ಸೇಡಂ : ಅಗಸ್ಟ್ 12ರವರೆಗೂ ರೈಲುಗಳ ಸಂಚಾರ ಸ್ಥಗಿತಗೊಳಿಸಿರುವ ಕಾರಣ ರೈಲ್ವೆ ಇಲಾಖೆಯು ಟಿಕೇಟ್ ಕಾಯ್ದಿರಿಸಿದ ಗ್ರಾಹಕರು ಪೂರ್ಣ ಪ್ರಮಾಣದ ರಿಫಂಡ್ ಪಡೆಯುವಂತೆ ಮನವಿ ಮಾಡಿದೆ.
ಈ ಬಗ್ಗೆ ವಿಕಾರಾಬಾದ್ ರೈಲ್ವೆ ವಿಭಾಗದ ಅಧಿಕಾರಿ ವಿನೋದ್ ಅವರು ಪ್ರಕಟಣೆ ಹೊರಡಿಸಿದ್ದು, ಸೇಡಂ ಮತ್ತು ಚಿತ್ತಾಪುರ ರೈಲು ನಿಲ್ದಾಣದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8ಗಂಟೆವರೆಗೆ ಟಿಕೇಟ್ ಕೌಂಟರ್ ತೆರೆದಿರುತ್ತದೆ.
ಮಾರ್ಚ್ 22 ರಿಂದ ಅಗಸ್ಟ್ 12ರವರೆಗೆ ರೈಲ್ವೆ ಟಿಕೇಟ್ ಕಾಯ್ದಿರಿಸಿಕೊಂಡವರು ತಮ್ಮ ಟಿಕೇಟ್ ಸಮೇತ ಕೌಂಟರ್‌ಗೆ ಭೇಟಿ ನೀಡಿದ್ರೆ, ಯಾವುದೇ ಕಡಿತಗಳಿಲ್ಲದೆ ಟಿಕೇಟ್‌ನ ಪೂರ್ತಿ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.