ಶಿವಮೊಗ್ಗ: ನಗರದ ಶಿವಪ್ಪ ನಾಯಕ ಮಾಲ್ನ್ನು 99 ವರ್ಷಕ್ಕೆ ಲೀಸ್ ಅಜೆಂಡಾ ಕುರಿತು ಇಂದಿನ ಮಹಾನಗರ ಪಾಲಿಕೆಯಲ್ಲಿ ಕೋಲಾಹಲ ಉಂಟಾಗಿತ್ತು. ಮಾಲ್ ಅನ್ನು 99 ವರ್ಷಕ್ಕೆ ಲೀಸ್ ಹಾಕುವ ಕುರಿತು ಅಜೆಂಡಾ ಜಾರಿ ಮಾಡುವುದು ಬೇಡ ಎಂದು ಮೇಯರ್ ಸುನೀತಾ ಅಣ್ಣಪ್ಪನವರು ಪಾಲಿಕೆಯ ಆಯುಕ್ತರಿಗೆ ತಿಳಿಸಿದ್ದರೂ ಅದನ್ನು ಇಂದಿನ ಪಾಲಿಕೆಯ ಅಜೆಂಡಾದಲ್ಲಿ ಜಾರಿ ಮಾಡಲಾಗಿತ್ತು.
ಇದರ ವಿರುದ್ದ ಪಾಲಿಕೆಯ ವಿರೋಧ ಪಕ್ಷದ ನಾಯಕರುಗಳು ಸಭೆಯ ಗಮಕ್ಕೆ ತಂದಾಗ ಸಭೆಯಲ್ಲಿನ ಆಡಳಿತ ಪಕ್ಷದವರೂ ಧ್ವನಿಗೂಡಿಸಿದರು. ನಂತರ ಮೇಯರ್ ಈ ಅಜೆಂಡಾವನ್ನು ಸಭೆಗೆ ತರುವುದು ಬೇಡ ಎಂದು ಸ್ಪಷ್ಟ ಪಡಿಸಿದರು. ಇಷ್ಟಿದ್ದರು ಆಯುಕ್ತರ ಗಮನಕ್ಕೆ ತಂದಿದ್ದರು.
ಈ ವಿಚಾರವನ್ನು ಇಂದಿನ ಸಭೆಯಲ್ಲಿ ತರುವ ಅವಶ್ಯಕತೆ ಏನಿತ್ತು? ಎಂದು ಹೇಳುತ್ತಿದ್ದಂತಯೇ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಆಯುಕ್ತ ಚಿದಾನಂದ ವಠಾರೆ ಅವರ ತಲೆ ದಂಡ ಆಗಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಎಂಎಲ್ಸಿ ಆಯನೂರು ಮಂಜುನಾಥ್ ಸಹ ಧ್ವನಿಗೂಡಿಸಿದರು. ಮೇಯರ್ ಸುನೀತಾ ಅಣ್ಣಪ್ಪ ಅಜೆಂಡಾ ತರುವುದು ಬೇಡ ಎಂದು ತಿಳಿಸಿದರೂ ಏಕೆ ತಂದ್ರಿ ಎಂದು ಆಯುಕ್ತರಿಗೆ ಪ್ರಶ್ನೆ ಮಾಡಿದರು.
ಇದಕ್ಕೆ ಆಯುಕ್ತರು ಪರಿಷತ್ ಕಾರ್ಯದರ್ಶಿ ಮಂಜುನಾಥ್ ಅವರು ತಂದಿದ್ದಾರೆ ಎಂದರು. ಈ ಕುರಿತು ಪರಿಷತ್ ಕಾರ್ಯದರ್ಶಿ ಮಂಜುನಾಥ್ ಅಜೆಂಡಾ ಹಿಂದೆ ಪಡೆಯಲು ಆಗದ ಕಾರಣ ವಾಪಸ್ ಪಡೆಯಲಾಗಲಿಲ್ಲ ಎಂದು ಸಮಜಾಯಿಸಿ ನೀಡಿದ್ರು. ಇದಕ್ಕೆ ಪೌರಾಡಳಿತ ಪುಸ್ತಕದಲ್ಲಿ ಎಲ್ಲಿ ಇದೆ ತೋರಿಸಿ ಎಂದು ಹಠ ಹಿಡಿದು ಕೂತರು. ನೀವು ಕಣ್ ತಪ್ಪಿನಿಂದ ಆಗಿದೆ ಎಂದು ಹೇಳಿದ್ರೆ, ನಾಳೆ ಪಾಲಿಕೆ ಮಾರಾಟಕ್ಕೆ ಅಜೆಂಡಾ ತರ್ತಿರಾ ನಾವು ಅದಕ್ಕೆ ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ನಂತರ ಸಭೆಯನ್ನು 10 ನಿಮಿಷ ಮುಂದೂಡಲಾಯಿತು. ನಂತರ ಸಭೆ ಪ್ರಾರಂಭವಾದ ಮೇಲೆ ಮೇಯರ್ ಸುನೀತಾ ಅಣ್ಣಪ್ಪ, ಮೇಯರ್ ಅಪ್ಪಣೆ ಇಲ್ಲದೇ ಅಜೆಂಡಾ ತಂದವರು ಯಾರು ಅಂತ ತನಿಖೆ ನಡೆಸಲು 5 ಸದಸ್ಯರನ್ನು ಒಳಗೊಂಡ ಸಮಿತಿ ರಚನೆ ಮಾಡಿದರು. ಈ ಸಮಿತಿಯಲ್ಲಿ ಇಬ್ಬರು ಆಡಳಿತ ಪಕ್ಷದವರು, ಉಳಿದ ಮೂವರು ವಿರೋಧ ಪಕ್ಷದವರು ಇರುತ್ತಾರೆ. ಸಮಿತಿಯು 2 ತಿಂಗಳ ಒಳಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.