ETV Bharat / state

ಖಾಸಗಿ ಬಸ್​ ಮುಖಾಮುಖಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಬಿ ವೈ ವಿಜಯೇಂದ್ರ ಸಾಂತ್ವನ - ಶಿವಮೊಗ್ಗ ತಾಲೂಕು ಚೋರಡಿಯ ಕುಮದ್ವತಿ ಸೇತುವೆ

ಶಿವಮೊಗ್ಗ ತಾಲೂಕು ಚೋರಡಿಯ ಕುಮದ್ವತಿ ಸೇತುವೆ ಬಳಿ ಎರಡು ಖಾಸಗಿ ಬಸ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಈಸೂರು ಗ್ರಾಮದ ಅರುಣ್ ಹಾಗೂ ಚಿಕ್ಕಜೋಗಿಹಳ್ಳಿ ಗ್ರಾಮದ ಮಹೇಶ್ವರಪ್ಪ ಮೃತಪಟ್ಟಿದ್ದರು.

B Y Vijayendra, Condolences to the family of the deceased
ಮೃತಪಟ್ಟವರ ಕುಟುಂಬಕ್ಕೆ ಬಿ ವೈ ವಿಜಯೇಂದ್ರ ಸಾಂತ್ವನ
author img

By

Published : May 14, 2023, 7:34 PM IST

ಶಿವಮೊಗ್ಗ: ಎರಡು ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೃತಪಟ್ಟವರ ಕುಟುಂಬಕ್ಕೆ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರು ಸಾಂತ್ವನ ಹೇಳಿದರು.

ಮೇ 11 ರಂದು ಶಿವಮೊಗ್ಗ ತಾಲೂಕು ಚೋರಡಿಯ ಕುಮದ್ವತಿ ಸೇತುವೆ ಬಳಿ ಎರಡು ಬಸ್​ಗಳ ನಡುವೆ ಮುಖಾಮುಖಿ ಅಪಘಾತ ನಡೆದಿತ್ತು. ಅದರಲ್ಲಿ ಬಸ್ ಚಾಲಕ ಸೇರಿ ಪ್ರಯಾಣಿಕರಿಬ್ಬರು ಸಾವನ್ನಪ್ಪಿದ್ದರು. ಅಪಘಾತದಲ್ಲಿ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಅರುಣ್ ಹಾಗೂ ಚಿಕ್ಕಜೋಗಿಹಳ್ಳಿ ಗ್ರಾಮದ ಮಹೇಶ್ವರಪ್ಪ ಮೃತಪಟ್ಟಿದ್ದರು. ಈಸೂರು ಗ್ರಾಮದ ಅರುಣ್ ಅವರ ಮನೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ನೂತನ ಶಾಸಕ ಬಿ. ವೈ. ವಿಜಯೇಂದ್ರ ಭೇಟಿ ನೀಡಿ, ಅರುಣ್ ಅವರ ಪತ್ನಿ ಶ್ರೀಮತಿ ಕುಸುಮಾ ಹಾಗೂ ಅರುಣ್​ ಅವರ ಮಗನಿಗೆ ಸಾಂತ್ವನ ಹೇಳಿದರು.

ಬಳಿಕ ಚಿಕ್ಕಜೋಗಿಹಳ್ಳಿ ಗ್ರಾಮದ ಮೃತ ಮಹೇಶ್ವರಪ್ಪ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಮಹೇಶ್ವರಪ್ಪ ಅವರ ಸಾವಿಗೆ ಕಂಬನಿ‌ ಮಿಡಿದರು. ಇಬ್ಬರು ಪುತ್ರರಿಗೆ ಸಾಂತ್ವನ ಹೇಳಿದರು. ಅಲ್ಲದೇ ಇಬ್ಬರಿಗೂ ಸಹ ಧೈರ್ಯ ತುಂಬಿದರು. ಶಾಸಕ ವಿಜಯೇಂದ್ರ ಅವರಿಗೆ ಕೆ.ಎಸ್. ಗುರುಮೂರ್ತಿ ಸಾಥ್ ನೀಡಿದರು.

ಮೇ 11 ರಂದು ಖಾಸಗಿ ಬಸ್​​ಗಳು ಮುಖಾಮುಖಿ‌ ಡಿಕ್ಕಿಯಾಗಿದ್ದವು. ಬಸ್​​ನ ಚಾಲಕನ ಅವಸರ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಾಲನೆ ಮಾಡಿದ್ದರು ಎಂದು ಪ್ರಯಾಣಿಕರೊಬ್ಬರು ಆರೋಪ ಮಾಡಿದ್ದರು. ಈ ಅಪಘಾತದಲ್ಲಿ ಶಿಕಾರಿಪುರ ತಾಲೂಕಿನ ಇಬ್ಬರು ಹಾಗೂ ಚಿತ್ರದುರ್ಗ ಜಿಲ್ಲೆಯ ಹೊರಕರೆಪುರ ಗ್ರಾಮದ‌ ಒಬ್ಬರು ಸಾವನ್ನಪ್ಪಿದ್ದರು.

ಇದನ್ನೂಓದಿ:ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ, ನಿವೃತ್ತಿ ಅನ್ನೋದೆಲ್ಲ ನಾಟಕ: ವಿ.ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.