ತುಮಕೂರು: ಜಿಲ್ಲೆಯಲ್ಲಿ ಈವರೆಗೆ 1621 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 1268 ಮಾದರಿಗಳು ನೆಗೆಟಿವ್ ಬಂದಿವೆ ಎಂದು ಡಿಹೆಚ್ಒ ಡಾ. ಚಂದ್ರಿಕಾ ತಿಳಿಸಿದ್ದಾರೆ.
ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾದಲ್ಲಿಡಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ ಯಾರೂ ಇಲ್ಲ. ಒಟ್ಟು 501 ಮಂದಿಯನ್ನು ಐಸೊಲೇಷನ್ನಲ್ಲಿಡಲಾಗಿದ್ದು, ಆಸ್ಪತ್ರೆಯ ಐಸೊಲೇಷ್ನ್ನಲ್ಲಿ 101 ಮಂದಿ ಇದ್ದಾರೆ. 370 ಜನರ 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ.
ಒಟ್ಟಾರೆ ಜಿಲ್ಲೆಯಲ್ಲಿ 3 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಗುಣಮುಖರಾಗಿದ್ದಾರೆ. ಒಬ್ಬರಿಗೆ ಸೋಂಕು ದೃಢಪಟ್ಟಿದೆ. 13 ಮಾದರಿಗಳು ತಿರಸ್ಕೃತಗೊಂಡಿದ್ದು, 337 ತಪಾಸಣೆಯ ವರದಿ ನಿರೀಕ್ಷಿಸಲಾಗಿದೆ ಎಂದು ಡಾ. ಚಂದ್ರಿಕಾ ತಿಳಿಸಿದ್ದಾರೆ.