ಶಿವಮೊಗ್ಗ: ನಗರದ ಹೆಲಿಪ್ಯಾಡ್ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಬೆಳಗ್ಗೆ ಹೆಲಿಪ್ಯಾಡ್ ಅಂಗಳದಲ್ಲಿ ವಾಯುವಿಹಾರಕ್ಕೆ ಬಂದವರು ಈ ಕುರಿತು ಮಾಹಿತಿ ನೀಡಿದ್ದಾರೆ.
ನಂತರದಲ್ಲಿ ಸ್ಥಳಕ್ಕೆ ಆಗಮಿಸಿದ ದೊಡ್ಡಪೇಟೆ ಪೊಲೀಸರು ಈ ಕುರಿತು ತನಿಖೆ ನಡೆಸಿದಾಗ ಕೊಳದ ಪಕ್ಕ ಮಹಿಳೆಯ ಚಪ್ಪಲಿ ಸಿಕ್ಕಿದ್ದು, ಹೆಲಿಪ್ಯಾಡ್ನ ಅಂಗಳದಲ್ಲಿರುವ ಲಾನ್ಗೆ ನೀರು ಪೂರೈಕೆಗೆ ನಿರ್ಮಿಸಲಾಗಿದ್ದ ಕೊಳದಲ್ಲಿ ಶವ ಪತ್ತೆಯಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿರಬಹುದೆಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಮಹಿಳೆಯ ಗುರುತು ಪತ್ತೆಗೆ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದ್ದು, ಇದು ಕೊಲೆಯೋ ಆತ್ಮಹತ್ಯೆಯೋ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬೇಕಿದೆ. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.