ETV Bharat / state

ಒಂದು ವರ್ಷದಲ್ಲಿ 35 ಅನಾಥ ಶಿಶುಗಳು ಪತ್ತೆ.. ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ ಕ್ರೂರ ಪೋಷಕರು

ತುಮಕೂರು ಜಿಲ್ಲೆಯಲ್ಲಿ ನವಜಾತ ಅನಾಥ ಶಿಶುಗಳು ಪತ್ತೆಯಾಗುತ್ತಿದ್ದು ಕಳೆದೊಂದು ವರ್ಷದಿಂದ ಇದುವರೆಗೂ 35 ಶಿಶುಗಳು ಮಕ್ಕಳ ಕಲ್ಯಾಣ ಸಮಿತಿಯ ಕೈಸೇರಿವೆ.

author img

By

Published : May 8, 2019, 8:17 PM IST

Updated : May 8, 2019, 9:32 PM IST

ಅನಾಥ ಶಿಶುಗಳ ಪತ್ತೆ

ತುಮಕೂರು: ಜಿಲ್ಲೆಯಲ್ಲಿ ನವಜಾತ ಅನಾಥ ಶಿಶುಗಳು ಪತ್ತೆಯಾಗುತ್ತಿದ್ದು ಕಳೆದೊಂದು ವರ್ಷದಿಂದ ಇದುವರೆಗೂ 35 ಶಿಶುಗಳು ಮಕ್ಕಳ ಕಲ್ಯಾಣ ಸಮಿತಿಯ ಕೈಸೇರಿವೆ.

ನವಜಾತ ಶಿಶುಗಳನ್ನು ಕರುಣೆಯಿಲ್ಲದ ಪಾಪಿಗಳು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದು ಸುಮಾರು 20 ಶಿಶುಗಳು ರಸ್ತೆ ಬದಿ, ಪೊದೆಗಳಲ್ಲಿ, ಹೊಲ ಗದ್ದೆಗಳಲ್ಲಿ ಪತ್ತೆಯಾಗಿವೆ.

ಇನ್ನು ಅನೈತಿಕ ಸಂಬಂಧ , ಹೆಣ್ಣು ಶಿಶುಗಳ ಸಂಖ್ಯೆ ಕುಟುಂಬದಲ್ಲಿ ಜಾಸ್ತಿ ಇದೆ ಎಂಬ ವಿವಿಧ ಕಾರಣಗಳಿಂದ 15 ಶಿಶುಗಳನ್ನು ಪೋಷಕರೇ ಸ್ವತಃ ಬಂದು ಮಕ್ಕಳ ಕಲ್ಯಾಣ ಸಮಿತಿಗೆ ಸುಪರ್ದಿಗೆ ಕೊಟ್ಟು ಹೋಗಿದ್ದಾರೆ.

ಅನಾಥ ಶಿಶುಗಳ ಪತ್ತೆ

ಮತ್ತೊಂದು ಆಘಾತಕಾರಿ ಅಂಶ ಎಂದರೆ ಈ ವರ್ಷ ಮಕ್ಕಳ ಕಲ್ಯಾಣ ಸಮಿತಿಯ ಬಳಿ ಇರುವ 35 ಅನಾಥ ಶಿಶುಗಳ ಪೈಕಿ 25 ಶಿಶುಗಳು ಹೆಣ್ಣುಗಳಾಗಿವೆ. ಇದನ್ನು ಗಮನಿಸಿದರೆ ಇಂದಿಗೂ ಕೂಡ ಸಮಾಜದಲ್ಲಿ ಹೆಣ್ಣು ಶಿಶುಗಳ ಬಗ್ಗೆ ಇರುವ ತಾತ್ಸಾರ ಮನೋಭಾವನೆ ಬೆಳಕಿಗೆ ಬರುತ್ತದೆ.
ಮನೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿ ಇದೆ ಎಂಬ ಉದ್ದೇಶದಿಂದ ನೀಡುತ್ತಿರುವುದಾಗಿ ಸಮಿತಿಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

ಇನ್ನು ಈ ರೀತಿ ಶಿಶುಗಳನ್ನು ಅನಾಥವಾಗಿ ಬಿಸಾಡಿ ಹೋಗುತ್ತಿರುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತದೆ.

Intro:ವರ್ಷದಲ್ಲಿ 20 ಅನಾಥ ಶಿಶುಗಳ ಪತ್ತೆ......
ಶಿಶುವೊಂದನ್ನು ಎಸೆದು ಹೋಗಿದ್ದ ಮಹಿಳೆಯ ಪಾಲು......

ತುಮಕೂರು
ತುಮಕೂರು ಜಿಲ್ಲೆಯಲ್ಲಿ ನವಜಾತ ಅನಾಥ ಶಿಶುಗಳು ಪತ್ತೆಯಾಗುತ್ತಿದ್ದು ಇದುವರೆಗೂ ಕಳೆದೊಂದು ವರ್ಷದಿಂದ 35 ಶಿಶುಗಳು ಮಕ್ಕಳ ಕಲ್ಯಾಣ ಸಮಿತಿಯ ಕೈಸೇರಿವೆ. ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿತ್ತು ಸುಮಾರು 20 ಶಿಶುಗಳು ರಸ್ತೆ ಬದಿ, ಪೊದೆಗಳಲ್ಲಿ, ಹೊಲ ಗದ್ದೆಗಳಲ್ಲಿ ಪತ್ತೆಯಾಗಿವೆ.

ಇನ್ನು ಅನೈತಿಕ ಸಂಬಂಧ , ಹೆಣ್ಣು ಶಿಶುಗಳ ಸಂಖ್ಯೆ ಕುಟುಂಬದಲ್ಲಿ ಜಾಸ್ತಿ ಇದೆ ಎಂಬ ವಿವಿಧ ಕಾರಣಗಳಿಂದ 15 ಶಿಶುಗಳನ್ನು ಪೋಷಕರೇ ಸ್ವತಹ ಬಂದು ಮಕ್ಕಳ ಕಲ್ಯಾಣ ಸಮಿತಿಗೆ ಸುಪರ್ದಿಗೆ ಕೊಟ್ಟು ಹೋಗಿದ್ದಾರೆ.
ಮತ್ತೊಂದು ಆಘಾತಕಾರಿ ಅಂಶ ಎಂದರೆ ಈ ವರ್ಷ ಮಕ್ಕಳ ಕಲ್ಯಾಣ ಸಮಿತಿಯ ಬಳಿ ಇರುವ 35 ಅನಾಥ ಶಿಶುಗಳ ಪೈಕಿ 25 ಶಿಶುಗಳು ಹೆಣ್ಣುಗಳಾಗಿವೆ. ಇದನ್ನು ಗಮನಿಸಿದರೆ ಇಂದಿಗೂ ಕೂಡ ಸಮಾಜದಲ್ಲಿ ಹೆಣ್ಣು ಶಿಶುಗಳ ಬಗ್ಗೆ ಇರುವ ತಾತ್ಸಾರ ಮನೋಭಾವನೆ ಬೆಳಕಿಗೆ ಬರುತ್ತದೆ.
ಇಬ್ಬರು ಪೋಷಕರು ಆಗ ತಾನೆ ಹುಟ್ಟಿದಂತಹ ಎರಡು ಹೆಣ್ಣು ಮಕ್ಕಳನ್ನು ತಂದೆ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿ ಇದೆ ಎಂಬ ಉದ್ದೇಶದಿಂದ ನೀಡುತ್ತಿರುವುದಾಗಿ ಸಮಿತಿಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

ಶಿಶು ಬಿಸಾಡಿದ್ದ ಮಹಿಳೆ ಜೈಲು ಪಾಲು.....
ಇನ್ನು ಈ ರೀತಿ ಶಿಶುಗಳನ್ನು ಅನಾಥವಾಗಿಸುತ್ತಿರುವರ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತದೆ. ಅದರಲ್ಲಿ ಈ ವರ್ಷ ಶಿಶುವೊಂದನ್ನು ಬಿಸಾಡಿ ಹೋಗಿದ್ದ ಮಹಿಳೆ ಜೈಲು ಪಾಲಾಗಿದ್ದಾಳೆ.
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ತನಗೆ ಜನಿಸಿದ ಮಗುವನ್ನು ರಸ್ತೆ ಬದಿಯಲ್ಲಿ ಬಿಸಾಡಿದ್ದಳು. ಈ ಕುರಿತು ಪೊಲೀಸ್ ಠಾಣೆಗೆ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ದೂರು ನೀಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಗುವಿನ ತಾಯಿಯನ್ನು ಕೂಡ ಪತ್ತೆ ಹಚ್ಚಿದ್ದರು. ನಂತರ ಮಾಡಿದ ತಪ್ಪಿಗೆ ಮಹಿಳೆ ಇದೀಗ ಜೈಲು ವಾಸ ಅನುಭವಿಸುತ್ತಿದ್ದಾಳೆ.

Body:ತುಮಕೂರು

Conclusion:
Last Updated : May 8, 2019, 9:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.