ETV Bharat / state

ಕೆಸರು ಗದ್ದೆಯಂತಾದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆ - antharasanahalli Agricultural Product Market

ತುಮಕೂರಿನ ಎರಡನೇ ವಾರ್ಡ್​ಗೆ ಸೇರುವ ಅಂತರಸನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರಸ್ತೆ ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿದೆ

ಕೆಸರು ಗದ್ದೆಯಂತಾದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆ
author img

By

Published : Sep 22, 2019, 6:32 PM IST

ತುಮಕೂರು: ತುಮಕೂರಿನ ಎರಡನೇ ವಾರ್ಡ್​ಗೆ ಸೇರುವ ಅಂತರಸನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರಸ್ತೆ ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿದೆ.

ಕೆಸರು ಗದ್ದೆಯಂತಾದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆ

ನಗರ ಪ್ರದೇಶದಿಂದ ಹೊರಗಿರುವ ಈ ಮಾರುಕಟ್ಟೆ ಅಧಿಕಾರಿಗಳ ದಿವ್ಯನಿರ್ಲಕ್ಷದಿಂದ ಅನೈರ್ಮಲ್ಯಕ್ಕೆ ಒಳಗಾಗಿದೆ. ಕೆಲದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿ ಬಿದ್ದ ಮಳೆನೀರು ಬೇರೆಡೆ ಹೋಗಲು ಸಾಧ್ಯವಾಗದೆ, ನಿಂತಲ್ಲೇ ನಿಂತು ಕೆಸರುಗದ್ದೆಯಂತಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಪ್ರತಿದಿನ ಓಡಾಡಲು ಕಿರಿಕಿರಿ ಉಂಟಾಗುತ್ತಿದೆ.

ಈ ಕೆಸರಿನಂದಾಗಿ ಸರಿಯಾಗಿ ವ್ಯಾಪಾರವಾಗದೇ, ತರಕಾರಿಗಳು ಕೊಳೆಯುವಂತೆ ಪರಿಸ್ಥಿತಿ ಉಂಟಾಗಿದೆ ಎಂದು ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

Intro:ತುಮಕೂರು: ಕೆಸರುಗದ್ದೆಯತಾಗಿರುವ ಈ ರಸ್ತೆ ಯಾವುದೋ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲ, ಕೆಲವರ್ಷಗಳ ಹಿಂದೆ ಎರಡನೇ ವಾರ್ಡ್ ಗೆ ಸೇರುವ ಅಂತರಸನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ದುಸ್ಥಿತಿ.

Body:ಹೌದು ಎರಡನೇ ವಾರ್ಡ್ ಗೆ ಸೇರುವ ಅಂತರಸನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಮಳೆ ನೀರಿನಿಂದ ನಿಂತು ಕೆಸರುಗದ್ದೆಯಂತಾಗಿರುವ ಕೊಚ್ಚೆ ಸ್ವಾಗತಿಸಲು ಕಾಯುತ್ತಿದೆ.
ನಗರ ಪ್ರದೇಶದಿಂದ ಹೊರಗಿರುವ ಈ ಮಾರುಕಟ್ಟೆಯು ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಅನೈರ್ಮಲ್ಯ ಒಳಗಾಗಿದೆ. ಕೆಲದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು ಅದೇರೀತಿ ಮಾರುಕಟ್ಟೆಯಲ್ಲಿ ಬಿದ್ದ ಮಳೆನೀರು ಬೇರೆ ಕಡೆ ಹೋಗಲು ಸಾಧ್ಯವಾಗದೆ ನಿಂತಲ್ಲೇ ನಿಂತು ಕೆಸರುಗದ್ದೆಯಂತಾಗಿದೆ ಇದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಪ್ರತಿದಿನ ಓಡಾಡಲು ಕಿರಿಕಿರಿ ಉಂಟಾಗುತ್ತದೆ.
ಮಳೆ ಬಂದು ನೀರು ಬೇರೆ ಕಡೆ ಹೋಗಲು ಸಾಧ್ಯವಾಗುತ್ತಿಲ್ಲ, ಮಾರುಕಟ್ಟೆಯೊಳಗೆ ಜನರು ಪ್ರವೇಶಿಸಲು ಹಿಂದುಮುಂದು ನೋಡುವಂತಹ ಪರಿಸ್ಥಿತಿ ಉಂಟಾಗಿದೆ, ಇದರಿಂದ ಸರಿಯಾಗಿ ವ್ಯಾಪಾರವಾಗದೇ ತರಕಾರಿಗಳು ಕೊಳೆಯುವಂತೆ ಪರಿಸ್ಥಿತಿ ಉಂಟಾಗಿದೆ ಎಂದು ವ್ಯಾಪಾರಿ ದರ್ಶನ್ ಬೇಸರ ವ್ಯಕ್ತಪಡಿಸಿದರು.
ಬೈಟ್: ದರ್ಶನ್, ವ್ಯಾಪಾರಿ.

Conclusion:ಮಾರುಕಟ್ಟೆಯ ಒಳಗಡೆ ಸ್ವಚ್ಛತೆಯನ್ನು ಕಾಪಾಡುವಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ, ಪ್ರಾರಂಭದಲ್ಲಿ ಹಾಕಲಾಗಿದ್ದ ಡಾಂಬರೀಕರಣ ಕಿತ್ತುಹೋಗಿ ರಸ್ತೆಯಲ್ಲೆಲ್ಲ ನೀರು ತುಂಬಿಕೊಂಡಿದೆ.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.