ತುಮಕೂರು: ನಗರದ ಮಂಡಿಪೇಟೆಯಲ್ಲಿ ಕೊರೊನಾ ಸೋಂಕಿನಿಂದ ಕಾಪಾಡಿಕೊಳ್ಳು ವಿಭಿನ್ನ ಪ್ರಯತ್ನಗಳನ್ನು ಮುಂದುವರಿಸಿದ್ದು, ಕೆಲ ಅಂಗಡಿಗಳ ಮುಂಭಾಗವೇ ಬೃಹತ್ ಪ್ಲಾಸ್ಟಿಕ್ ಪರದೆಗಳನ್ನು ಅಳವಡಿಸಿದ್ದಾರೆ.
ವಸ್ತುಗಳನ್ನು ಗ್ರಾಹಕರಿಗೆ ನೀಡಲು ಮಾತ್ರ ಅವಕಾಶವಾಗುವಂತೆ ಪ್ಲಾಸ್ಟಿಕ್ ಪರದೆಯ ಒಂದು ಭಾಗದಲ್ಲಿ ಟಿಕೆಟ್ ಕೌಂಟರ್ ರೀತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನು ಕೆಲ ಬಟ್ಟೆ ಅಂಗಡಿಗಳ ಮುಂಭಾಗ ಬೃಹತ್ ಪ್ಲಾಸ್ಟಿಕ್ ಪರದೆಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ಸೋಂಕು ಹರಡುವಿಕೆ ತಡೆಗಟ್ಟಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ವರ್ತಕರು.