ಶಿವಮೊಗ್ಗ: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗಕ್ಕೆ ಈಗಾಗಲೇ ರೈಲ್ವೆ ಇಲಾಖೆ ಸರ್ವೇ ನಡೆಸಿದ್ದು, ಈ ಸರ್ವೇ ಜಾಗದಲ್ಲಿ ಭೂ ಸ್ವಾಧೀನಕ್ಕಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ ಕೆ.ಹೆಚ್.ಶಿವಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಇಂದು ಸರ್ವೇ ನಡೆಸಿತು.
ಶಿಕಾರಿಪುರದಿಂದ ಶಿರಾಳಕೊಪ್ಪದವರೆಗೆ ರೈಲ್ವೆ ಮಾರ್ಗ ಹಾದುಹೋಗುವ ಹಳ್ಳಿಗಳಿಗೆ ತೆರಳಿ ರೈಲ್ವೆ ಇಲಾಖೆ ಸರ್ವೇ ನಡೆಸಿದ ಜಾಗವನ್ನು ಗುರುತು ಮಾಡಿದರು. ಶೀಘ್ರದಲ್ಲೇ ರೈತರಿಗೆ ಸೂಕ್ತ ಪರಿಹಾರ ನೀಡಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸುವುದಾಗಿ ಶಿವಕುಮಾರ್ ತಿಳಿಸಿದರು.