ETV Bharat / state

ಅಕ್ಕ-ತಂಗಿ ಕೆರೆಯನ್ನೇ ನುಂಗಿದ ರಾಷ್ಟ್ರೀಯ ಹೆದ್ದಾರಿ: ಜೀವಜಲಕ್ಕೆ ಕಂಟಕ - ಕಾಮಗಾರಿ

ತುಮಕೂರು ಜನರ ಜೀವನಾಡಿಯಾಗಿದ್ದ ಕೆರೆಯೊಂದು ಇದೀಗ ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿ ಜೀವಜಲಕ್ಕೆ ಕಂಟಕ ತಂದೊಡ್ಡಿದೆ. ಹೇಗೆ ಅಂತೀರಾ?

ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿದ ತುಮಕೂರು ಜನರ ಜೀವನಾಡಿ ಅಕ್ಕ ತಂಗಿ ಕೆರೆ
author img

By

Published : May 2, 2019, 8:45 AM IST

ತುಮಕೂರು: ನಗರ ನಿವಾಸಿಗರ ಜೀವನಾಡಿಯಾಗಿದ್ದ ಅಕ್ಕ-ತಂಗಿ ಕೆರೆ ಇದೀಗ ಅಭಿವೃದ್ಧಿಯ ವೇಗಕ್ಕೆ ಸಿಲುಕುವ ಮೂಲಕ ತನ್ನ ಒಡಲಲ್ಲಿ ಜೀವಜಲವನ್ನು ಇರಿಸಿಕೊಳ್ಳದಂತಹ ಸ್ಥಿತಿಗೆ ತಲುಪಿದೆ. ದಶಕಗಳ ಕಾಲ ಜನರ ದಣಿವು ನೀಗಿಸಿದ್ದ ಈ ಕೆರೆ ಇದೀಗ ಅಭಿವೃದ್ಧಿ ಎಂಬ ನಾಗಾಲೋಟದಿಂದ ತತ್ತರಿಸಿ ಹೋಗಿದೆ.

ಪಾಳೆಗಾರರು ನಿರ್ಮಿಸಿದ್ದ ಅಕ್ಕ-ತಂಗಿ ಕೆರೆ ಇದೀಗ ರಾಷ್ಟ್ರೀಯ ಹೆದ್ದಾರಿಗೆ ತುತ್ತಾಗುವ ಮೂಲಕ ಜೀವಜಲಕ್ಕೆ ಕಂಟಕ ತಂದೊಡ್ಡಿದೆ. 2000 ಇಸವಿಯಲ್ಲಿ ಮುಂಬೈ ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 4ರ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ದುರದೃಷ್ಟವಶಾತ್ ಈ ರಸ್ತೆ ಸಮೃದ್ಧವಾಗಿ ಇದ್ದಂತಹ ಅಕ್ಕ-ತಂಗಿ ಕೆರೆ ನಡುವಿನಲ್ಲೇ ಹಾದು ಹೋಗಿತ್ತು. ಹಿಂದು-ಮುಂದು ನೋಡದ ಸರ್ಕಾರ ಈ ಕೆರೆಯನ್ನು ಇಬ್ಭಾಗ ಮಾಡಿ ಬಿಟ್ಟಿತ್ತು. ಸುಮಾರು 50 ಎಕರೆ ಪ್ರದೇಶದ ಕೆರೆಯ ಬಹುಭಾಗ ರಸ್ತೆ ಕಾಮಗಾರಿಗೆ ತೆಗೆದುಕೊಳ್ಳಲಾಯಿತು. ಈ ಮೂಲಕ ಈ ಕೆರೆ ಜಲ ಮೂಲಕ್ಕೆ ಕೊಡಲಿ ಪೆಟ್ಟು ನೀಡಲಾಯಿತು.

ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿದ ತುಮಕೂರು ಜನರ ಜೀವನಾಡಿ ಅಕ್ಕ-ತಂಗಿ ಕೆರೆ

ಸಿದ್ದಗಂಗಾ ಮಠದ ಸಮೀಪ ಇರುವ ಬೆಟ್ಟ ಸೇರಿದಂತೆ ಇನ್ನಿತರ ಹಳ್ಳ-ಕೊಳ್ಳಗಳಿಂದ ಕೆರೆಗೆ ಹರಿದು ಬರುತ್ತಿದ್ದ ನೀರು ಬರಿದಾಯಿತು. ಕೆರೆಯ ಬಹುಭಾಗವನ್ನೆಲ್ಲ ಆವರಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಒಂದೆಡೆಯಾದರೆ ಇನ್ನುಳಿದ ಕೆರೆ ಪ್ರದೇಶ ಒತ್ತುವರಿದಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಅದೇ ಕಸ ವಿಲೇವಾರಿಯ ಸ್ಥಳವಾಗಿಯೂ ಪರಿವರ್ತನೆಗೊಂಡಿತ್ತು. ಈ ಕೆರೆಯ ಶೋಚನೀಯ ಸ್ಥಿತಿಯನ್ನು ಕಂಡ ಅಂದಿನ ಜಿಲ್ಲಾಧಿಕಾರಿ ಹಾಗೂ ಪರಿಸರವಾದಿಗಳು ಇದಕ್ಕೆ ಕಾಯಕಲ್ಪ ನೀಡಲು ಮುಂದಾದರು. ಪರಿಸರವಾದಿಗಳು ಹಾಗೂ ವಿದ್ಯಾರ್ಥಿಗಳು ಅಕ್ಕ-ತಂಗಿ ಕೆರೆ ಉಳಿಸುವ ಒಂದು ಬೃಹತ್ ಹೋರಾಟ ಹಾಗೂ ಜನ ಜಾಗೃತಿಯನ್ನು ಮೂಡಿಸಿದರು. ಇದರ ಪರಿಣಾಮ ಅರಣ್ಯ ಇಲಾಖೆ ಈ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಸುಂದರ ಉದ್ಯಾನವನವನ್ನಾಗಿ ಮಾಡಿದೆ.

ಇಂದಿಗೂ ಕೂಡ ಮಳೆ ಬಂದರೆ ಈ ಉದ್ಯಾನವನದಲ್ಲಿ ನೀರಿನ ಸೆಳವು ಗೋಚರಿಸುತ್ತದೆ. ಒಂದು ರೀತಿ ಇಲ್ಲಿ ಹಿಂದೆ ಕೆರೆ ಇತ್ತೆಂಬ ಕುರುಹುಗಳು ಗೋಚರಿಸುತ್ತವೆ. ಇನ್ನೊಂದೆಡೆ ಈ ಕೆರೆಯ ಸುತ್ತಮುತ್ತ ಸಮೃದ್ಧವಾಗಿದ್ದ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಈ ಕೆರೆಯನ್ನು ಮರುಪೂರಣಗೊಳಿಸುವ ಕಾರ್ಯಕ್ಕೂ ಕೂಡ ಮುಂದಾಗದಂತಹ ಸ್ಥಿತಿ ನಿರ್ಮಾಣವಾಗಿರುವುದು ದುರಂತವಾಗಿದೆ.

Intro:ಭಾಗ-1

ಅಕ್ಕ ತಂಗಿ ಕೆರೆಯನ್ನೇ ನುಂಗಿದೇ ರಾಷ್ಟ್ರೀಯ ಹೆದ್ದಾರಿ 4 ರಸ್ತೆ.....

ತುಮಕೂರು
ದಶಕದ ಹಿಂದೆ ತುಮಕೂರು ನಗರದ ಜನರ ಜೀವನಾಡಿಯಾಗಿದ್ದ ಕೆರೆಯೊಂದು ಇದೀಗ ಉದ್ಯಾನವನ ಎಂಬ ಪಟ್ಟಕ್ಕೇರಿದೆ. ಹೌದು ಇದಕ್ಕೆ ಕಾರಣ ಅಭಿವೃದ್ಧಿ ಎಂಬ ನಾಗಾಲೋಟಕ್ಕೆ ನಲುಗಿ ಹೋಗಿದೆ.
ಇದು ಅಕ್ಕತಂಗಿ ಕೆರೆ ಶತಮಾನಗಳ ಹಿಂದೆ ಪಾಳೆಗಾರರು ನಿರ್ಮಿಸಿದ್ದ ಕೆರೆ. ದಶಕಗಳ ಕಾಲ ಜನರ ದಣಿವು ನೀಗಿಸಿದ್ದ ಈ ಕೆರೆ ಪ್ರಸ್ತುತ ತನ್ನ ಒಡಲಲ್ಲಿ ಜೀವ ಜಲವನ್ನು ಇರಿಸಿಕೊಳ್ಳದಂತಹ ಸ್ಥಿತಿಗೆ ತಲುಪಿದೆ.

2000 ದಲ್ಲಿ ಮುಂಬೈ ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 4 ರಸ್ತೆ ಕಾಮಗಾರಿ ಚಾಲನೆ ನೀಡಲಾಗಿತ್ತು. ದುರದೃಷ್ಟವಶಾತ್ ಈ ರಸ್ತೆ ಸಮೃದ್ಧವಾಗಿ ಇದ್ದಂತಹ ಅಕ್ಕ ತಂಗಿ ಕೆರೆ ನಡುವಿನಲ್ಲೇ ಹಾದು ಹೋಗಿತ್ತು. ಮುಲಾಜಿಲ್ಲದೆ ಸರ್ಕಾರ ಈ ಕೆರೆಯನ್ನು ಇಬ್ಬಾಗ ಮಾಡಿ ಬಿಟ್ಟಿತ್ತು.ಸುಮಾರು 50 ಎಕರೆ ಪ್ರದೇಶದ ಕೆರೆಯ ಬಹುಭಾಗ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗೆ ತೆಗೆದುಕೊಳ್ಳಲಾಯಿತು. ಈ ಮೂಲಕ ಈ ಕೆರೆ ಜಲ ಮೂಲಕ್ಕೆ ಕೊಡಲಿಪೆಟ್ಟು ನೀಡಲಾಯಿತು.

ಸಿದ್ದಗಂಗಾ ಮಠದ ಸಮೀಪ ಇರುವ ಬೆಟ್ಟ ಸೇರಿದಂತೆ ಇನ್ನಿತರ ಹಳ್ಳಕೊಳ್ಳಗಳಿಂದ ಕೆರೆಗೆ ಹರಿದು ಬರುತ್ತಿದ್ದ ನೀರು ಬಂದಾಯಿತು. ಕೆರೆಯ ಬಹುಭಾಗವನ್ನೆಲ್ಲ ಆವರಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಒಂದೆಡೆಯಾದರೆ ಹೊರತುಪಡಿಸಿ ಇನ್ನುಳಿದ ಕೆರೆ ಪ್ರದೇಶ ಒತ್ತುವರಿದಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಅದೇ ಕಸ ವಿಲೇವಾರಿಯ ಸ್ಥಳವಾಗಿಯೂ ಪರಿವರ್ತನೆಗೊಂಡಿತ್ತು. ಈ ಕೆರೆಯ ಶೋಚನೀಯ ಸ್ಥಿತಿಯನ್ನು ಕಂಡ ಅಂದಿನ ಜಿಲ್ಲಾಧಿಕಾರಿ ಹಾಗೂ ಪರಿಸರವಾದಿಗಳು ಇದಕ್ಕೆ ಕಾಯಕಲ್ಪ ನೀಡಲು ಮುಂದಾದರು.

ಪರಿಸರವಾದಿಗಳು ಹಾಗೂ ವಿದ್ಯಾರ್ಥಿಗಳು ಅಕ್ಕ ತಂಗಿ ಕೆರೆ ಉಳಿಸುವ ಒಂದು ಬೃಹತ್ ಹೋರಾಟವನ್ನು ಹಾಗೂ ಜನ ಜಾಗೃತಿಯನ್ನು ಮೂಡಿಸಿದರು. ಇದರ ಪರಿಣಾಮ ಅರಣ್ಯ ಇಲಾಖೆ ಈ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಸುಂದರ ಉದ್ಯಾನವನವನ್ನಾಗಿ ಮಾಡಿದೆ.

ಇಂದಿಗೂ ಕೂಡ ಮಳೆ ಬಂದರೆ ಈ ಉದ್ಯಾನವನದಲ್ಲಿ ನೀರಿನ ಸೆಳವು ಗೋಚರಿಸುತ್ತದೆ. ಒಂದು ರೀತಿ ಇಲ್ಲಿ ಹಿಂದೆ ಕೆರೆ ಇತ್ತೆಂಬ ಕುರುಹುಗಳು ಗೋಚರಿಸುತ್ತವೆ. ಇನ್ನೊಂದೆಡೆ ಈ ಕೆರೆಯ ಸುತ್ತಮುತ್ತ ಸಮೃದ್ಧವಾಗಿದ್ದ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಈ ಕೆರೆಯನ್ನು ಮರುಪೂರಣಗೊಳಿಸುವ ಕಾರ್ಯಕ್ಕೂ ಕೂಡ ಮುಂದಾಗದಂತಹ ಸ್ಥಿತಿ ನಿರ್ಮಾಣವಾಗಿರುವುದು ದುರಂತವಾಗಿದೆ.

Body:ತುಮಕೂರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.