ETV Bharat / state

ವಿನಾಯಕನ ಉತ್ಸವಕ್ಕೆ ಕೊರೊನಾ ವಿಘ್ನ: ದೇವಾಲಯಗಳಲ್ಲಿ ಕಾಣದ ಜನಸಂದಣಿ

ಶಿವಮೊಗ್ಗದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಬದ್ದ ಪೂಜೆಗೆ ಅವಕಾಶ ನೀಡಲಾಗಿದೆ. ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕಿದೆ.‌ ಆದ್ರೆ ಕಳೆದ ವರ್ಷದ ಸಂಭ್ರಮ, ಸಡಗರ ಎಲ್ಲಿಯೂ ಕಾಣುತ್ತಿಲ್ಲ. ಮಾರುಕಟ್ಟೆಗಳೂ ಡಲ್‌ ಹೊಡೆಯುತ್ತಿರುವುದು ಕಂಡುಬಂತು.

Ganesha Festival
ಶಿವಮೊಗ್ಗದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
author img

By

Published : Aug 22, 2020, 4:38 PM IST

ಶಿವಮೊಗ್ಗ: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಂಪ್ರದಾಯಿಕವಾಗಿ ವಿಘ್ನ ವಿನಾಯಕನ ಪೂಜೆಗೆ ಅನುವು ಮಾಡಿ ಕೊಟ್ಟಿದೆ. ಆದ್ರೆ, ಸಾರ್ವಜನಿಕವಾಗಿ ವಿಘ್ನೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ. ದೇವಾಲಯಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಸಂಪ್ರದಾಯಬದ್ಧ ಪೂಜೆ ನಡೆಯುತ್ತಿದೆ.

ಕೊರೊನಾ ಭಯದಿಂದ ಮಾರುಕಟ್ಟೆ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ಹಿಂದೆಲ್ಲಾ ಹಬ್ಬದ ವ್ಯಾಪಾರ ಎಂದು ಜನ ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದರು.‌‌ ಆದರೆ ಈ ಬಾರಿ ಗಾಂಧಿ ಬಜಾರ್ ಹಾಗೂ ನೆಹರು‌ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿದ್ದವು.

ಶಿವಮೊಗ್ಗದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೇವಾಲಯಗಳಲ್ಲಿ ಗಣೇಶನ ಆರಾಧನೆ:

ಶಿವಮೊಗ್ಗದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗುತ್ತಿದೆ. ‌ಗಾಂಧಿ ಬಜಾರ್​ನ ಬಸವೇಶ್ವರ ದೇವಾಲಯದಲ್ಲಿ 91ನೇ ವರ್ಷದ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಅದೇ ರೀತಿ ರಾಮಣ್ಣ ಶ್ರೇಷ್ಟಿ ಪಾರ್ಕ್‌ನಲ್ಲಿ 90ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ಹಿಂದು ಮಹಾಸಭಾ ಮಂಡಲದ 76ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ಸರ್ಕಾರದ ಆದೇಶದ ಪ್ರಕಾರ ಇಂದು ಒಂದೇ ದಿನ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಮೂರ್ತಿಗಳನ್ನು ಸಂಜೆಯೇ ನಿಮಜ್ಜನ ಮಾಡಲಾಗುತ್ತಿದೆ. ಆದರೆ ಗಾಂಧಿ ಬಜಾರ್‌ನ ಬಸವೇಶ್ವರ ದೇವಾಲಯದ ಗಣಪತಿಯನ್ನು ನಾಳೆ ನಿಮಜ್ಜನ ಮಾಡಲು ನಿರ್ಧರಿಸಲಾಗಿದೆ.

ಸಾರ್ವಜನಿಕರು ತಮ್ಮಿಷ್ಟದ ದೇವಾಲಯಕ್ಕೆ ತೆರಳಿ‌ ಗೌರಿ-ಗಣೇಶನ ದರ್ಶನ ಪಡೆದುಕೊಂಡು ಬರುತ್ತಿದ್ದರು. ದೇವಾಲಯಗಳ ಆವರಣ ಭಕ್ತರಿಲ್ಲದೆ ಬಿಕೋ‌ ಎನ್ನುತ್ತಿತ್ತು. ದೇಗುಲಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆಯುತ್ತಿದ್ದು ಕಂಡುಬಂತು. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಕೆಲವು ರಸ್ತೆಗಳನ್ನು ಬ್ಲಾಕ್‌ ಮಾಡಿ ಗಣೇಶನನ್ನು ಪ್ರತಿಷ್ಠಾಪಿಸಿದ್ದು ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.