ತುಮಕೂರು : ಕೆನಡಾ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಮತ್ತು ಅವರ ಪತ್ನಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಭೇಟಿ ನೀಡಿದರು. ತವರಿಗೆ ಆಗಮಿಸಿದ ಚಂದ್ರ ಆರ್ಯ ಅವರಿಗೆ ಗ್ರಾಮಸ್ಥರು ಕೊಂಬು, ಕಹಳೆ, ಪೂರ್ಣಕುಂಭ ಕಳಸ ಹೊತ್ತು ಸ್ವಾಗತ ಕೋರಿದರು.
ಇತ್ತೀಚೆಗೆ ಕೆನಡಾ ಸಂಸತ್ತಿನಲ್ಲಿ ಮಾತೃಭಾಷೆ ಕನ್ನಡವನ್ನು ಮಾತನಾಡುವ ಮೂಲಕ ಚಂದ್ರ ಆರ್ಯ ಅವರು ತಮಗೆ ಕನ್ನಡದ ಮೇಲೆ ಇರುವ ಪ್ರೀತಿ, ಗೌರವ, ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಈ ಮೂಲಕ ಕನ್ನಡದ ಕಂಪನ್ನು ಕೆನಡಾ ಸಂಸತ್ತಿನವರಿಗೂ ಪಸರಿಸಿದ್ದಾರೆ.
ಇದೆ ಸದರ್ಭರ್ದಲ್ಲಿ ಮಾತನಾಡಿದ ಅವರು, ಗಜ್ಜಿಗರಹಳ್ಳಿ ನಮ್ಮ ತಾತನ ಊರು. ಇಲ್ಲಿಗೆ ಬರುವುದು ಎಂದರೆ ನಮಗೆ ತುಂಬಾ ಸಂತೋಷ. ಕಳೆದ ನಾಲ್ಕೈದು ವರ್ಷಗಳಲ್ಲಿ ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ ಸೌಕರ್ಯ ಆಗಬೇಕಿದೆ ಎಂದರು. ಗಜ್ಜಿಗರಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಕೆಲಕಾಲ ಗ್ರಾಮದ ಹಳೆ ಸ್ನೇಹಿತರೊಂದಿಗೆ ಕುಳಿತು ಚರ್ಚೆ ನಡೆಸಿದರು.
ಇದನ್ನೂ ಓದಿ: ಕಲುಷಿತ ನೀರು ಸೇವನೆ ಆರೋಪ.. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯುವಕ