ಶಿವಮೊಗ್ಗ: ಹನಿಟ್ರ್ಯಾಪ್ ಮಾಡಿ ಸುಲಿಗೆ ದಂಧೆ ನಡೆಸುತ್ತಿದ್ದ ಗ್ಯಾಂಗ್ವೊಂದನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬರು ಹನಿಟ್ರಾಪ್ಗೆ ಒಳಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಯುವತಿ ಸೇರಿ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅನನ್ಯ ಅಲಿಯಾಸ್ ಸೌರಭ (22), ಅಬೂಬಕರ್ ಸಿದ್ದಿಕಿ(26), ಮೋಹಿತ್ ಗೌಡ(28) ಹಾಗೂ ಕಾರ್ತಿಕ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ಮಿಸ್ಡ್ ಕಾಲ್ ಮೂಲಕ ಹನಿಟ್ರ್ಯಾಪ್: ವಿಡಿಯೋ ಮಾಡಿ ಬೆದರಿಸಿ ಹಣ ಪೀಕಿದವರು ಈಗ ಅಂದರ್
ಪ್ರಕರಣದ ವಿವರ: ತೀರ್ಥಹಳ್ಳಿ ತಾಲೂಕು ಊಂಟೂರು ಕಟ್ಟೆ ಕೈಮರದ ನಿವಾಸಿಗೆ ಓರ್ವ ಯುವತಿ ಮೊಬೈಲ್ನಲ್ಲಿ ಕರೆ ಮಾಡಿ ನಮ್ಮ ಫೋಟೋ ಸ್ಟುಡಿಯೋದಲ್ಲಿ ನೀವು ಫೋಟೋ ತೆಗೆಯಿಸಿದ್ದೀರಿ. ಬಂದು ಫೋಟೋ ತೆಗೆದುಕೊಂಡು ಹೋಗಿ ಎಂದು ತಿಳಿಸುತ್ತಾರೆ. ಇದಕ್ಕೆ ವ್ಯಕ್ತಿ ನಾನು ನಿಮ್ಮಲ್ಲಿ ಯಾವುದೇ ಫೋಟೋ ತೆಗೆಯಿಸಿಕೊಂಡಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡುತ್ತಾರೆ. ಆದರೂ ಯುವತಿ ಪದೇ ಪದೆ ಕರೆ ಮಾಡಿ ಮಾತನಾಡಲು ಶುರು ಮಾಡುತ್ತಾರೆ. ನಂತರ ಇಬ್ಬರಿಗೂ ಮೊಬೈಲ್ ಮೂಲಕವೇ ಪರಿಚಯವಾಗುತ್ತದೆ.
ಇದನ್ನೂ ಓದಿ: ಹನಿಟ್ರ್ಯಾಪ್ಗೆ ನಲುಗಿ, ಹೆಂಡ್ತಿಯ ಒಡವೆ ಮಾರಿ ಹಣ ಕೊಟ್ಟಿದ್ದ ವ್ಯಕ್ತಿ.. ಪೊಲೀಸರ ಸಹಾಯದಿಂದ ನಿಟ್ಟುಸಿರು ಬಿಟ್ಟ ವಿವಾಹಿತ
ಕ್ರಮೇಣ ಮೊಬೈಲ್ನಲ್ಲಿ ಇಬ್ಬರ ನಡುವಿನ ಸಂಭಾಷಣೆ ಹೆಚ್ಚಾಗುತ್ತದೆ. ಬಳಿಕ ಕಳೆದ ಏಪ್ರಿಲ್ 5ರಂದು ಯುವತಿ ವ್ಯಕ್ತಿಯ ಮನೆಗೆ ಬರುತ್ತಾಳೆ. ಇಬ್ಬರು ಸಹ ಲೈಂಗಿಕ ಸಂಪರ್ಕ ಬೆಳೆಸಿದ್ದರಂತೆ. ಅಷ್ಟರಲ್ಲಿ ನಾಲ್ಕು ಜನರ ಯುವಕರ ಗುಂಪು ಏಕಾ ಏಕಿ ವ್ಯಕ್ತಿಯ ಮನೆಗೆ ಬರುತ್ತಾರೆ. ಅಲ್ಲಿ ಇಬ್ಬರ ಅರೆ ನಗ್ನವಾಗಿರುವ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಳ್ಳುತ್ತಾರೆ. ನಂತರ ಅಲ್ಲೇ ಡೀಲ್ ಕುದಿರಿಸುತ್ತಾರೆ. ಅಂದೇ ಆ ವ್ಯಕ್ತಿಯ ಬಳಿ ಇದ್ದ 85 ಸಾವಿರ ರೂ. ಪಡೆದುಕೊಂಡು ಹೋಗಿದ್ದರಂತೆ. ಬಳಿಕ ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್ ಪದೇ ಪದೆ ಹಣ ನೀಡುವಂತೆ ಪೀಡಿಸುತ್ತಿದ್ದರಂತೆ. ಹಣ ನೀಡಲ್ಲವೆಂದರೆ ನಿನ್ನ ವಿಡಿಯೋ ಹಾಗೂ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಂತೆ. ಇದರಿಂದ ಬೇಸತ್ತ ವ್ಯಕ್ತಿ ತೀರ್ಥಹಳ್ಳಿ ಪೊಲೀಸರ ಮೊರೆ ಹೋಗುತ್ತಾರೆ.
ಇದನ್ನೂ ಓದಿ: ಗಂಗಾವತಿಯಲ್ಲಿ ಹನಿಟ್ರ್ಯಾಪ್ಗೆ ಒಪ್ಪದ ಮಂಗಳಮುಖಿಯರ ಮೇಲೆ ಹಲ್ಲೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ತೀರ್ಥಹಳ್ಳಿ ಪಿಐ ಆಶ್ವಥ್ ಗೌಡ ಅವರು ಪಿಎಸ್ಐಗಳಾದ ಶ್ರೀಮತಿ ಸುಷ್ಮಾ, ಗಾದಿಲಿಂಗಪ್ಪ ಗೌಡ, ಸಾಗರ್ ಅತ್ತರವಾಲ ಹಾಗೂ ಸಿಬ್ಬಂದಿಗಳಾದ ಸುಧಾಕರ್, ಕುಮಾರ, ಮನೀಷ್, ದೀಪಕ್, ಅವಿನಾಶ್, ರವಿ, ವೀರೇಂದ್ರ, ಸುರೇಶ್ ನಾಯ್ಕ, ಚಾಲಕರಾದ ವಿಜಯ್, ಅವಿನಾಶ್,ಜಿಲ್ಲಾ ಕಚೇರಿಯ ಸಹಾಯಕರಾದ ಗುರುರಾಜ್, ಇಂದ್ರೇಶ್, ವಿಜಯ ಅವರನ್ನಿ ಒಳಗೊಂಡ ತಂಡ ರಚಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಟಿಕ್ಟಾಕ್ ಹನಿಟ್ರ್ಯಾಪ್: ಮದುವೆ ಹೆಸರಲ್ಲಿ ಲಕ್ಷಾಂತರ ಹಣ ವಸೂಲಿ, ಆರೋಪಿ ಬಂಧನ