ತುಮಕೂರು: ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಂದು 7 ಮಂದಿಯನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ನಲ್ಲಿ ಇಡಲಾಗಿದೆ. ಈ ಮೂಲಕ ಐಸೋಲೇಷನ್ಗೆ ಒಳಗಾದವರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ, ಈವರೆಗೆ 175 ಶಂಕಿತರ ರಕ್ತ ಮತ್ತು ಕಫವನ್ನು ಪರೀಕ್ಷೆಗೆ ಕಳುಹಿಸಿದ್ದು, ಸ್ಯಾಂಪಲ್ಗಳ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
![7 more doubtful corona patients admitted in tumkur hospital](https://etvbharatimages.akamaized.net/etvbharat/prod-images/kn-tmk-03-covid19result-script-7202233_07042020174849_0704f_1586261929_536.jpg)
ಜಿಲ್ಲೆಯಲ್ಲಿ ಇದುವರೆಗೆ 480 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. 233 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. 137 ಮಂದಿ 28 ದಿನಗಳ ಕಾಲ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 181 ಮಂದಿಯ ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿದೆ.