ತುಮಕೂರು: ಸ್ವತಂತ್ರ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಜೀವ ತ್ಯಾಗ ಮಾಡಿದ ಭಗತ್ ಸಿಂಗ್ ಹಾಗೂ ಸುಖದೇವ್, ರಾಜಗುರು ಅವರನ್ನು ಗಲ್ಲಿಗೇರಿಸಿದ ದಿನವಾದ ನಿನ್ನೆ ಅವರ ನೆನಪಿನ ಅರ್ಥ ವಿವಿಧ ಸಂಘಟನೆಗಳು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.
ಭಗತ್ ಸಿಂಗ್ ಅವರ 89ನೇ ಹುತಾತ್ಮ ದಿನಾಚರಣೆಯನ್ನು ನಗರದ ಅಮಾನಿಕೆರೆ ಉದ್ಯಾನವನದ ಮುಂದೆ ಎಐಎಂಎಸ್ಎಸ್, ಎಐಡಿಎಸ್ಓ ಹಾಗೂ ಎಐಯುಟಿಯುಸಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಗತ್ ಸಿಂಗ್ ಜೀವನ ಶೈಲಿ ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಘದ ಸಂಚಾಲಕಿ ಯಶೋಧ ತಿಳಿಸಿದರು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಸ್ಪೂರ್ತಿದಾಯಕ ವಾಕ್ಯಗಳನ್ನು ಬ್ಯಾನರ್ಗಳ ಮೂಲಕ ಪ್ರದರ್ಶಿಸಲಾಯಿತು. ಜೊತೆಗೆ ಭಗತ್ ಸಿಂಗ್ ಅವರ ಹೋರಾಟದ ಮತ್ತು ಜೀವನದ ಘಟನೆಗಳನ್ನೊಳಗೊಂಡ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.