ETV Bharat / state

ಎಂಬೆಸಿ ಗ್ರೂಪ್​ನ ‘ಕಾರ್ಪೊರೇಟ್ ಕನೆಕ್ಟ್’ ಕಾರ್ಯಕ್ರಮ: 69 ಐಸಿಯು ಹಾಸಿಗೆಗಳ ಕೊಡುಗೆ - ಕಾರ್ಪೊರೇಟ್ ಕನೆಕ್ಟ್

ಕೋವಿಡ್-19 ಪ್ರಕರಣಗಳಲ್ಲಿ ನಿರಂತರ ಏರಿಕೆ ಕಾಣುತ್ತಿರುವ ನಡುವೆಯೇ ಎಂಬೆಸಿ ಗ್ರೂಪ್ ಕಾರ್ಪೊರೇಟ್ ಕನೆಕ್ಟ್ ಕಾರ್ಯಕ್ರಮದಡಿ 69 ಅತ್ಯಾಧುನಿಕ ಐಸಿಯು ಹಾಸಿಗೆ ನೀಡುವ ಭರವಸೆ ನೀಡಿದೆ.

bsy
bsy
author img

By

Published : May 11, 2021, 7:22 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆಗೆ ಸ್ಪಂದಿಸಿ 69 ಅತ್ಯಾಧುನಿಕ ಐಸಿಯು ಹಾಸಿಗೆಗಳು ಮತ್ತು ಜೀವರಕ್ಷಕ ವೈದ್ಯಕೀಯ ಉಪಕರಣಗಳ ಕೊಡುಗೆಯನ್ನು ಎಂಬೆಸಿ ಗ್ರೂಪ್ ಕಾರ್ಪೊರೇಟ್ ಕನೆಕ್ಟ್ ಕಾರ್ಯಕ್ರಮದಡಿ ಪ್ರಕಟಿಸಿದೆ.

ಕೋವಿಡ್-19 ಪ್ರಕರಣಗಳಲ್ಲಿ ನಿರಂತರ ಏರಿಕೆ ಕಾಣುತ್ತಿರುವ ನಡುವೆಯೇ ಎಂಬೆಸಿ ಗ್ರೂಪ್ ಕಾರ್ಪೊರೇಟ್ ಕನೆಕ್ಟ್ ಕಾರ್ಯಕ್ರಮದಡಿ, ಎ.ಎನ್.ಜಿ, ಸ್ವಿಸ್ ರೆ, ಮೆಕ್ ಎಫೇ, ಎಕ್ಸಾ ಎಕ್ಸೆಲ್, ಕ್ಯಾಪಿಟಲ್ಯಾಂಡ್ ಮತ್ತು ಯಾಹೂ ಇಂಡಿಯಾ ಕಂಪನಿಗಳ ಸಹಯೋಗದೊಂದಿಗೆ 69 ಅತ್ಯಾಧುನಿಕ ಐಸಿಯು ಹಾಸಿಗೆ ನೀಡುವ ಭರವಸೆ ನೀಡಿದ್ದು, ಬೆಂಗಳೂರಿನ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಇವುಗಳನ್ನು ಶೀಘ್ರದಲ್ಲಿ ಅಳವಡಿಸುವ ಘೋಷಣೆ ಮಾಡಿದೆ‌.

ನಗರದ ಹಳೇ ಮದ್ರಾಸ್ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 24, ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆಯಲ್ಲಿ 25 ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಐಸಿಯು ಹಾಸಿಗೆಗಳನ್ನು ಅಳವಡಿಸಲಾಗುವುದು. 3-4 ವಾರಗಳಲ್ಲಿ ಈ ಹೊಸ ಮೂಲಸೌಕರ್ಯ ರೂಪುಗೊಳ್ಳಲಿದೆ.

ಕಾರ್ಪೊರೇಟ್ ಸಂಸ್ಥೆಗಳು ಸರ್ಕಾರದ ಜೊತೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಸಿಎಂ ಯಡಿಯೂರಪ್ಪ ಇತ್ತೀಚೆಗೆ ಕರೆ ನೀಡಿದ್ದರು. ತಮ್ಮ ಕರೆಗೆ ಸ್ಪಂದಿಸಿ ಐಸಿಯು ಬೆಡ್ ಕೊಡುಗೆ ನೀಡುತ್ತಿರುವುದಕ್ಕೆ ಟ್ವೀಟ್ ಮೂಲಕ ಸಿಎಂ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 8 ಬಿಬಿಎಂಪಿ ವಲಯಗಳಲ್ಲಿ ತಲಾ 500 ಐಸಿಯು ಹಾಸಿಗೆಗಳನ್ನು ಸ್ಥಾಪಿಸಲು ನೋಡಲ್ ಅಧಿಕಾರಿಯನ್ನಾಗಿ ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ (ಐಪಿಎಸ್) ಅವರನ್ನು ನೇಮಕ ಮಾಡಿದ್ದರು. ಮುಖ್ಯಮಂತ್ರಿಗಳ ಆದೇಶದಂತೆ ಕಾರ್ಯಪ್ರವೃತ್ತರಾಗಿರುವ ನೋಡೆಲ್ ಅಧಿಕಾರಿ ಡಾ.ಹರ್ಷ ಅವರ ಮೂಲಕ ಇದೇ ಮೇ 8 ರಂದು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯು 86 ತುರ್ತು ಚಿಕಿತ್ಸಾ ಘಟಕಗಳ ಐಸಿಯು ಹಾಸಿಗೆಗಳನ್ನು ನೀಡುವುದಾಗಿ ಪ್ರಕಟಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

‘’ಆಸ್ಪತ್ರೆಗಳ ತುರ್ತು ಸೇವೆ ಮೂಲಸೌಕರ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ನೆರವಾದ ಎಂಬಸ್ಸಿ ಹಾಗೂ ಇತರ ಕಂಪನಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸವಾಲಿನ ಸಮಯದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬೇರೆ ಕಾರ್ಪೊರೇಟ್ ಕಂಪನಿಗಳು ಕೂಡ ಮುಂದೆ ಬರುವ ವಿಶ್ವಾಸವಿದೆ.‌ ಅನೇಕ ಕಂಪನಿಗಳು ಸಿಎಸ್ ಆರ್ ಅನುದಾನವನ್ನು ಬಳಸಿಕೊಂಡು ಕೋವಿಡ್ ವಿರುದ್ಧ ಹೋರಾಟ ನಡೆಸಲು ಸರ್ಕಾರದೊಂದಿಗೆ ಕೈ ಜೋಡಿಸಿವೆ" ಎಂದು ನೋಡಲ್ ಅಧಿಕಾರಿ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

"ಬೇರೆ ಸರ್ಕಾರಿ ಆಸ್ಪತ್ರೆಗಳು, ಮೆಡಿಕಲ್‌‌ ಕಾಲೇಜು ಹಾಗೂ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಐಸಿಯು ಅಳವಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕೋವಿಡ್ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಉತ್ಸುಕರಾಗಿರುವ ಖಾಸಗಿ ಉದ್ಯಮ ವಲಯ nodalicubbmp@gmail.com ಇ-ಮೇಲ್ ನಲ್ಲಿ ಸರ್ಕಾರದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು" ಎಂದು ನೋಡಲ್ ಅಧಿಕಾರಿ ಡಾ. ಪಿ.ಎಸ್.ಹರ್ಷ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.