ನೆಲ್ಯಾಡಿ: ಬಸ್ ಮತ್ತು ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ವಾಹನಗಳು ಬೆಂಕಿಯಿಂದ ಹೊತ್ತಿ ಉರಿದು ಲಾರಿ ಚಾಲಕ ಸಜೀವ ದಹನಗೊಂಡಿರುವ ಘಟನೆ ನೆಲ್ಯಾಡಿ ಗ್ರಾಮದ ಬಳಿ ನಡೆದಿದೆ.
ಮಾ.24 ತಡರಾತ್ರಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಕಂಟೈನರ್ ಲಾರಿ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿತ್ತು. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ. ಲಾರಿ ಚಾಲಕ ಲಾರಿಯಿಂದ ಹೊರಬರಲಾಗದೇ ಸಜೀವ ದಹನಗೊಂಡಿದ್ದರು.
![Fire broke out, Fire broke out after Bus and Lorry collide, Fire broke out after Bus and Lorry collide in DakshinaKannada, DakshinaKannada accident, DakshinaKannada accident news, ಬೆಂಕಿ ಅವಘಡ, ಬಸ್ ಮತ್ತು ಲಾರಿ ಡಿಕ್ಕಿ ಬಳಿಕ ಬೆಂಕಿ ಅವಘಡ, ದಕ್ಷಿಣಕನ್ನಡದಲ್ಲಿ ಬಸ್ ಮತ್ತು ಲಾರಿ ಡಿಕ್ಕಿ ಬಳಿಕ ಬೆಂಕಿ ಅವಘಡ, ದಕ್ಷಿಣಕನ್ನಡ ಅಪಘಾತ, ದಕ್ಷಿಣಕನ್ನಡ ಅಪಘಾತ ಸುದ್ದಿ,](https://etvbharatimages.akamaized.net/etvbharat/prod-images/kn-dk-01-accident-av-vis-kac10008_25032021075021_2503f_1616638821_425.jpg)
ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್ ಮತ್ತು ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ನಡುವೆ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯವನ್ನರಿತು ಕೆಳಗಿಳಿದು ಪಾರಾಗಿದ್ದಾರೆ. ಬಸ್ನಲ್ಲಿ ತುಳು ಚಿತ್ರದ ಖ್ಯಾತ ನಟಿ ನೀಮಾರೇ ಸಹ ಇದ್ದು, ಅವರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![Fire broke out, Fire broke out after Bus and Lorry collide, Fire broke out after Bus and Lorry collide in DakshinaKannada, DakshinaKannada accident, DakshinaKannada accident news, ಬೆಂಕಿ ಅವಘಡ, ಬಸ್ ಮತ್ತು ಲಾರಿ ಡಿಕ್ಕಿ ಬಳಿಕ ಬೆಂಕಿ ಅವಘಡ, ದಕ್ಷಿಣಕನ್ನಡದಲ್ಲಿ ಬಸ್ ಮತ್ತು ಲಾರಿ ಡಿಕ್ಕಿ ಬಳಿಕ ಬೆಂಕಿ ಅವಘಡ, ದಕ್ಷಿಣಕನ್ನಡ ಅಪಘಾತ, ದಕ್ಷಿಣಕನ್ನಡ ಅಪಘಾತ ಸುದ್ದಿ,](https://etvbharatimages.akamaized.net/etvbharat/prod-images/kn-dk-01-accident-av-vis-kac10008_25032021075021_2503f_1616638821_101.jpg)
ಬೆಂಕಿಯ ತೀವ್ರತೆ ಹೆಚ್ಚಾಗಿ ಎರಡೂ ವಾಹನಗಳು ಸುಟ್ಟು ಭಸ್ಮವಾಗಿದ್ದು, ಲಾರಿ ಚಾಲಕ ಮಾತ್ರ ಲಾರಿಯೊಳಗೆ ಸಿಲುಕಿ ಹೊರಬರಲಾಗದೇ ಸಜೀವ ದಹನವಾಗಿರುವ ಮಾಹಿತಿ ಲಭಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ ಬೆಂಕಿ ನಂದಿಸಿದರು. ಈ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.