ETV Bharat / state

ಶಿವಮೊಗ್ಗ: ರೈಲ್ವೆಯಲ್ಲಿ ಉದ್ಯೋಗ ಭರವಸೆ; ಮಹಿಳೆಯ ವಿರುದ್ಧ ಹಣ ಪಡೆದು ವಂಚನೆ ಆರೋಪ - ವಂಚನೆ

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರು ಲಕ್ಷಗಟ್ಟಲೆ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವಂಚನೆ
ವಂಚನೆ
author img

By ETV Bharat Karnataka Team

Published : Sep 3, 2023, 8:26 AM IST

ವಂಚನೆಗೊಳಗಾದವರ ಹೇಳಿಕೆ

ಶಿವಮೊಗ್ಗ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಮಲೆನಾಡಿನ ಮೂವರಿಗೆ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರ ತಾಲೂಕು ಗವಟೂರು‌ ನಿವಾಸಿ ಶ್ವೇತ ಎಂಬವರ ವಿರುದ್ಧ ಕೇಸು ದಾಖಲಾಗಿದೆ.

ವಂಚನೆಗೊಳಗಾದ ಅರ್ಜುನ್, ನವೀನ್ ಹಾಗೂ ಆದರ್ಶ ಎಂಬವರು, ಶ್ವೇತ ನಮ್ಮಿಂದ ಹಣ ಪಡೆದು ಕೆಲಸ ಕೊಡಿಸಿಲ್ಲ ಎಂದು ದೂರು ದಾಖಲಿಸಿದ್ದಾರೆ. ಶ್ವೇತಾ ಹೊಸನಗರ ತಾಲೂಕು ರಿಪ್ಪನ್‌ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಹಾಗೂ ಸಣ್ಣ ಪ್ರಮಾಣದ ಗಾರ್ಮೆಂಟ್ಸ್‌ ನಡೆಸುತ್ತಿದ್ದಾರೆ. ಇವರು ನಿರುದ್ಯೋಗಿ ಅಮಾಯಕ ಯುವಕರನ್ನು ಪರಿಚಯಿಸಿಕೊಂಡು, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣದ ಕುರಿತು ಮೂವರು ಈಟಿವಿ ಭಾರತ್​ಗೆ ತಾವು ಮೋಸ ಹೋಗಿರುವ ಕುರಿತು ಮಾಹಿತಿ ನೀಡಿದರು. "ಶ್ವೇತ ಅವರು ಪ್ರಶಾಂತ್ ದೇಶಪಾಂಡೆ ಎನ್ನುವವರ ಜೊತೆ ಸೇರಿ ಮೋಸ ಮಾಡುತ್ತಿದ್ದಾರೆ. ಹಣ ನೀಡಿದವರು ಸಾಕಷ್ಟು ಒತ್ತಡ ಹಾಕಿದರೆ ಅವರನ್ನು ಬೆಂಗಳೂರಿಗೆ ಕರೆಯಿಸಿ, ರೈಲ್ವೆ ನಿಲ್ದಾಣದ ಕಚೇರಿಗೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತು ಕಾಯಿಸಿ ಅಧಿಕಾರಿಗಳು ಇಂದು ಬರಲ್ಲ, ನಾಳೆ ಬರ್ತಾರೆ ಎಂದು ಹೇಳುತ್ತಾರೆ. ಸುಮ್ಮನೆ ಕೆಲವು ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡು ಕಳುಹಿಸುತ್ತಾರೆ.‌ ನಕಲಿ ನೇಮಕಾತಿ ಪತ್ರ ನೀಡಿ ಮೋಸ ಮಾಡುವುದನ್ನೇ ತಮ್ಮ ಕಸುಬಾಗಿಸಿಕೊಂಡಿದ್ದಾರೆ" ಎಂದಿದ್ದಾರೆ.

"ಪ್ರಶಾಂತ ದೇಶಪಾಂಡೆ ಎಂಬವರನ್ನು ಮದುವೆಯಾಗಲಿದ್ದೇನೆ. ಅವರು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪರಿಚಯಿಸುತ್ತಾರೆ. ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಟೆಂಡರ್ ಕೆಲಸ ಪ್ರಾರಂಭವಾಗಿದೆ. ಆದರ್ಶ ಅವರಿಗೆ ಟೆಂಡರ್​ನಲ್ಲಿ ಕೆಲಸ, ನವೀನ್‌ ಪತ್ನಿಗೆ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಹುದ್ದೆ ಹಾಗೂ ಅರ್ಜುನ್‌ಗೆ ಹೆಚ್.ಆರ್ ಕೆಲಸ ಕೊಡಿಸುತ್ತೇವೆ ಎಂದು ಆದರ್ಶ್, ನವೀನ ಹಾಗೂ ಅರ್ಜುನ್​ ಬಳಿಯಿಂದ ಒಟ್ಟು 14.47 ಲಕ್ಷ ರೂ. ಪಡೆದಿದ್ದಾರೆ. ಇದಾದ ನಂತರ ಮೋಸ ಹೋಗಿರುವುದಾಗಿ ಎಂದು ತಿಳಿದು ಹಣ ವಾಪಸ್ ಕೇಳಲು ಹೋದಾಗ, ತಮ್ಮ ಮೇಲೆಯೇ ರೇಪ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ" ಎಂದು ದೂರುದಾರರು ಹೇಳಿದ್ದಾರೆ.

ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವವರೆಗೂ ಆದರ್ಶ್​ ಜೊತೆ ಫೋನ್ ಸಂಪರ್ಕದಲ್ಲಿದ್ದ ಶ್ವೇತ ಕೇಸು ದಾಖಲಾಗುತ್ತಿದ್ದಂತೆಯೇ ಫೋನ್​ ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ಈಗ ಕಾಣೆಯಾಗಿದ್ದಾರೆ. ತಕ್ಷಣ ಆರೋಪಿಯನ್ನು ಬಂಧಿಸಬೇಕು. ಈ ರೀತಿ ಬೇರೆ ಯಾರಿಗೂ ಮೋಸ ಅವರು ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 'ಮದುವೆ ಭರವಸೆ ನೀಡಿ ವಂಚಿಸಿದ ಕಾನ್ಸ್​ಟೇಬಲ್'​: ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.