ETV Bharat / state

ತುಂಗಾ ಅಣೆಕಟ್ಟು ಭರ್ತಿ: 7,300 ಕ್ಯೂಸೆಕ್ ನೀರು ಬಿಡುಗಡೆ

ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದ ಬಳಿಯ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರಗಡೆ ಹರಿಸಲಾಗ್ತಿದೆ.

Water released from Tunga dam
ತುಂಗಾ ಅಣೆಕಟ್ಟು ಭರ್ತಿ
author img

By

Published : Jun 14, 2021, 11:58 AM IST

ಶಿವಮೊಗ್ಗ : ಸರಿಯಾದ ಸಮಯಕ್ಕೆ ಮಳೆಯಾದ ಪರಿಣಾಮ ಜಿಲ್ಲೆಯ ಪ್ರಮುಖ ಜಲಾಶಯವಾದ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, 7,300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದ ಬಳಿಯ ತುಂಗಾ ಅಣೆಕಟ್ಟಿನ 21 ಕ್ರಸ್ಟ್ ಗೇಟ್​ಗಳ ಮೂಲಕ ನೀರು ಹೊರಗಡೆ ಹರಿಸಲಾಗುತ್ತಿದೆ.

ಗಾಜನೂರು ಅಣೆಕಟ್ಟು ರಾಜ್ಯದ ಅತಿ ಚಿಕ್ಕ ಅಣೆಕಟ್ಟು ಎಂಬ ಖ್ಯಾತಿ ಹೊಂದಿದೆ. ಈ ಅಣೆಕಟ್ಟು 2.85 ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಸದ್ಯ, ಅಣೆಕಟ್ಟಿನ 21 ಕ್ರಸ್ಟ್ ಗೇಟ್​ಗಳ ಮೂಲಕ 1,500 ಕ್ಯೂಸೆಕ್ ನೀರು‌ ನದಿಗೆ ಬಿಡಲಾಗುತ್ತಿದೆ. ಉಳಿದ‌ 5,800 ಕ್ಯೂಸೆಕ್ ನೀರನ್ನು ಪವರ್ ಹೌಸ್​ಗೆ ಬಿಡುಗಡೆ ಮಾಡಲಾಗಿದೆ.

ಜನವರಿಯಿಂದ ಅಲ್ಪ ಸ್ವಲ್ಪ ಮಳೆಯಾಗುತ್ತಿರುವುದರಿಂದ ಈ ಬಾರಿ ಅಣೆಕಟ್ಟು ಜೂನ್ ಎರಡನೇ ವಾರಕ್ಕೆ ತುಂಬಿದೆ. ತುಂಗಾ‌ ಮೇಲ್ದಂಡೆಯ ಇಂಜಿನಿಯರ್ ಹಾಗೂ ತುಂಗಾ ಅಣೆಕಟ್ಟೆಯ ಸಿಬ್ಬಂದಿ ಪೂಜೆ ಸಲ್ಲಿಸಿ ನದಿಗೆ ನೀರು ಬಿಟ್ಟಿದ್ದಾರೆ.

ನದಿಗೆ ನೀರು ಬಿಡುವ ಬಗ್ಗೆ ನದಿ ಪಾತ್ರದ ಜನರಿಗೆ ಒಂದು ವಾರದ ಹಿಂದೆಯೇ ಎಚ್ಚರಿಕೆ ನೀಡಲಾಗಿದೆ.

ಓದಿ : ದ.ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅನಾಹುತ: 1 ಸಾವು, 14 ಮನೆಗಳಿಗೆ ಹಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.