ETV Bharat / state

ಗಾಂಜಾ ಬೆಳೆದ ಎರಡು ಪ್ರತ್ಯೇಕ ಪ್ರಕರಣ: ಇಬ್ಬರ ಬಂಧನ, ಓರ್ವ ಎಸ್ಕೇಪ್ - Marijuana and drugs latest news

ಅಕ್ರಮವಾಗಿ ಗಾಂಜಾ ಬೆಳೆದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು 244 ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Arrest
Arrest
author img

By

Published : Sep 24, 2020, 10:07 AM IST

ಶಿವಮೊಗ್ಗ: ಪ್ರತ್ಯೇಕ ಗಾಂಜಾ ಬೆಳೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಹಾಗೂ ಸೊರಬ ಪೊಲೀಸರು ದಾಳಿ‌ ನಡೆಸಿ, ಗಾಂಜಾ ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿಕಾರಿಪುರ ತಾಲೂಕು ಮಾಸ್ತಿಬೈಲು ಗ್ರಾಮದ ಕನ್ನಪ್ಪ ಎನ್ನುವವರು ತಮ್ಮ ಜಮೀನಿನಲ್ಲಿ 9 ಗಾಂಜಾ ಗಿಡ ಹಾಗೂ ಕುಮಾರ್ ಎಂಬಾತ 207 ಗಾಂಜಾ ಗಿಡ ಬೆಳೆದಿದ್ದರು. ಅದೇ ರೀತಿ ಸೊರಬ ತಾಲೂಕು ಕಣ್ಣೂರು ಗ್ರಾಮದ ಪರಶುರಾಮಪ್ಪ ಎಂಬಾತ ತನ್ನ ಜಮೀನಿನಲ್ಲಿ 28 ಗಾಂಜಾ ಗಿಡ ಬೆಳೆದಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶ್ರೀನಿವಾಸಲು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದರಲ್ಲಿ ಪರಶುರಾಮಪ್ಪ ಪರಾರಿಯಾಗಿದ್ದಾನೆ.‌ ಹಾಗಾಗಿ ಪೊಲೀಸರು ಆರೋಪಿ ಸೆರೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.