ETV Bharat / state

ಯುವನಿಧಿ ಯೋಜನೆಗೆ ಅದ್ಧೂರಿ ಚಾಲನೆ: ಫಲಾನುಭವಿಗಳ ಖಾತೆಗೆ ಹಣ ಜಮೆ - Yuva Nidhi program

ಯುವನಿಧಿ ಗ್ಯಾರಂಟಿ ಯೋಜನೆಗೆ ಶಿವಮೊಗ್ಗದ ಫ್ರೀಡಂ ಪಾರ್ಕ್​ನಲ್ಲಿ ನಡೆದ ಬೃಹತ್​ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ.

yuva-nidhi-scheme-launched-by-karnataka-government
ಯುವನಿಧಿ ಯೋಜನೆಗೆ ಅದ್ಧೂರಿ ಚಾಲನೆ: ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ
author img

By ETV Bharat Karnataka Team

Published : Jan 12, 2024, 3:27 PM IST

Updated : Jan 12, 2024, 4:42 PM IST

ಯುವನಿಧಿ ಯೋಜನೆಗೆ ಅದ್ಧೂರಿ ಚಾಲನೆ

ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ನಗರದ ಫ್ರೀಡಂ ಪಾರ್ಕ್​ನಲ್ಲಿ ನಡೆದ ಬೃಹತ್​ ಸಮಾವೇಶದಲ್ಲಿ ಚಾಲನೆ ಸಿಕ್ಕಿದೆ. ಯೋಜನೆಯ ಕೆಲ ಫಲಾನುಭವಿಗಳಿಗೆ ಚೆಕ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ​ ಇತರ ಸಚಿವರುಗಳು ಚಾಲನೆ ನೀಡಿದರು. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿದರು.

ರಾಜ್ಯ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಯುವನಿಧಿಯು ಕೊನೆಯ ಯೋಜನೆಯಾಗಿದೆ. ಇದರೊಂದಿಗೆ ಎಲ್ಲ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಆದಂತಾಗಿದೆ. ಇದಕ್ಕೆ ಸುಮಾರು 70 ಸಾವಿರ ಯುವಕರು ನೊಂದಣಿ ಮಾಡಿಕೊಂಡಿದ್ದಾರೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಐತಿಹಾಸಿಕ ದಿನ ಎಂದರೆ ತಪ್ಪಾಗಲಾರದು. ನಾವು ಚುನಾವಣೆ ಪೂರ್ವದ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜನರ ಮುಂದಿಟ್ಟಿದ್ದೆವು. ಆ ಎಲ್ಲಾ ಗ್ಯಾರಂಟಿಗಳನ್ನು ಇಂದು ಪೂರೈಸಿದ್ದೇವೆ. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವನ್ನೂ ಜಾರಿ ಮಾಡುತ್ತೇವೆ ಎಂದಿರಲಿಲ್ಲ. ಆದರೂ ಸಹ ಅಧಿಕಾರಕ್ಕೆ ಬಂದ ಬಳಿಕ ಐದೂ ಗ್ಯಾರಂಟಿ ನೀಡಿದ್ದೇವೆ ಎಂದು ತಿಳಿಸಿದರು.

ಸಮಾಜದ ಬಡವರು, ಶೋಷಿತರ ಪರವಾಗಿ, ಅವರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಬೇಕೆಂದು ಯೋಜನೆಗಳನ್ನು ತರಲಾಗಿದೆ. ಕೊಟ್ಟ ಮಾತಿನಂತೆಯೇ ನಡೆದುಕೊಂಡಿದ್ದೇವೆ. ಬಹಳ ಜನ ಯುವನಿಧಿ ಕಾರ್ಯಕ್ರಮ ಯಾಕೆ ಪ್ರಾರಂಭ ಮಾಡಿಲ್ಲವೆಂದು ಕೇಳುತ್ತಿದ್ದರು. ಪದವೀಧರರು, ಡಿಪ್ಲೊಮಾ ಓದಿದ ಬಳಿಕ 180 ದಿನಗಳ ಬಳಿಕವೂ ಉದ್ಯೋಗ ಸಿಗದ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಇದಾಗಿದೆ ಎಂದರು.

  • ಶಿವಮೊಗ್ಗದಲ್ಲಿ ಇಂದು ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ "ಯುವನಿಧಿ" ಯೋಜನೆಯನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿದರು.

    ಡಿಸಿಎಂ @DKShivakumar, ವೈದ್ಯಕೀಯ ಶಿಕ್ಷಣ ಸಚಿವ @S_PrakashPatil, ಇಂಧನ ಸಚಿವ @thekjgeorge, ಪ್ರಾಥಮಿಕ ಶಿಕ್ಷಣ ಸಚಿವ @Madhu_Bangarapp, ಕ್ರೀಡಾ ಸಚಿವ… pic.twitter.com/sH6mzNSFAK

    — CM of Karnataka (@CMofKarnataka) January 12, 2024 " class="align-text-top noRightClick twitterSection" data=" ">

ಯುವನಿಧಿ ಕಾರ್ಯಕ್ರಮವನ್ನು ಕೌಶಲ್ಯಭಿವೃದ್ಧಿ ಇಲಾಖೆಯಿಂದ ನಡೆಸಲಾಗುತ್ತಿದೆ. ಜೂನ್ 11 ರಿಂದ 128 ಲಕ್ಷ ಮಹಿಳೆಯರು ಉಚಿತವಾಗಿ ಬಸ್​​ ಪ್ರಯಾಣ ಮಾಡಿದ್ದಾರೆ. ಕಲಬುರಗಿಯಲ್ಲಿ ಗೃಹ ಜ್ಯೋತಿಗೆ ಚಾಲನೆ ನೀಡಿದ ಬಳಿಕ, 1.65 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನ ಭಾಗ್ಯದಡಿ 10 ಕೆ.ಜಿ ಅಕ್ಕಿ ಕೊಡಬೇಕು ಎಂದು ಹೇಳಿದ್ದೆವು, ಆದರೆ ಮಾರುಕಟ್ಟೆಯಲ್ಲಿ ಅಕ್ಕಿ ಸಿಗಲಿಲ್ಲ, ಕೇಂದ್ರ ಸರ್ಕಾರವೂ ಕೊಡಲಿಲ್ಲ. ಇದಕ್ಕೆ ಅಕ್ಕಿಗೆ ಬದಲಾಗಿ 170 ರೂ. ನೀಡುತ್ತಿದ್ದೇವೆ. ಇಂದು, ನಾಳೆ, ಮುಂದೆಯೂ ನೀಡುತ್ತೇವೆ ಎಂದು ತಿಳಿಸಿದರು.

1.18 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಕಲಾಗುತ್ತಿದೆ. ಇದೀಗ ಯುವನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 2 ವರ್ಷ ಭತ್ಯೆ ನೀಡುವ ಜೊತೆಗೆ ಉದ್ಯೋಗ ತರಬೇತಿ, ಉದ್ಯೋಗ ಮೇಳಗಳನ್ನು ಮಾಡಲಾಗುತ್ತಿದೆ. ರಾಜ್ಯ, ದೇಶ ಹಾಗೂ ವಿದೇಶದಲ್ಲೂ ಉದ್ಯೋಗ ಅವಕಾಶ ಕೊಡಿಸಲಿದ್ದೇವೆ. ಬೇಡಿಕೆ ಇರುವ ಉದ್ಯೋಗಗಳಿಗೆ ತರಬೇತಿ ನೀಡಲಾಗುತ್ತದೆ. ನಿರುದ್ಯೋಗ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಉದ್ದೇಶ. ಸಾಮಾಜಿಕ, ಆರ್ಥಿಕವಾಗಿ ಯಾರೂ ಭ್ರಮನಿರಸವಾಗಬಾರದು ಎಂದರು.

ಸ್ವಾಮಿ ವಿವೇಕಾನಂದರ ಜಯಂತಿಯಂದೇ ಯುವ ನಿಧಿಗೆ ಚಾಲನೆ ಸಿಕ್ಕಿದೆ. 70 ಸಾವಿರ ಯುವಕರು ನೋಂದಾಯಿಸಿಕೊಂಡಿದ್ದಾರೆ. 3.96 ಲಕ್ಷ ಪದವೀಧರರು, 18 ಸಾವಿರ ಡಿಪ್ಲೊಮಾ ಪೂರೈಸಿದವರು ನೋಂದಾಯಿಸಿಕೊಂಡರೆ ನಿರುದ್ಯೋಗ ಭತ್ಯೆ ಜಮೆ ಮಾಡಲಾಗುತ್ತದೆ. ಯುವಕ- ಯುವತಿಯರಿಗೆ ಉದ್ಯೋಗ ಸಿಕ್ಕರೆ ಭತ್ಯೆ ನಿಲ್ಲಿಸಲಾಗುವುದು. ಯಾವ ಸಮಾಜ ಹಸಿದವರಿಗೆ ಅನ್ನ ಕೊಡಲ್ಲವೋ, ಅಂತಹ ಸಮಾಜದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಸಂತ ವಿವೇಕಾನಂದರು ಹೇಳಿದ್ದರು ಎಂದು ಸಿಎಂ ನೆನೆದರು.

ಇಂದು ನಿರುದ್ಯೋಗ ಸಮಸ್ಯೆ ಬೆಳೆದಿದ್ದು, ಯುವಕರು ತಮಗೆ ಭವಿಷ್ಯ ಇಲ್ಲ ಎಂದು ಭ್ರಮನಿರಸಗೊಂಡಿದ್ದಾರೆ. ಅವರ ಸಮಸ್ಯೆ‌‌ ನಿವಾರಣೆಗೆ ಯುವನಿಧಿ ಯೊಜನೆ ಜಾರಿ‌ ಮಾಡಲಾಗಿದೆ. ಪ್ರತಿ ಕುಟುಂಬ 5-6 ಸಾವಿರ ರೂ. ಪಡೆಯುತ್ತಿದೆ. ಇದನ್ನು ಯೂನಿವರ್ಸಲ್ ಬೇಸಿಂಗ್ ಇನ್‌ಕಮ್ ಎಂದು ಕರೆಯುತ್ತಾರೆ. ನಮ್ಮ ಸರ್ಕಾರದಲ್ಲಿ ಅದನ್ನು ಜಾರಿಗೊಳಿಸಿದ್ದೇವೆ. ಸಾಮಾಜಿಕ ಆರ್ಥಿಕ ಶಕ್ತಿ ಎಲ್ಲರಿಗೂ ಬರಬೇಕು. ಸಂವಿಧಾನದ ಆಶಯಗಳನ್ನು ಜಾರಿ ಮಾಡುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.

ಇದನ್ನು ಓದಿ: ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಸಿಎಂ ಚಾಲನೆ - LIVE

Last Updated : Jan 12, 2024, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.