆ ತಗೊಂಡು ಹೋಗುತ್ತೀವಿ. ದಾಖಲೆ ಸಂಗ್ರಹಿಸೊ ಕೆಲಸ ಮಾಡುತ್ತೀವಿ. ಸ್ವಾಮೀಜಿ ಅವರ ಬಗ್ಗೆ ಶ್ರದ್ಧೆ, ಗೌರವ ನಮಗೆ ಇದೆ. ಟಿಪ್ಪು ಸುಲ್ತಾನ್ ಕುರಿತಾದ ಚರ್ಚೆ ಡೆಮಾಕ್ರಟಿಕ್ನ ಒಂದು ಬ್ಯೂಟಿ. ಉರಿಗೌಡ, ನಂಜೇಗೌಡರ ಹೆಸರು ಇವತ್ತು ನಿನ್ನೆಯಿಂದ ಪ್ರಾಮುಖ್ಯತೆಗೆ ಬಂದಿದ್ದಲ್ಲ. ದಾಖಲೆ ಮುಂದಿಟ್ಟುಕೊಂಡು ಸ್ವಾಮೀಜಿ ಬಳಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ, ಗುರುಗಳು ಹೇಳಿದಂತೆ ಕೇಳಬೇಕು: ಸಿಎಂ ಬೊಮ್ಮಾಯಿ