ETV Bharat / state

ಶಿವಮೊಗ್ಗದಲ್ಲಿ ಅಧಿಕಾರಿಗಳಿಂದ ಪಿಎಫ್​ಐ ಕಾರ್ಯಕರ್ತರ ಮನೆ ಮೇಲೆ ದಾಳಿ - ಈಟಿವಿ ಭಾರತ ಕನ್ನಡ

ಶಿವಮೊಗ್ಗ ಜಿಲ್ಲೆಯಲ್ಲಿ ತಡ ರಾತ್ರಿ ಕಂದಾಯ ಹಾಗೂ ಪೊಲೀಸ್​ ಅಧಿಕಾರಿಗಳು ಪಿಎಫ್​ಐ ಕಾರ್ಯಕರ್ತರುಗಳ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

kn_smg_
ಶಿವಮೊಗ್ಗ ಎಸ್​ಡಿಪಿಐ ಕಚೇರಿ
author img

By

Published : Sep 29, 2022, 10:17 AM IST

ಶಿವಮೊಗ್ಗ: ಪಿಎಫ್​ಐ ನಿಷೇಧದ ಹಿನ್ನೆಲೆ ಜಿಲ್ಲೆಯಾದ್ಯಂತ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಪಿಎಫ್​ಐ ಕಾರ್ಯಕರ್ತರ ಮನೆ ಮೇಲೆ ತಡ ರಾತ್ರಿ ದಾಳಿ ನಡೆಸಿದ್ದಾರೆ.

ಜಿಲ್ಲೆಯಾದ್ಯಂತ ಅಧಿಕಾರಿಗಳು ಸರ್ಚ್ ವಾರೆಂಟ್ ಹಿಡಿದು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿದ್ದು, ಶಿವಮೊಗ್ಗದ ಗಾಂಧಿ ಬಜಾರ್​ನ ಪಿಎಫ್​ಐ ಕಾರ್ಯಕರ್ತ ಉಮರ್ ಫಾರೂಕ್ ಮನೆಗೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ಮನೆಗೆ ಬೀಗ ಹಾಕಿದ್ದಾರೆ. ನಗರದ ಬೈಪಾಸ್ ರಸ್ತೆಯ ಎಸ್​ಡಿಪಿಐ ಕಚೇರಿ ಹಾಗು ಟಿಪ್ಪು ನಗರದ ಎಸ್​ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ಸಲೀಂ ಖಾನ್ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಗೋಪಾಲಗೌಡ ಬಡಾವಣೆಯಲ್ಲಿನ ಪಿಎಫ್ಐ ಅಧ್ಯಕ್ಷ ಒಬೆದುಲ್ಲಾ ಮನೆ ಹಾಗೂ ಬೈಪಾಸನ್ ಪಿಎಫ್​ಐ ಮಾಜಿ ಅಧ್ಯಕ್ಷ ರಿಜ್ವಾನ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ನೋಟಿಸ್ ನೀಡಿದ್ದಾರೆ. ದಾಳಿಯಲ್ಲಿ ಪಿಐ ಹರೀಶ್ ಪಟೇಲ್, ಕೋಟೆ ಪಿಐ ಚಂದ್ರಶೇಖರ್, ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಠಾರೆ, ತಹಶೀಲ್ದಾರ್ ನಾಗರಾಜ್, ಸಿಮ್ಸ್ ಸಿಎಓ ಶಿವಕುಮಾರ್ ಭಾಗಿಯಾಗಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಪಿಎಫ್​ಐ ಕಚೇರಿ ಬಂದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.