ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದಂತೆ ಆಕ್ಸಿಜನ್ ಇಲ್ಲದೇ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಂದೆಡೆ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿರುವ ಸಮಯದಲ್ಲಿ ನಗರದ ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಹಿಂದಿರುವ ಬಹೃತ್ ಮರಗಳ ಮಾರಣಹೋಮ ಮಾಡಲಾಗಿದೆ.
ಬಹೃತ್ ಮರಗಳ ಮಾರಣ ಹೋಮ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಸಮಸ್ಯೆಯಾಗದಂತೆ ಹಾಗೂ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಹಿಂಭಾಗದ ಆವರಣದಲ್ಲಿ ಆಕ್ಸಿಜನ್ ಪ್ಲಾಟ್ ನಿರ್ಮಿಸಲಾಗಿದೆ. ಆದರೆ, ಈ ಆಕ್ಸಿಜನ್ ಪ್ಲಾಟ್ ನಿರ್ಮಾಣಕ್ಕಾಗಿ ನೂರಾರು ವರ್ಷಗಳ ಹಿಂದಿನ ಬಹೃತ್ ಮೂರು ಮರಗಳ ಮಾರಣ ಹೋಮ ಮಾಡಲಾಗಿದೆ.
ಈ ಬಹೃತ್ ಮರಗಳಿಂದಾಗಿ ಆಕ್ಸಿಜನ್ ಪ್ಲಾಟ್ ಮೇಲೆ ಮರಗಳ ರಂಬೆ, ಕೊಂಬೆಗಳು ಬಿದ್ದು ಹಾನಿಯಾಗುತ್ತೆ ಹಾಗೂ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ತೊಂದರೆಯಾಗುತ್ತೆ ಎಂಬ ಉದ್ದೇಶದಿಂದ ಮರಗಳನ್ನು ಕಡಿಯಲಾಗಿದೆ. ಆದರೆ, ಇದಕ್ಕೆ ಪರಿಸರಾಸಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಆಕ್ಸಿಜನ್ ಪ್ಲಾಟ್ ನಿರ್ಮಾಣಕ್ಕೆ ಯಾರ ವಿರೋಧವಿಲ್ಲ. ಎಲ್ಲರಿಗೂ ಆಕ್ಸಿಜನ್ ಪ್ಲಾಟ್ ಅವಶ್ಯಕತೆ ಇದೆ. ಆದರೆ, ನೈಸರ್ಗಿಕವಾಗಿ ಶುದ್ಧ ಗಾಳಿ ನೀಡುವ ನೂರಾರು ವರ್ಷಗಳ ಹಿಂದಿನ ಬಹೃತ್ ಮರಗಳನ್ನು ಕಡಿದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಕೊಪ್ಪಳದಲ್ಲಿ ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಇಲ್ಲ: ಡಿಸಿ ವಿಕಾಸ್ ಕಿಶೋರ್ ಸುರಳ್ಕರ್