ಶಿವಮೊಗ್ಗ: ಚಾಲಕನ ಧಾವಂತಕ್ಕೆ ಖಾಸಗಿ ಬಸ್ಸೊಂದು ಪಲ್ಟಿಯಾಗಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಜಿಲ್ಲೆಯ ಪಿಳ್ಳಂಗಿರಿ ಗ್ರಾಮದ ಬಳಿ ನಡೆದಿದೆ.
ಹೊಸದುರ್ಗ-ಶಿವಮೊಗ್ಗಕ್ಕೆ ಓಡಾಡುವ ಬಸ್ ಪಲ್ಟಿಯಾಗಿದ್ದು, ಹೊಸದುರ್ಗದಿಂದ ಶಿವಮೊಗ್ಗಕ್ಕೆ ಬರುವಾಗ ಜಾವಳ್ಳಿಯಿಂದ ಪಿಳ್ಳಂಗಿರಿ ಬಳಿ ಬರುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಬಸ್ ನಲ್ಲಿ ಸುಮಾರು 52 ಜನ ಪ್ರಯಾಣಿಕರಿದ್ದರು ಎನ್ನಲಾಗ್ತಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.