ETV Bharat / state

ಆಸ್ಪತ್ರೆಯಲ್ಲಿಯೂ ಪ್ರಿಯತಮೆಯ ಕನವರಿಕೆ.. ಶಿವಮೊಗ್ಗದಲ್ಲಿ ಗ್ಲುಕೋಸ್​ ಕಿತ್ತಾಕಿ ಓಡಿಹೋಗಿದ್ದ ಸೋಂಕಿತನ ಹಿಡಿದ ಸಿಬ್ಬಂದಿ - shivamogga

ಶಿವಮೊಗ್ಗ ಹೊರವಲಯದ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಇಂದು ಮುಂಜಾನೆ ದಾಖಲಾಗಿದ್ದ ವ್ಯಕ್ತಿ ತನಗೆ ಚಿಕಿತ್ಸೆ ಬೇಡ ಎಂದು ಆಸ್ಪತ್ರೆಯಿಂದಲೇ ಪರಾರಿಯಾಗಿದ್ದಾ. ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಈತನ ಮನವೊಲಿಸಿ ಮತ್ತೆ ಆಸ್ಪತ್ರೆಗೆ ಕರೆತಂದಿದ್ದಾರೆ.

shivamogga
ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೋವಿಡ್ ಸೋಂಕಿತ
author img

By

Published : May 8, 2021, 1:31 PM IST

Updated : May 8, 2021, 2:35 PM IST

ಶಿವಮೊಗ್ಗ: ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿಯ ಮನವೊಲಿಸಿ ಮತ್ತೆ ಆಸ್ಪತ್ರೆಗೆ ಕರೆತಂದಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಇಂದು ಬೆಳಗ್ಗೆ ದಾಖಲಾಗಿದ್ದ ವ್ಯಕ್ತಿ ತನಗೆ ಚಿಕಿತ್ಸೆ ಬೇಡ ಎಂದು ಚಿಕಿತ್ಸೆ ಪಡೆಯುತ್ತಿರುವಾಗಲೇ ಆಸ್ಪತ್ರೆ ಪಕ್ಕದಲ್ಲಿರುವ ಭತ್ತದ ಗದ್ದೆ ಕಡೆ ಓಡಿ ಹೋಗಿದ್ದ. ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಈತನ ಮನವೊಲಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಗಾಂಧಿ ಬಜಾರ್ ನಿವಾಸಿಯಾದ ಈತ ಇಂದು ಬೆಳಗ್ಗೆ ನನಗೆ ಪ್ರೀತಿಯಲ್ಲಿ ಮೋಸವಾಗಿದೆ ಎಂದು ಹೇಳಿ ನಿದ್ದೆ ಮಾತ್ರೆ ಸೇವಿಸಿದ್ದ. ಈತನ ಕುಟುಂಬದವರು ಈತನನ್ನು ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ದಾಖಲಿಸಿದ್ದರು. ಬಳಿಕ ಚಿಕಿತ್ಸೆಯಲ್ಲಿರುವಾಗಲೇ ನನ್ನ ಲವರ್ ಮನೆಗೆ ಬಂದಿದ್ದಾಳೆ. ನಾನು ಮನೆಗೆ ಹೋಗಬೇಕೆಂದು ಗ್ಲೋಕೋಸ್ ಕಿತ್ತು ಹಾಕಿ ಆಸ್ಪತ್ರೆಯಿಂದ ಓಡಿ ಹೋಗಿದ್ದಾನೆ. ಕೊನೆಗೆ ಸಿಬ್ಬಂದಿ ಈತನನ್ನು ಹಿಡಿದು ತಂದರು.

ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೋವಿಡ್ ಸೋಂಕಿತ: ಮರಳಿ ಕರೆತರುವಲ್ಲಿ ಆಸ್ಪತ್ರೆ ಸಿಬ್ಬಂದಿ ಯಶಸ್ವಿ

ಈ ವೇಳೆ ಆತನ ಕೈ ಕಾಲು ಕೆಸರಾಗಿತ್ತು. ನೀರಿನಲ್ಲಿ ತೊಳೆದುಕೊಂಡು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದ್ರೆ, ಆಟೋದಿಂದ ಇಳಿಯದೆ ಹಠ ಮಾಡಿ ಆಸ್ಪತ್ರೆಯ ಹೊರಗೆ ಕುಳಿತುಕೊಂಡಿದ್ದ. ಈತನಿಗೆ ಕೋವಿಡ್​ ಪಾಸಿಟಿವ್ ಎ ಸಿಮ್ಟಮ್ಯಾಟಿಕ್ ಇದ್ದು, ಬೇರೆ ಕಡೆ ದಾಖಲಿಸುವಂತೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಓದಿ: ಮಂಡ್ಯ: ಕೊರೊನಾ ವಾರ್ಡ್​ನಲ್ಲಿ ಮೃತದೇಹಗಳ ನಡುವೆಯೇ ಸೋಂಕಿತರಿಗೆ ಚಿಕಿತ್ಸೆ!

Last Updated : May 8, 2021, 2:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.