ETV Bharat / state

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷಧಾರೆ ಚುರುಕು: ತುಂಬಿದ ತುಂಗಾ ಡ್ಯಾಂ..

author img

By

Published : Jul 5, 2023, 8:47 PM IST

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷಧಾರೆ ಚುರುಕುಗೊಡಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ ಡ್ಯಾಂ ತುಂಬಿದೆ.

Rain has started in Shimoga district:  Tunga Dam is full
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷಧಾರೆ ಚುರುಕು: ತುಂಬಿದ ತುಂಗಾ ಡ್ಯಾಂ...

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಪ್ರಾರಂಭವಾಗಿದೆ. ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತದೆ. ವರುಣನ ಆಗಮನದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 199.90 ಮಿಮೀ ಮಳೆ ಸುರಿದಿದೆ. ಸರಾಸರಿ 28.56 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮೀ ಇದ್ದು, ಈವರೆಗೆ ಸರಾಸರಿ 73.13 ಮಿಮೀ ಮಳೆ ಮಾತ್ರ ದಾಖಲಾಗಿದೆ.

ಶಿವಮೊಗ್ಗ 10.50 ಮಿಮೀ, ಭದ್ರಾವತಿ 8.50 ಮಿಮೀ, ತೀರ್ಥಹಳ್ಳಿ 44.80 ಮಿಮೀ, ಸಾಗರ 57.10 ಮಿಮೀ, ಶಿಕಾರಿಪುರ 10.60 ಮಿಮೀ, ಸೊರಬ 15.20 ಮಿಮೀ ಹಾಗೂ ಹೊಸನಗರ 53.20 ಮಿಮೀ ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ: ಲಿಂಗನಮಕ್ಕಿ:- 1819 ಕ್ಯೂಸೆಕ್​ (ಗರಿಷ್ಠ), ಇಂದಿನ‌ ನೀರಿನ ಮಟ್ಟ- 1742.70 ಕ್ಯೂಸೆಕ್​,‌ ಒಳ ಹರಿವು- 9237.00, ಹೊರ ಹರಿವು( ವಿದ್ಯುತ್)-1677.00 ಕ್ಯೂಸೆಕ್​ ಕಳೆದ ವರ್ಷ ನೀರಿನ ಮಟ್ಟ 1762.10 ಕ್ಯೂಸೆಕ್​.

ಭದ್ರಾ: (ಕ್ಯೂಸೆಕ್​ಗಳಲ್ಲಿ) 186 (ಗರಿಷ್ಠ), ಇಂದಿನ ನೀರಿನ ಮಟ್ಟ- 137.20, ಒಳ ಹರಿವು- 2397.00, ಹೊರ ಹರಿವು- 209.00, ಕಳೆದ ವರ್ಷ ನೀರಿನ ಮಟ್ಟ 158.20.

ತುಂಗಾ: (ಕ್ಯೂಸೆಕ್​ಗಳಲ್ಲಿ) 588.24 (ಗರಿಷ್ಠ), ಇಂದಿನ ನೀರಿನ ಮಟ್ಟ- 587.54, ಒಳ ಹರಿವು- 4830.00, ಹೊರ ಹರಿವು- 50.00. ಕಳೆದ ವರ್ಷ ನೀರಿನ ಮಟ್ಟ 588.24.

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), ಇಂದಿನ ನೀರಿನ ಮಟ್ಟ- 570.96, ಒಳಹರಿವು- 2195 (ಕ್ಯೂಸೆಕ್) ಕಳೆದ ವರ್ಷ ನೀರಿನ ಮಟ್ಟ 572.98

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), ಇಂದಿನ ನೀರಿನ ಮಟ್ಟ- 561.82, ಒಳ ಹರಿವು- 829, ಹೊರ ಹರಿವು- 274.00. ಕಳೆದ ವರ್ಷ ನೀರಿನ ಮಟ್ಟ 562.50.

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), ಇಂದಿನ‌ ನೀರಿನ ಮಟ್ಟ- 565.00, ಒಳ ಹರಿವು- 1541.00 ಕಳೆದ ವರ್ಷ ನೀರಿನ ಮಟ್ಟ 573.00.

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), ಇಂದಿನ ನೀರಿನ ಮಟ್ಟ- 572.78, ಒಳ ಹರಿವು- 1099.00, ಹೊರ ಹರಿವು- 000, ಕಳೆದ ವರ್ಷ ನೀರಿನ ಮಟ್ಟ 576.60 (ಎಂಎಸ್‍ಎಲ್‍ಗಳಲ್ಲಿ).

ತುಂಬಿದ ತುಂಗಾ ಅಣೆಕಟ್ಟು: ರಾಜ್ಯದ ಅತಿ ಚಿಕ್ಕ‌ಅಣೆಕಟ್ಟು ಎಂದರೆ, ಅದು ತುಂಗಾ ಅಣೆಕಟ್ಟು. ಈ ಅಣೆಕಟ್ಟು ಈಗಾಗಲೇ ತುಂಬಿದೆ. ಅಣೆಕಟ್ಟೆಯ ಒಟ್ಟು ಎತ್ತರ 588.24 ಮೀಟರ್. ಹಾಲಿ ಅಣೆಕಟ್ಟೆಯಲ್ಲಿ 587.54 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಅಣೆಕಟ್ಟು ತುಂಬಲು ಒಂದು ಅಡಿ ಮಾತ್ರ ಬಾಕಿ ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಒಳ ಹರಿವು ಚೆನ್ನಾಗಿ ಬರ್ತಾ ಇದೆ.

ಅಣೆಕಟ್ಟು ತುಂಬುತ್ತಿದ್ದಂತಯೇ ಮೊದಲು ಜಲಾಶಯದಲ್ಲಿ ಇರುವ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಬಿಡಲಾಗುತ್ತದೆ. ನಂತರ ಒಳ ಹರಿವು ಇನ್ನಷ್ಟು ಹೆಚ್ಚಾದರೆ, ನದಿಗೆ ಬಿಡಲಾಗುತ್ತದೆ ಎಂದು ತುಂಗಾ ಮೇಲ್ದಂಡೆಯ ಇಂಜಿನಿಯರ್ ತಿಪ್ಪಾನಾಯ್ಕ ಅವರು ಈ ಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಅಪಾಯದಲ್ಲಿದೆ ಸೌಳಿ- ಭೀಮನಕಟ್ಟೆ ತೂಗು ಸೇತುವೆ: ನಿರ್ಲಕ್ಷ್ಯ ಏಕೆ? ನಿರ್ವಹಣೆ ಯಾವಾಗ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.