ಶಿವಮೊಗ್ಗ: ಭಾರತದಂತಹ ಒಳ್ಳೆಯ ದೇಶದಲ್ಲಿ ಮೋದಿಯಂತಹ ಒಬ್ಬ ರಾಕ್ಷಸ ಪ್ರಧಾನಿಯಾಗಿರುವುದು ನನಗೆ ಕಣ್ಣೀರು ತರಿಸಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಗರದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ, ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಯುದ್ಧದ ಹಪಾಹಪಿ ಜಾಸ್ತಿಯಾಗಿದೆ. ಇದರಿಂದ ಪ್ರತೀ ವರ್ಷ ಯುದ್ಧಕ್ಕಾಗಿ ಬಂದೂಕು, ಟ್ಯಾಂಕರ್ ಗಳನ್ನು ಜಾಸ್ತಿ ಮಾಡ್ತಾ ಇದ್ದಾರೆ ಎಂದು ಅಸಮಧಾನ ಹೊರಹಾಕಿದರು.
ಅಷ್ಟೇ ಅಲ್ಲದೇ, ಪೌರತ್ವ ಕಾಯಿದೆ ತಂದು ದೇಶವನ್ನು ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು ಭಾಗಿಯಾಗಿದ್ದವು.