ತುಮಕೂರು:ತೂಕ ಕಡಿಮೆ ಮತ್ತು ಸೌಂದರ್ಯ ಹೆಚ್ಚಿಸುವ ಕ್ಲಿನಿಕ್ನಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ಲಕ್ಷಾಂತರ ರೂಪಾಯಿ ಪೀಕಿದ್ದ ದಂಪತಿಯನ್ನು ತಿಲಕಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಶ್ವಿನಿ ಮತ್ತು ಪ್ರಭಾಕರ ಎಂಬುವರು ಬಂಧಿತ ದಂಪತಿ. ನಗರದ ಎಸ್ಐಟಿ ಬ್ಯಾಕ್ ಗೇಟ್ನಲ್ಲಿ ಡಾಕ್ಟರ್ ಡರ್ಮಟಾಲಾಜಿಸ್ಟ್ ವಿ3 ಸ್ಲಿಮ್ ಕೇರ್ ಕ್ಲಿನಿಕ್ ನಡೆಸುತ್ತಿದ್ದ ದಂಪತಿ, ಇದರಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ಹೇಳಿ ಜಗದಾಂಬ ಎಂಬುವರಿಂದ 28 ಲಕ್ಷ ರೂ. ಪಡೆದುಕೊಂಡು ಯಾಮಾರಿಸಿದ್ದರು.
ಈ ಸಂಬಂಧ ತಿಲಕಪಾರ್ಕ್ ಪೊಲೀಸ್ ಠಾಣೆಗೆ ಜಗದಾಂಬ ದೂರು ನೀಡಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.