ETV Bharat / state

ಮನೆಗಳ್ಳರಿಬ್ಬರ ಬಂಧನ: 28 ಗ್ರಾಂ ಚಿನ್ನಾಭರಣ ವಶ - ಶಿವಮೊಗ್ಗದಲ್ಲಿ ಮನೆಗಳ್ಳತನ ಪ್ರಕರಣ

ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣದ ಮನೆಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

two thieves arrest by anavatti police
ಮನೆಗಳ್ಳರಿಬ್ಬರ ಬಂಧನ
author img

By

Published : Oct 19, 2020, 1:03 PM IST

ಶಿವಮೊಗ್ಗ: ಮನೆಗಳ್ಳರಿಬ್ಬರನ್ನು ಬಂಧಿಸಿ ಅವರಿಂದ 28 ಗ್ರಾಂ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಆನವಟ್ಟಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆಗಳ್ಳತನ ನಡೆದಿತ್ತು. ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಜಡೆ ಗ್ರಾಮದ ಪವನ್(19) ಹಾಗೂ ಸಂಜಯ್ (20) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರು ತಮ್ಮ ಕಳ್ಳತನವನ್ನು ಒಪ್ಪಿಕೊಂಡಿದ್ದಾರೆ‌.

ಇವರಿಂದ 1.20 ಲಕ್ಷ ರೂ. ಮೌಲ್ಯದ 28 ಗ್ರಾಂ ಚಿನ್ನಾಭರಣ, 4 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು‌ಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿದ ಆನವಟ್ಟಿ ಪೊಲೀಸರಿಗೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.