ಶಿವಮೊಗ್ಗ: ಮೂರು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಕುಡಿಯುವ ನೀರಿನ ಘಟಕವನ್ನು ಇದೀಗ ಸರಿಪಡಿಸಲಾಗಿದೆ.
ಡಿಸೆಂಬರ್ 13ರಂದು ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾದ್ರೆ ಜಿಲ್ಲೆ ಗತಿ ಹೇಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದ್ದ ಈಟಿವಿ ಭಾರತ್ ವರದಿಯಿಂದಾಗಿ ಇದೀಗ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಇರೋ ನೀರಿನ ಘಟಕವನ್ನು ಸರಿಪಡಿಸಿ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾಂದ್ರೆ ಜಿಲ್ಲೆ ಗತಿ ಹೇಗೆ?
2016-17ರಲ್ಲಿ 2.83 ಲಕ್ಷ ರೂ. ವೆಚ್ಚದಲ್ಲಿ ನೀರಿನ ಘಟಕ ನಿರ್ಮಿಸಿ ಫಿಲ್ಟರ್ಗಳನ್ನು ಅಳವಡಿಸಲಾಗಿತ್ತು. ಆದರೆ ಇಲ್ಲಿವರೆಗೂ ಅದಕ್ಕೆ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುವ ನೂರಾರು ಜನರ ದಾಹ ತಣಿಸಬೇಕಿದ್ದ ನೀರಿನ ಘಟಕ ನಿಷ್ಕ್ರಿಯಗೊಂಡಿತ್ತು. ಇದರಿಂದ ಕುಡಿಯುವ ನೀರಿಗೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ಈಟಿವಿ ಭಾರತ ಪ್ರಕಟಿಸಿದ್ದ ವರದಿ ನೋಡಿ ಎಚ್ಚೆತ್ತ ಮಹಾನಗರ ಪಾಲಿಕೆ ಇದೀಗ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಫಿಲ್ಟರ್ ಅಳವಡಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಇದಕ್ಕೆ ಸ್ಥಳೀಯರಾದ ಬಾಲಜಿ ಈಟಿವಿ ಭಾರತ್ಗೆ ಹಾಗೂ ಪಾಲಿಕೆಯವರಿಗೆ ಧನ್ಯವಾದ ಹೇಳಿದ್ದಾರೆ.