ಬೆಳಗಾವಿ: ಜಿಎಸ್‍ಟಿ ಅಧಿಕಾರಿಗಳೆಂದು ಬ್ಲಾಕ್ಮೇಲ್ ಮಾಡಿ ಅಕಾಡೆಮಿ ಸಿಬ್ಬಂದಿಗೆ ಹಣದ ಬೇಡಿಕೆ ಇಟ್ಟಿದ್ದ ಮೂವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ನಗರದ ನಿವಾಸಿಗಳಾದ ಅಶೋಕ ಪರಶುರಾಮ ಸಾವಂತ, ಜಯವಂತ ಬಾಡಿವಾಲೆ ಬಂಧಿತರು. ಮಹೇಶ ಪಾಟೀಲ ಎಂಬಾತ ಪರಾರಿಯಾಗಿದ್ದಾನೆ.
ನಗರದ ಬಸವೇಶ್ವರ ವೃತ್ತದಲ್ಲಿರುವ ಡ್ರೀಮ್ ಫ್ಲೈ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಅಕಾಡೆಮಿಗೆ ಹೋಗಿರುವ ಈ ಮೂವರು ತಾವು ಜಿಎಸ್‍ಟಿ ಅಧಿಕಾರಿಗಳು ಎಂದು ನಂಬಿಸಿದ್ದಾರೆ. ತಾವು ಜಿಎಸ್‍ಟಿ ತುಂಬಿಲ್ಲ, ಹೀಗಾಗಿ ಕಚೇರಿ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಅಕಾಡೆಮಿ ಮಾಲೀಕ ತಿರುಮಲ ವಿಂಜುಮರ್ ಸುದರ್ಶನ್, ಶಹಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಶಹಾಪುರ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.