ETV Bharat / state

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮೈತ್ರಿಯಾಗೇ ಕಾಂಗ್ರೆಸ್​-ಜೆಡಿಎಸ್​ ಸ್ಪರ್ಧೆ - ಜೆಡಿಎಸ್​

ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಯಲ್ಲಿಯೂ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ.

ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ದೋಸ್ತಿ ಪಕ್ಷಗಳ‌ ಸ್ಪರ್ಧೆ
author img

By

Published : May 19, 2019, 6:08 PM IST

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪ್ರಯೋಗ ಯಶಸ್ವಿಯಾಗುತ್ತಿರುವ ಹಿನ್ನೆಲೆಯಲ್ಲಿ‌ ಸ್ಥಳೀಯ ಸಂಸ್ಥೆ‌ಯ ಚುನಾವಣೆಯನ್ನೂ ಮೈತ್ರಿಯಾಗಿಯೇ ಸ್ಪರ್ಧಿಸಲು ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ನಿರ್ಧರಿಸಿವೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಷ್ಟ್ರ, ರಾಜ್ಯದ ನಂತರ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಜಿಲ್ಲೆಯ ಸಾಗರದ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಪಟ್ಟಣ ಪಂಚಾಯತ್​ ಹಾಗೂ ಹೊಸನಗರ ಪಟ್ಟಣ ಪಂಚಾಯತ್​​ಗೆ ಮೇ 29 ಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳಲಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಸೀಟು ಹಂಚಿಕೆ ವಿವರ ಹೀಗಿದೆ:

ಸಾಗರ ನಗರಸಭೆ 31 ಸ್ಥಾನಗಳಲ್ಲಿ 29 ಸ್ಥಾನ ಕಾಂಗ್ರೆಸ್ , ಜೆಡಿಎಸ್- 02
ಶಿಕಾರಿಪುರ ಪುರಸಭೆ 23 ಸ್ಥಾನಗಳಲ್ಲಿ ಕಾಂಗ್ರೆಸ್- 20, ಜೆಡಿಎಸ್-03.
ಶಿರಾಳಕೊಪ್ಪ ಪಟ್ಟಣ ಪಂಚಾಯತ್​ 17 ಸ್ಥಾನಗಳಲ್ಲಿ ಕಾಂಗ್ರೆಸ್- 13, ಜೆಡಿಎಸ್ 04
ಹೊಸನಗರ ಪಟ್ಟಣ ಪಂಚಾಯತ್​ 11 ಸ್ಥಾನಗಳಲ್ಲಿ ಕಾಂಗ್ರೆಸ್ -06 , ಜೆಡಿಎಸ್-05

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮೈತ್ರಿ ಪಕ್ಷಗಳ ದೋಸ್ತಿ ಮುಂದುವರಿಕೆ

ಜಿಲ್ಲೆಯಲ್ಲಿ‌ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆದ್ದರೆ, ಸ್ಥಳೀಯ‌ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ಒಂದೇ ಆಗಿದ್ರೆ ಹೆಚ್ಚಿನ‌ ಅಭಿವೃದ್ದಿ ಮಾಡಲು‌ ಸಾಧ್ಯವಾಗುತ್ತದೆ. ಮುಂದಿನ ಎಲ್ಲಾ ಚುನಾವಣೆಗಳಿಗೆ ಇದು ಭದ್ರ ಬುನಾದಿ ಹಾಕಿಕೊಟ್ಟಂತೆ ಆಗುತ್ತದೆ. ಇದರಿಂದ ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ ಎಂದು ಹೇಳಲಾಗ್ತಿದೆ.

ಇನ್ನು, ಮೈತ್ರಿ ಮಾಡಿಕೊಳ್ಳುವ ಮುನ್ನ ಎರಡು ಪಕ್ಷಗಳ ಜಿಲ್ಲಾಧ್ಯಕ್ಷರು ತಮ್ಮ ತಮ್ಮ ಕಾರ್ಯಕರ್ತರ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆದು ಸ್ಥಳೀಯ ಸಂಸ್ಥೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿವೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಎರಡು ಪಕ್ಷಗಳ ಜಿಲ್ಲಾಧ್ಯಕ್ಷರುಗಳು.

Intro:ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡು ದೋಸ್ತಿ ಪಕ್ಷಗಳ‌ ಸ್ಪರ್ಧೆ.

ಶಿವಮೊಗ್ಗ: ಲೋಕಸಭ ಚುನಾವಣೆಯಲ್ಲಿ ಮೈತ್ರಿ ಪ್ರಯೋಗ ಯಶಸ್ವಿಯಾಗುತ್ತಿರುವ ಹಿನ್ನಲೆಯಲ್ಲಿ‌ ಸ್ಥಳೀಯ ಸಂಸ್ಥೆ‌ ಚುನಾವಣೆಯಲ್ಲೂ ಸಹ ಮೈತ್ರಿ ಸ್ಪರ್ಧೆ ಮಾಡಲು ನಿರ್ಧಾರವನ್ನು ಕಾಂಗ್ರೆಸ್ - ಜೆಡಿಎಸ್ ಪಕ್ಷಗಳೆರಡು ನಿರ್ಧಾರ ಮಾಡಿವೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಷ್ಟ್ರ, ರಾಜ್ಯದ ನಂತ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲಾಗಿದೆ.
ಜಿಲ್ಲೆಯಲ್ಲಿ ಸಾಗರದ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಪಟ್ಟಣ ಪಂಚಾಯತಿ, ಹಾಗೂ ಹೊಸನಗರ ಪಟ್ಟಣ ಪಂಚಾಯತ್ ಗೆ ಮೇ 29 ಕ್ಕೆ ಚುನಾವಣೆ ನಡೆಯುತ್ತಿದೆ.Body:
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಸೀಟು ಹಂಚಿಕೆ ವಿವರ-

ಸಾಗರ ನಗರಸಭೆಯಲ್ಲಿ 31 ಸ್ಥಾನಗಳಲ್ಲಿ 29 ಸ್ಥಾನ ಕಾಂಗ್ರೆಸ್ , ಜೆಡಿಎಸ್-02.
ಶಿಕಾರಿಪುರ ಪುರಸಭೆ ಯಲ್ಲಿ 23 ಸ್ಥಾನಗಳಲ್ಲಿ ಕಾಂಗ್ರೆಸ್- 20 ಹಾಗೂ ಜೆಡಿಎಸ್-03.
ಶಿರಾಳಕೊಪ್ಪ ಪಟ್ಟಣ ಪಂಚಾಯತ ನಲ್ಲಿ 17 ಸ್ಥಾನಗಳಿವೆ. ಇದರಲ್ಲಿ ಕಾಂಗ್ರೆಸ್- 13, ಜೆಡಿಎಸ್ 04 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.
ಹೊಸನಗರ ಪಟ್ಟಣ ಪಂಚಾಯತ್ ನಲ್ಲಿ 11 ಸ್ಥಾನಗಳಿವೆ. ಇಲ್ಲಿ ಕಾಂಗ್ರೆಸ್ -06 , ಜೆಡಿಎಸ್-05 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.
ಸೊರಬ ಪಟ್ಟಣ ಪಂಚಾಯತ್ ಚುನಾವಣೆ ಜೂನ್ 3 ರಂದು ನಡೆಯಲಿದೆ.

ಜಿಲ್ಲೆಯಲ್ಲಿ‌ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆದ್ದರೆ, ಸ್ಥಳೀಯ‌ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ಒಂದೇ ಆಗಿದ್ರೆ ಹೆಚ್ಚಿನ‌ ಅಭಿವೃದ್ದಿ ಮಾಡಲು‌ ಸಾಧ್ಯವಾಗುತ್ತದೆ. ಮುಂದಿನ ಎಲ್ಲಾ ಚುನಾವಣೆಗಳಿಗೆ ಇದು ಭದ್ರ ಬುನಾದಿ ಹಾಕಿ ಕೊಟ್ಟಂತೆ ಆಗುತ್ತದೆ. ಇದರಿಂದ ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ಎರಡು ಪಕ್ಷಗಳು ಮೈತ್ರಿ ಮಾಡಿ ಕೊಂಡಿವೆ.Conclusion:ಮೈತ್ರಿ ಮಾಡಿ ಕೊಳ್ಳುವ ಮುನ್ನಾ ಎರಡು ಪಕ್ಷಗಳ ಜಿಲ್ಲಾಧ್ಯಕ್ಷರುಗಳು ಸಭೆ ನಡೆಸಲಾಗಿದೆ. ಜಿಲ್ಲಾಧ್ಯಕ್ಷರ ಸಭೆಯ ನಂತ್ರ ಎರಡು ಪಕ್ಷಗಳ ಜಿಲ್ಲಾಧ್ಯಕ್ಷರು ತಮ್ಮ ತಮ್ಮ ಕಾರ್ಯಕರ್ತರ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆದು ಸ್ಥಳೀಯ ಸಂಸ್ಥೆಯಲ್ಲಿ ಹೊಂದಾಣಿಕೆ ಮಾಡಿ ಕೊಂಡಿವೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿ ಕೊಳ್ಳಲಾಗಿದೆ ಎನ್ನುತ್ತಾರೆ ಎರಡು ಪಕ್ಷಗಳ ಜಿಲ್ಲಾಧ್ಯಕ್ಷರುಗಳು. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಶೇ 90 ರಷ್ಟು ಸ್ಥಾನ ಪಡೆದು ಕೊಂಡಿದ್ದರೆ, ಜೆಡಿಎಸ್ ಶೇ 10 ರಷ್ಟು ಸ್ಥಾನ ಪಡೆದು ಕೊಂಡಿದೆ. ಮೈತ್ರಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಎಂಬುದನ್ನು ಫಲಿತಾಂಶದ ನಂತ್ರ ತಿಳಿಯುತ್ತದೆ.

ಬೈಟ್: ಹೆಚ್.ಎಸ್.ಸುಂದರೇಶ್. ಕಾಂಗ್ರೆಸ್ ಜಿಲ್ಲಾಧ್ಯಕ್ಷ.
ಬೈಟ್: ಆರ್.ಎಂ.ಮಂಜುನಾಥ್ ಗೌಡ. ಜೆಡಿಎಸ್ ಜಿಲ್ಲಾಧ್ಯಕ್ಷ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.