ETV Bharat / state

ಭದ್ರೆಯಿಂದ ನೀರು ಬಿಡುಗಡೆ: ಭದ್ರಾವತಿ ಹೊಸ ಸೇತುವೆ ಮೇಲಿನ ಸಂಚಾರ ಬಂದ್ - ಭದ್ರಾವತಿಯ ಹೊಸ ಸೇತುವೆ ಸಂಚಾರ ಬಂದ್

ಭದ್ರಾ ಅಣೆಕಟ್ಟೆಯಿಂದ ನದಿಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಭದ್ರಾವತಿಯ ಹೊಸ ಸೇತುವೆ ಮುಳುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸೇತುವೆ ಮೂಲಕ ಯಾರೂ ಸಂಚರಿಸದಂತೆ ಪೊಲೀಸ್ ಇಲಾಖೆಯು ಬ್ಯಾರಿಕೇಡ್​ ಹಾಕಿದೆ.

ಭದ್ರಾವತಿಯ ಹೊಸ ಸೇತುವೆ ಸಂಚಾರ ಬಂದ್
ಭದ್ರಾವತಿಯ ಹೊಸ ಸೇತುವೆ ಸಂಚಾರ ಬಂದ್
author img

By

Published : Sep 20, 2020, 4:45 PM IST

ಶಿವಮೊಗ್ಗ: ಕಳೆದೆರಡು ದಿನದಿಂದ ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಪರಿಣಾಮ ಭದ್ರಾವತಿಯ ಹೊಸ ಸೇತುವೆ ಮೇಲಿನ ಸಂಚಾರ ಬಂದ್ ಆಗಿದೆ.

ಭದ್ರಾವತಿಯ ಹೊಸ ಸೇತುವೆ ಮೇಲಿನ ಸಂಚಾರ ಬಂದ್

ಜನತೆಗೆ ಓಡಾಡಲು ಹಳೆ ಸೇತುವೆ ಇದ್ದು, ಹೊಸ ಸೇತುವೆಯು ರಸ್ತೆ ಮಟ್ಟದಿಂದ ಕೆಳಗಿದೆ. ಇದನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಇದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ, ಸೇತುವೆಯ ಮೇಲೆ ನೀರು ಹರಿಯುತ್ತದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆ ಮಾಡುತ್ತಿದ್ದಂತೆಯೇ ಹೊಸ ಸೇತುವೆಯ ಸಂಚಾರನ್ನು ಎರಡು ಕಡೆಯಿಂದ ಬಂದ್ ಮಾಡಲಾಗಿದೆ.

ಪೊಲೀಸ್ ಇಲಾಖೆಯು ಸೇತುವೆ ಎರಡು ಕಡೆಯಿಂದ ಬ್ಯಾರಿಕೇಡ್​ ಹಾಕಿ ಸಂಚಾರವನ್ನು ಬಂದ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.