ETV Bharat / state

ಶಿವಮೊಗ್ಗ: ಮದುವೆ ನಿರಾಕರಿಸಿದ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ - ಚಾಕುವಿನಿಂದ ಇರಿದ

ಪ್ರಿಯಕರನೊಬ್ಬ ಮದುವೆಯಾಗಲು ನಿರಾಕರಿಸಿದ ತನ್ನ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

young-man-stabbed-his-girlfriend-for-refused-to-marry-in-shivamogga
ಶಿವಮೊಗ್ಗ: ಮದುವೆ ನಿರಾಕರಿಸಿದ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ
author img

By ETV Bharat Karnataka Team

Published : Jan 16, 2024, 8:01 PM IST

ಶಿವಮೊಗ್ಗ: ಮದುವೆಯಾಗಲು ನಿರಾಕರಿಸಿದ ಪ್ರೇಯಸಿಗೆ ಪ್ರಿಯಕರನೊಬ್ಬ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯ ಚೇತನ್ (28) ಚಾಕು ಇರಿದ ಪ್ರಿಯಕರ. ಅದೇ ಗ್ರಾಮದ ಯುವತಿ ಚಾಕು ಇರಿತಕ್ಕೊಳಗಾದ ಪ್ರೇಯಸಿ. ಕಳೆದ ಏಳು ವರ್ಷಗಳಿಂದ ಚೇತನ್ ಯುವತಿ ಪ್ರೀತಿಸುತ್ತಿದ್ದ. ಯುವತಿ ಮದುವೆಗೆ ನಿರಾಕರಿಸಿದ್ದರಿಂದ ಕೋಪಗೊಂಡ ಚೇತನ್​ ಇಂದು ನಗರದ ಶಿವಪ್ಪ‌ ನಾಯಕ ವೃತ್ತದಲ್ಲಿ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ.

ಗಾಯಾಳು ಯುವತಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತನ್​ಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಇದರಿಂದ ಚೇತತ್​ ತಲೆ ಭಾಗಕ್ಕೆ ಗಾಯಗಳಾಗಿವೆ. ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಗೆ ಚಾಕು ಇರಿದ ಆರೋಪಿ ಚೇತನ್ ಮಾತನಾಡಿ, "ತಾನು ಕಳೆದ 7 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದೆ. ಮೊದಲು ಆಕೆಗೆ ಲವ್ ಪ್ರಪೋಸ್ ಮಾಡಿದೆ. ಆಗ ಆಕೆ ನನ್ನ ಪ್ರೀತಿಯನ್ನು ನಿರಾಕರಿಸಿದಳು. ಕೆಲ ದಿನಗಳ ನಂತರ ನನ್ನನ್ನು ಪ್ರೀತಿಸುವುದಾಗಿ ತಿಳಿಸಿದಳು. ಈ ವಿಚಾರ ಆಕೆಯ ಮನೆಯವರಿಗೂ ತಿಳಿದಿತ್ತು. ನಾನು ಅವರ ಮನೆಗೆ ಆಗಾಗ್ಗ ಹೋಗುತ್ತಿದೆ. ನಾನು ಅವಳ ತಮ್ಮನಿಗೆ ವ್ಯವಹಾರಕ್ಕೆ ಹಣ ನೀಡಿದ್ದೇನೆ. ನಾನು ಯುವತಿಯನ್ನು ಮದುವೆಗೆಯಾಗಲು ಬಯಸಿದ್ದೆ" ಎಂದರು.

"ಮದುವೆ ಮಾಡಿಕೊಡಬೇಕು ಎಂದು ನಾನು ನನ್ನ ಪೋಷಕರಿಂದ ಯುವತಿಯ ಪೋಷಕರಿಗೆ ಕೇಳಿಸಿದ್ದೆ. ಯುವತಿಯ ಪೋಷಕರು ಒಂದು ತಿಂಗಳು ಕಾಲಾವಕಾಶ ಕೇಳಿದ್ದರು. ಆದರೆ, ಕೊನೆಗೆ ಯುವತಿಯ ಪೋಷಕರು ಇದೇ ಊರಿನಲ್ಲಿ ತನ್ನ ಮಗಳನ್ನು ಮದುವೆ ಮಾಡಿಕೊಡಲ್ಲ ಎಂದು ಹೇಳಿದ್ದರು. ಇಬ್ಬರು ಪ್ರೀತಿಸುತ್ತಿದ್ದೆವು. ಇಬ್ಬರು ನಿತ್ಯ ಫೋನ್​ನಲ್ಲಿ ಮೇಸೆಜ್ ಮಾಡುತ್ತಿದ್ದೆವು. ಯುವತಿ ಮನೆಯವರು ಮದುವೆ ಬೇಡ ಎಂದ ತಕ್ಷಣ ನನ್ನನ್ನು ನಿರ್ಲಕ್ಷ್ಯ ಮಾಡ ತೊಡಗಿದಳು. ಇಂದು ಆಕೆಯೊಂದಿಗೆ ಮಾತನಾಡಿದೆ, ಅವಳು ಮದುವೆ ಆಗಲ್ಲ ಎಂದಳು. ಇದರಿಂದ ಇಂದು ಆಕೆಯನ್ನು ಸಾಯಿಸಿ, ನಾನು ಸಾಯಲು ಸಿದ್ಧವಾಗಿದ್ದೆ" ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು: ಸಂಬಂಧ ಒಲ್ಲೆ ಎಂದವಳಿಗೆ ಚಾಕು ಇರಿತ.. ಆರೋಪಿ ಬಂಧನ

ಮಹಿಳೆಗೆ ಚಾಕು ಇರಿತ, ಆರೋಪಿ ಬಂಧನ(ಬೆಂಗಳೂರು): ಇತ್ತೀಚಿಗೆ, ವ್ಯಕ್ತಿಯೊಬ್ಬ ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿದಿದ್ದ ಘಟನೆ ಬೆಂಗಳೂರಿನ ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ನಡೆದಿತ್ತು. ಚೂರಿ ಇರಿತಕ್ಕೊಳಗಾದ ಮಹಿಳೆಯನ್ನು ಹಬೀಬಾ ತಾಜ್ (30) ಎಂದು ಗುರುತಿಸಲಾಗಿತ್ತು. ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಆರೋಪಿ ಶೇಕ್ ಮೆಹಬೂಬ್ (32)ನ್ನು ಪೊಲೀಸರು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.