ಶಿವಮೊಗ್ಗ: ಹಾರನಹಳ್ಳಿ ಹಾಗೂ ದಾವಣಗೆರೆ ಜಿಲ್ಲೆಯ ಬೇಲಿ ಮಲ್ಲೂರು ಗ್ರಾಮಗಳ ಕೋಣದ ತಗಾದೆ ಪೊಲೀಸ್ ಠಾಣೆ ಮೇಟ್ಟಿಲೆರಿದ್ದು, ಈಗ ಕೋಣವನ್ನು ಹೊನ್ನಾಳಿ ಪೊಲೀಸರ ಸಮ್ಮುಖದಲ್ಲಿ ನಗರದ ಮಹಾವೀರ ಗೋ ಶಾಲೆಗೆ ಬಿಡಲಾಗಿದೆ.
ಹಾರನಹಳ್ಳಿ ಗ್ರಾಮಸ್ಥರು ಕೋಣ ನಮ್ಮದೇ ಎಂದು ಹೊನ್ನಾಳಿ ಪಟ್ಟಣದಿಂದ ಕಳೆದ ಶನಿವಾರ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದರು. ಆದರೆ, ತಮ್ಮ ಕೋಣ ಕಾಣೆಯಾಗಿದೆ ಎಂದು ದೂರು ನೀಡಿದ್ದ ಬೇಲಿ ಮಲ್ಲೂರು ಗ್ರಾಮಸ್ಥರು ಹಾರನಹಳ್ಳಿ ಗ್ರಾಮಸ್ಥರು ನಮ್ಮೂರಿನ ಕೋಣವನ್ನು ತೆಗೆದು ಕೊಂಡು ಹೋಗಿದ್ದಾರೆ ಎಂದು ಮತ್ತೆ ಪೊಲೀಸರಿಗೆ ತಿಳಿಸಿದಾಗ, ಹೊನ್ನಾಳಿ ಪೊಲೀಸರು ಹಾರನಹಳ್ಳಿ ಗ್ರಾಮಸ್ಥರಿಗೆ ಕೋಣವನ್ನು ಗೋಶಾಲೆಗೆ ತರಲು ಹೇಳಿದ್ದಾರೆ. ಇದಕ್ಕೆ ಹಾರನಹಳ್ಳಿ ಗ್ರಾಮಸ್ಥರು ಕೋಣವನ್ನು ಗೋ ಶಾಲೆಗೆ ತಂದು ಬಿಟ್ಟಿದ್ದಾರೆ. ಕೋಣ ಯಾರದು ಎಂದು ತೀರ್ಮಾನವಾಗುವವರೆಗೂ ಕೋಣವನ್ನು ಗೋ ಶಾಲೆಯಲ್ಲಿ ಬಿಡಲು ತಿಳಿಸಿದ್ದಾರೆ.