ಶಿವಮೊಗ್ಗ: ಕೊರೊನಾ ವೈರಸ್ ಹರಡುವಿಕೆ ತಡೆಯುವ ಸಂಬಂಧ ಪ್ರಸಿದ್ಧ ಸಿಗಂದೂರು ದೇವಿಯ ದರ್ಶನವನ್ನು ಮಾ. 31ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕ್ಷೇತ್ರದಲ್ಲಿ ನಿತ್ಯ ಪೂಜೆಗಳು ಎಂದಿನಂತೆ ನಡೆಯುತ್ತವೆ. ಆದರೆ ಭಕ್ತರು ದೇವಾಲಯಕ್ಕೆ ಆಗಮಿಸುವುದನ್ನು ಮುಂದಿನ ಕೆಲ ದಿನಗಳ ಅವಧಿಗೆ ನಿಷೇಧಿಸಲಾಗಿದೆ. ಜಿಲ್ಲಾಡಳಿತ ಮಾ.31ರವರೆಗೆ 144 ಸೆಕ್ಷನ್ ಜಾರಿ ಮಾಡಿದೆ. ಹಾಗಾಗಿ ದೇವಾಲಯಕ್ಕೆ ಯಾರೂ ಕೂಡಾ ಬರುವಂತಿಲ್ಲ ಎಂದು ಚೌಡೇಶ್ವರಿ ದೇವಾಲಯ ಟ್ರಸ್ಟ್ ಭಕ್ತರಲ್ಲಿ ಮನವಿ ಮಾಡಿದೆ.