ETV Bharat / state

ಹುಬ್ಬಳ್ಳಿಯಲ್ಲೂ ಆಕ್ಸಿಜನ್ ಕೊರತೆಯಿಂದ ಉಸಿರು ಚೆಲ್ಲಿದ್ರಾ ಐವರು ಸೋಂಕಿತರು!? - ಆಕ್ಸಿಜೆನ್ ಕೊರತೆ ಹುಬ್ಬಳ್ಳಿ ಸೋಂಕಿತರ ಸಾವು

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲೈಫ್​ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಡಿ ಎಚ್ ಓ ಯಶವಂತ್ ಮದನಿಕರ ಸೇರಿದಂತೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Five people killed by oxygen shortages in hubli

author img

By

Published : May 4, 2021, 9:26 PM IST

Updated : May 4, 2021, 10:41 PM IST

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಚಾಮರಾಜನಗರ ದುರಂತ ಮರುಕಳಿಸಿದೆ. ಆಕ್ಸಿಜನ್​ ಕೊರತೆಯಿಂದಲೇ ಐವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಗರದ ಲೈಫ್ ಲೈನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಗೋಕುಲ ರಸ್ತೆಯಲ್ಲಿರುವ ಲೈಫ್​ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿ ಎಚ್ ಒ ಯಶವಂತ್ ಮದನಿಕರ ಸೇರಿದಂತೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲೂ ಆಕ್ಸಿಜನ್ ಕೊರತೆಯಿಂದ ಉಸಿರು ಚೆಲ್ಲಿದ್ರಾ ಐವರು ಸೋಂಕಿತರು!?

ಸೋಂಕಿತರ ಸಾವಿನ ಬಗ್ಗೆ ವೈದ್ಯಕೀಯ ತನಿಖೆಯ ನಂತರವೇ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಡಿಸಿಪಿ ಹೇಳಿದ್ದಾರೆ. ಇದೇ ವೇಳೆ ಡಿಹೆಚ್ಒ ಮದನಿಕರ್ ಪ್ರತಿಕ್ರಿಯಿಸಿ, ಬಹಳ ಜನ ಆಕ್ಸಿಜನ್ ನಿಂದ ಸಾವಾಗಿದೆ ಎನ್ನುತ್ತಿದ್ದಾರೆ. ಆದ್ರೆ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ. ಮಧ್ಯಾಹ್ನ 3 ರಿಂದ ಇಲ್ಲಿಯವರೆಗೆ ಐದು ಜನ ಮೃತಪಟ್ಟಿದ್ದಾರೆ. ಒಂದು ಎಕ್ಸಪಟ್೯ ಕಮಿಟಿ ಮಾಡ್ತೇವೆ‌. ತನಿಖೆ ಆದ ಮೇಲೆ ಪೂರ್ಣ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

Last Updated : May 4, 2021, 10:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.