ETV Bharat / state

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ: ಕುಣಿದು ಕುಪ್ಪಣಿಸಿದ ಯುವ ಜನತೆ - ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಪ್ರಾರಂಭ

ಶಿವಮೊಗ್ಗದ ಗಲಾಟೆ ಗಣಪತಿ ಎಂದೇ ಖ್ಯಾತಿಯಾಗಿರುವ ಹಿಂದೂ ಮಹಾಸಭಾ ಗಣಪತಿ ಈ ಬಾರಿ 75ನೇ ವರ್ಷದಾಗಿದ್ದು, ಇಂದು ರಾಜಬೀದಿ ಉತ್ಸವದ ಮೂಲಕ ಮೆರವಣಿಗೆ ನಡೆಯುತ್ತಿದೆ. ಈ ಮೆರವಣಿಗೆಯಲ್ಲಿ ಅಪಾರಜನಸ್ತೋಮ ಸೇರಿದ್ದು, ಯುವಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದಾರೆ.

ಹಿಂದೂ ಮಹಾಸಭಾ ಗಣಪತಿ
author img

By

Published : Sep 12, 2019, 7:31 PM IST

ಶಿವಮೊಗ್ಗ: ಗಲಾಟೆ ಗಣಪ ಎಂದೇ ಖ್ಯಾತಿ ಪಡೆದಿರುವ ಹಿಂದೂ ಸಂಘಟನಾ ಮಹಾ ಮಂಡಲದ ಗಣಪತಿ ರಾಜಬೀದಿ ಉತ್ಸವದ ಮೆರವಣಿಗೆ ತುಂಗಾ ನದಿ ತೀರದ ಭೀಮೇಶ್ವರ ದೇವಾಲಯದಿಂದ ಪ್ರಾರಂಭವಾಗಿದೆ.

ಮಹಾಮಂಗಳಾರತಿ ನೇರವೇರಿಸಿದ ನಂತರ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಪ್ರಾರಂಭವಾಗಿದ್ದು, ನಂತರ ಎಸ್.ಪಿ.ಎಂ ರಸ್ತೆಯ ಮೂಲಕ ಗಾಂಧಿ ಬಜಾರ್​​ನ ಕಡೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು, ವೀರಗಾಸೆ, ಚಂಡೆ, ಮದ್ದಳೆ, ನಾದಸ್ವರ, ವೇಷಧಾರಿಗಳು ಹೀಗೆ ಹಲವು ಕಲಾತಂಡಗಳು ಭಾಗಿಯಾಗಿದ್ದವು. ಕಲಾ ತಂಡಗಳು ಹಾಕುತ್ತಿದ್ದ ತಾಳಕ್ಕೆ ಯುವಕ-ಯುವತಿಯರು, ಪುರುಷರು-ಮಹಿಳೆಯರು, ಮಕ್ಕಳು ಹೀಗೆ ಎಲ್ಲರು ಡ್ಯಾನ್ಸ್ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದು, ಇವರುಗಳ ಡ್ಯಾನ್ಸ್ ನೋಡಲು ಜನ ಮುಗಿಬೀಳುತ್ತಿದ್ದರು. ಮೆರವಣಿಗೆಯಲ್ಲಿ ಹಲವು ಸಂಘಗಳು ಗಣೇಶನ ಮೂರ್ತಿಗೆ ಭಾರಿ ಗಾತ್ರದ ಹಾರವನ್ನು ಹಾಕಿದರು.

ಹಿಂದೂ ಮಹಾಸಭಾ ಗಣಪತಿ

ಮೆರವಣಿಗೆಯಲ್ಲಿ ಪ್ರಸಾದ ವಿತರಣೆ: ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ‌ ಸಾಗುವ ದಾರಿಯಲ್ಲಿ ಹಲವು ಸಂಘ-ಸಂಸ್ಥೆಗಳು ಪ್ರಸಾದ ವಿತರಣೆ ಮಾಡಿದವು. ಎಸ್.ಪಿ.ಎಂ‌ ರಸ್ತೆಯಲ್ಲಿ ಜೈನ್ ಸಮಾಜದವರು ಪುಳಿಯೋಗರೆ, ಬೊಂಡಾ, ಮೈಸೂರು ಪಾಕ್ ಹೀಗೆ ಗಾಂಧಿ ಬಜಾರ್​​ನಲ್ಲಿ ಕ್ರಾಸ್​​​ಗೊಂದರಂತೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಅಲ್ಲದೆ ಕುಡಿಯುವ ನೀರನ್ನು ವಿತರಿಸಲಾಗುತ್ತಿತ್ತು. ಮೆರವಣಿಗೆಯಲ್ಲಿ ಉಪ ಮೇಯರ್ ಚನ್ನಬಸಪ್ಪ ಸೇರಿದಂತೆ ಹಲವು ಹಿಂದೂ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.

ಪೊಲೀಸ್ ಬಿಗಿ ಬಂದೋ ಬಸ್ತ್: ಗಣಪತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಮೆರವಣಿಗೆ ಸೇರಿದಂತೆ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ನಗರದ ತುಂಬೆಲ್ಲಾ ನಾಕಾಬಂದಿ ಹಾಕಲಾಗಿದೆ. ನಗರದಲ್ಲಿ ಕೆಲವು ಕಡೆ ರಸ್ತೆ ಮಾರ್ಗವನ್ನು ಬದಲಾಯಿಸಲಾಗಿದೆ. ಎಸ್ಪಿ ಶಾಂತರಾಜು ಹಾಗೂ ಎಎಸ್ಪಿ ಡಾ. ಶೇಖರ್ ರವರ ನೇತೃತ್ವದಲ್ಲಿ ಸುಮಾರು 4.500 ಪೊಲೀಸರನ್ನು ನೇಮಿಸಲಾಗಿದೆ.

Intro:ಹೆಚ್ಎಂಎಸ್ ಗಣಪತಿ ರಾಜಬೀದಿ ಉತ್ಸವ ಪ್ರಾರಂಭ: ಕುಣಿದು ಕುಪ್ಪಣಿಸಿ ಯುವ ಜನತೆ.

ಶಿವಮೊಗ್ಗ: ಶಿವಮೊಗ್ಗ ನಗರದ ಗಲಾಟೆ ಗಣಪ ಎಂದೆ ಖ್ಯಾತಿ ಪಡೆದಿರುವ ಹಿಂದೂ ಸಂಘಟನಾ ಮಹಾ ಮಂಡಲದ ಗಣಪತಿಯ ರಾಜಬೀದಿ ಉತ್ಸವ ಪ್ರಾರಂಭಗೊಂಡಿದೆ. ತುಂಗಾ ನದಿ ತೀರದ ಭೀಮೇಶ್ವರ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಿದೆ. ಮಹಾಮಂಗಳಾರತಿ ನೇರವೇರಿಸಿದ ನಂತ್ರ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಪ್ರಾರಂಭವಾಯಿತು. ನಂತ್ರ ಎಸ್.ಪಿ.ಎಂ ರಸ್ತೆಯ ಮೂಲಕ ಗಾಂಧಿ ಬಜಾರ್ ನ ಕಡೆ ಮೆರವಣಿಗೆ ಸಾಗಿತ್ತು. ಮೆರವಣಿಗೆಯಲ್ಲಿ ಡೊಳ್ಳು, ವೀರಗಾಸೆ, ಚಂಡೆ ಮದ್ದಳೆ, ನಾದಸ್ವರ, ವೇಷಧಾರಿಗಳು ಹೀಗೆ ಹಲವು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಕಲಾ ತಂಡಗಳು ಹಾಕುತ್ತಿದ್ದ ತಾಳಕ್ಕೆ ಯುವಕ- ಯುವತಿಯರು, ಪುರುಷರು- ಮಹಿಳೆಯರು ಮಕ್ಕಳು ಹೀಗೆ ಎಲ್ಲಾರು ಡ್ಯಾನ್ಸ್ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಇವರುಗಳ ಡ್ಯಾನ್ಸ್ ನೋಡಲು ಜನ ಮುಗಿ ಬಿಳುತ್ತಿದ್ದರು. ಮೆರವಣಿಗೆಯಲ್ಲಿ ಹಲವು ಸಂಘಗಳು ಗಣೇಶನ ಮೂರ್ತಿಗೆ ಭಾರಿ ಗಾತ್ರದ ಹಾರವನ್ನು ಹಾಕುತ್ತಿದ್ದರು.Body:ಮೆರವಣಿಗೆಯಲ್ಲಿ ಪ್ರಸಾದ ವಿತರಣೆ-
ಹೆಚ್ಎಂಎಸ್ ಗಣಪತಿಯ ಮೆರವಣಿಗೆ‌ ಸಾಗುವ ದಾರಿಯಲ್ಲಿ ಹಲವು ಸಂಘ- ಸಂಸ್ಥೆಗಳು ಪ್ರಸಾದ ವಿತರಣೆಯನ್ನು ಮಾಡುತ್ತಿದ್ದರು. ಎಸ್.ಪಿ.ಎಂ‌ ರಸ್ತೆಯಲ್ಲಿ ಜೈನ್ ಸಮಾಜದವರು ಪುಳಿಯೋಗರೆ, ಮಿರ್ಜಿ ಬೊಂಡಾ, ಮೈಸೂರು ಪಾಕ್ ಹೀಗೆ ಗಾಂಧಿ ಬಜಾರ್ ನಲ್ಲಿ ಕ್ರಾಸ್ ಗೊಂದರಂತೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಅಲ್ಲದೆ ಕುಡಿಯುವ ನೀರು ವಿತರಿಸಲಾಗುತಿತ್ತು. ಮೆರವಣಿಗೆಯಲ್ಲಿ ಭಾಗಿಯಾದವರು ಪ್ರಸಾದವನ್ನು ತಿಂದು ಮುಂದುವರೆಯುತ್ತಿದ್ದರು. ಮೆರವಣಿಗೆಯಲ್ಲಿ ಉಪಮೇಯರ್ ಚನ್ನಬಸಪ್ಪ ಸೇರಿದಂತೆ ಹಲವು ಹಿಂದೂ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.Conclusion:
ಪೊಲೀಸ್ ಬಿಗಿ ಬಂದೋ ಬಸ್ತ್-
ಹೆಚ್ಎಂಎಸ್ ಗಣಪತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಮೆರವಣಿಗೆ ಸೇರಿದಂತೆ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿದೆ. ನಗರದ ತುಂಬೆಲ್ಲಾ ನಾಕಾಬಂದಿ ಹಾಕಲಾಗಿದೆ. ನಗರದಲ್ಲಿ ಕೆಲವು ಕಡೆ ರಸ್ತೆ ಮಾರ್ಗವನ್ನು ಬದಲಾಯಿಸಿದ್ದಾರೆ. ಎಸ್ಪಿ ಶಾಂತರಾಜು ಹಾಗೂ ಎಎಸ್ಪಿ ಡಾ.ಶೇಖರ್ ರವರ ನೇತೃತ್ವದಲ್ಲಿ ಸುಮಾರು 4.500 ಪೊಲೀಸರನ್ನು ನೇಮಿಸಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.