ETV Bharat / state

ಮರಳು ಮಾಫಿಯಾಗೆ ಕಡಿವಾಣ ಹಾಕಲು ಮುಂದಾದ ಲಿಂಗಸುಗೂರು ತಹಶೀಲ್ದಾರ್

Sandal scam
Sandal scam
author img

By

Published : Apr 7, 2021, 4:35 PM IST

ರಾಯಚೂರು: ಅಕ್ರಮ ಮರಳು ಮಾಫಿಯಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮುಂದಾದ ತಹಶೀಲ್ದಾರ್ ನಾಗಪ್ರಶಾಂತ್ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಾದ್ಯಂತ ರಾತ್ರಿ ವೇಳೆ ನಡೆಯುತ್ತಿರುವ ಅಕ್ರಮ ಮರಳು ಕಳ್ಳತನದ ವಿರುದ್ಧ ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಾ ಬಂದಿವೆ. ಲಿಂಗಸುಗೂರು, ಮುದಗಲ್ಲ, ರಾಯಚೂರು ಗಡಿ ಭಾಗದ ಕೃಷ್ಣಾ ನದಿಯ ಒಡಲು ಬಗೆದು ರಾಜಸ್ವಧನ ಕಟ್ಟದೆ ಕಳ್ಳತನದಿಂದ ಹೊಸ ಮರಳು ನೀತಿ ಧಿಕ್ಕರಿಸಿ ನಡೆಸುತ್ತಿರುವ ಉದ್ಯಮಕ್ಕೆ ಪೊಲೀಸ್, ಕಂದಾಯ ಇಲಾಖೆ ಪರೋಕ್ಷ ಬೆಂಬಲ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಇದು ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಹೊಸದಾಗಿ ಬಂದಿರುವ ತಹಶೀಲ್ದಾರ್ ನಾಗಪ್ರಶಾಂತ್ ಮಂಗಳವಾರ ರಾತ್ರಿ ಯರಡೋಣ ಬಳಿ ಅಕ್ರಮವಾಗಿ ಯಾವುದೇ ದಾಖಲೆ ಇಲ್ಲದೆ ಕಳ್ಳತನದಿಂದ ಮರಳು ಸಾಗಣೆ ಮಾಡುತ್ತಿದ್ದ ಎರಡು ಟಿಪ್ಪರ್​​ಗಳನ್ನು ಜಪ್ತಿ ಮಾಡಿದ್ದು, ಲಿಂಗಸುಗೂರು ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಟಿಪ್ಪರ್ ನಂಬರ್ ಕೆ.ಎ-28 ಡಿ 5685 ಹಾಗೂ ಕೆ.ಎ-28 ಡಿ 5684 ಸಂಖ್ಯೆಯ ಟಿಪ್ಪರ್ ಮತ್ತು ಮರಳು ಜಪ್ತಿ ಮಾಡಿ ಪೊಲೀಸ್ ವಶಕ್ಕೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.